ಉತ್ತರವಿಲ್ಲದ ಪ್ರಶ್ನೆ
ಚಂದ್ರನಿಲ್ಲದ ನಕ್ಷತ್ರ
ನಿರೀರದ ಮರುಭೂಮಿ
ಎಲ್ಲವೂ ಶೂನ್ಯ-
ಕೃಷ್ಣನ ಪರಮಭಕ್ತೆ..
ಕನ್ನಡ ಭಾಷೆ ನಮ್ ಬದ್ಕು
ಕಲಿಕೆ ನಲಿಕೆ ಎಲ್ಲವೂ ಕನ್ನ... read more
ಕೃಷ್ಣ ನಿನ್ನ ಕೊಳಲ ನಾದವೆ ಈ ರಾಧೆಗೆ ಒಲವ ಸುಧೆಯಂತೆ
ಆ ಒಲವ ಸುಧೆಯಲ್ಲೆ ನನ್ನ ಪ್ರೀತಿ ಪರಮ ಪೂಜ್ಯವಂತೆ-
ದೇಹ ಬೇರಾದರೂ ಉಸಿರಿರುವರೆಗೂ ಜೀವ ಒಂದೆ ಮಾಧವ
ನೀ ಉಸಿರಿಸೊ ಪ್ರತಿ ಕೊಳಲ ನಾದವು ಪ್ರತಿ ಬಾರಿ ನನ್ನ ಭಾವ ತರಂಗವ ವಿವರಿಸುತ್ತಿದೆ-
ಪ್ರೀತಿ ಒಂದು ಏಕಾಭಿನಯ ಪಾತ್ರ ಇದ್ದಂಗೆ,
ಬಣ್ಣ ಹಚ್ಚಿ ನಾಟಕ ಆಡಿಸೋರೆ ಒಬ್ಬರು,
ಮನಬಿಚ್ಚಿ ನಾಟಕವನ್ನು ನೋಡೋರೆ ಇನ್ನೊಬ್ಬರು,
ನಾಟಕ ಆಡಿದಷ್ಟು ಚಪ್ಪಾಳೆ ಸದ್ದು,
ನಾಟಕ ನಿಂತರೆ ಹೊಸ ನಾಟಕ ಮತ್ತೆ ಶುರು-
ನಿದ್ದೆಯಲಿ ಕನಸಾಗಿ
ಎದ್ದಾಗ
ನೆನಪಾಗಿ
ಉಸಿರಲ್ಲಿ ಉಸಿರಾಗಿ
ನರನಾಡಿ ಸಂಚರಿಸಿ
ನೀ ಕಾಡುತಿರಲನುದಿನವು
ಮರೆವೆಂಬುದು
ಮರೀಚಿಕೆಯಾಯ್ತಲ್ಲ ಗೆಳೆಯಾ ....-
ನಾ ನಿನ್ನ ಪ್ರೇಮದ ಪರದೆಗೆ ಸಿಕ್ಕಾಗಲೇ ನೂರಾರು ಬಣ್ಣ ಬಣ್ಣಿಕೆಯ ಸಂತಸದ್ಹರಿಯುವಿನಲಿ ನೆಂದು ಅನಾವರಣವಾಗಿದ್ದು
ಮೂಕ ಮೌಖಿಕವಾಗಿದ ಮುತ್ತಿನಲೆಯ ಮೇಲೆ ಕಿರಣಕೂ ಹೆದರದೆ ಅಂಟಿಕೊಂಡ ನವಭಾವಕೆ ನಾ ಎದೆಯಾದದ್ದು ಎಲ್ಲರೊಳಗೊಬ್ಬಳಾಗಿ ಎಲ್ಲರಂತಾಗಾದೆ ಉಳಿದು ಕಳೆದದ್ದು-
ಕನಸುಗಳು ಒಂಥರ ಪತಂಗ ಇದ್ದಾಂಗೆ
ಸೂತ್ರ ಇರೋ ತನಕ ಮಿತಿ ಮೀರಿ ಹಾರ್ತಿರುತ್ತೆ
ಸೂತ್ರ ಕಳಚಿ ಬಿದ್ದಾಗ ತನ್ನ ವಾಸ್ತವತೆ ಅರ್ಥ ಆಗುತ್ತೆ-
ಏಕಾಂಗಿಯ ಎದೆಯ ತುಂಬಾ
ನೋವಿನ ಬಲುಕು
ನಡು ದಾರಿಯಲ್ಲಿ ನಿಂತ
ಬಡಪಾಯಿ ಈ ಬದುಕು-