ಕಣ್ಣಿಂದ ಹುಟ್ಟಿದ ಪ್ರೀತಿ
ಕಣ್ಣೀರಲ್ಲಿ ಕೊನೆಯಾಗಿದೆ
ಬಯಸಿ ಬಂದ ಪ್ರೀತಿ
ದ್ವೇಷದಲ್ಲಿ ಮರೆಯಾಗಿದೆ
ಆದರೆ
ಕೋಪದಿಂದ ಶುರುವಾದ ಪ್ರೀತಿ
ಶಾಶ್ವತವಾಗಿ ಉಳಿದಿದೆ-
ಅಣ್ಣನ ಪ್ರೀತಿಯ ತಂಗಿ
ಯಾರದೋ ಸ್ವಾರ್ಥಕ್ಕಾಗಿ ಕನಸುಗಳು ಗುಂಡಿನ ದಾಳಿಗೆ ಸಿಕ್ಕಿ ಸಾಯುತ್ತಿವೆ ಜೊತೆಗೆ ಕನಸು ಕಂಡ ಕಣ್ಣುಗಳು ಮುಚ್ಚುತ್ತಿವೇ ಕನಸನ್ನು ನನಸು ಮಾಡಲು ಸಹಾಯ ಮಾಡುವ ಕಣ್ಣುಗಳಲ್ಲಿ ಕಣ್ಣೀರಧಾರೆಯೇ ಸುರಿಯುತ್ತಿದೆ
-
ಅಲ್ಪರ ಮಾತಿಗೆ ಸುಮ್ಮನೆ ತಲೆಕೆಡಿಸಿಕೊಳ್ಳುವುದನ್ನು ಮರೆತು ನಮ್ಮವರ ಬಗ್ಗೆ ಮಾತ್ರ ಚಿಂತಿಸಬೇಕು
-
ಪ್ರಪಂಚದಲ್ಲಿ ನಾವು ಯಾರನ್ನು ಹೆಚ್ಚೂ ನಂಬಿರುತ್ತೇವೋ ಅವರಿಂದಲೇ ಮೋಸ ಹೋಗುತ್ತೇವೆ ಆದ್ದರಿಂದ ಅವರು ಒಳ್ಳೆಯವರಂತೆ ನಟಿಸಿದರೆ ನಾವು ನಂಬಿರುವಂತೆ ನಟಿಸಬೇಕು
-
ಆದರೆ ಯಾವಾಗ,ಎಲ್ಲಿ,ಯಾರ ಮುಂದೆ ತಲೆ ಬಾಗಿ ಕ್ಷಮೆ ಕೇಳಬೇಕೆಂಬುದನ್ನೂ ಚೆನ್ನಾಗಿ ಅರಿತಿರಬೇಕು
-
ನಿಮ್ಮ ಶತೃಗಳನ್ನೂ ಯಾವಾಗಲೂ ಮನಸಿನಲ್ಲಿ ಇರಿಸಿ ಏಕೆಂದರೆ ನಿಮ್ಮ ಸಾದನೆಗೆ ಅವರು ಕಾರಣರಾಗಬಹುದು ಆದರೆ ನಿಮ್ಮ ಸ್ನೇಹಿತರೆಂದು ನಟಿಸುವವರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಇರಿಸಿ ಏಕೆಂದರೆ ನಿಮ್ಮ ಸೋಲಿಗೆ ಮುಖ್ಯ ಕಾರಣ ಅವರೇ ಆಗಿರಬಹುದು
-
ಹುಟ್ಟಿದ್ದು ಅರಮನೆಯಲ್ಲಾದರೂ ಗರ್ವ ಇಲ್ಲ
ನಗುವಿನ ಆ ಮುಖಕ್ಕೆ ಸೋತವರೆ ಎಲ್ಲ
ಗುಣದಲ್ಲಿ ತಂದೆಯನ್ನೇ ಹೋಲುವ
ಹೃದಯ ಶ್ರೀಮಂತಿಕೆ ಉಳ್ಳವ
ನಗು ಮುಖದ ಸರದಾರ-
ನಿಮ್ಮ ಜೀವನದ ಸಂತೋಷ ಬೇರೆ ಎಲ್ಲೂ ಇಲ್ಲ ಅದು ನಿಮ್ಮಯೋಚನೆಯಲ್ಲಿದೆ ಆದ್ದರಿಂದ ಯೋಚನೆ ಎಂದಿಗೂ ಒಳ್ಳೆಯದಾಗಿರಲಿ
-