Boys : ಎಷ್ಟು ಜನ ಹಳೇ ಡೌವ್ ಗಳಿದ್ರು ಅಂಥ ಹೇಳ್ಕೊಂಡು ಖುಷಿ ಪಡ್ತಾರೇ
Girls : at Present ಎಷ್ಟು ಜನ ಲವ್ ಮಾಡ್ತಾ ಇದಾರೆ ಅಂಥ ಹೇಳ್ಕೊಂಡು ಖುಷಿ ಪಡ್ತಾರೇ...
You & Mee : "ನಿಮ್ಗ್ ಯಾಕ್ ಬೇಕ್ ಅವೆಲ್ಲ"
ಅಂಥಹೇಳ್ಕೊಂಡು ಖುಷಿ ಪಡ್ತಿವೀ
🤣🤣🤣
-
ಅಗಣಿತ ನೋವುಗಳಾ
ನಡುವಿನಲೀ...
ಅವಳ ನೆನಪುಗಳ
ಚುಕ್ಕಿ ತಾರೆಗಳಾ ಕೂಡಿ
ಕಳೆವುದಾ ಹೇಳಿಕೊಟ್ಟಿದ್ದೆ
ಈ ಬದುಕಿನ ಗಣಿತ...
ನಾನೀಗ ಅದರಲೀ ಅತೀ ಪರಿಣಿತ...-
ಹೀಗೇ ಕೆಲವು ಬಾರಿ ಮಧ್ಯರಾತ್ರಿ 3 ರ ಆಸುಪಾಸಿನಲ್ಲಿ ಎಚ್ಚರವಾಗಿಬಿಟ್ಟರೇ ಮತ್ತೆ ನಿದ್ದೆ ಬರುವುದು ಅನುಮಾನವೇ ಸರಿ. ಹೋಗಲಿ ಎದ್ದು ವಾಕಿಂಗ್ ಹೋಗೋಣವೆಂದರೇ ಅದು ಮಧ್ಯರಾತ್ರಿ ಕರ್ಮ. ಆಗಲೇ ಕಿಟಕಿಯ ಪರದೆ ಸರಸಿ ಆ ಚಂದ್ರಮನ ಬೆಳದಿಂಗಳು ನನ್ನ ಮುದ್ದು ಬೆಂಗಳೂರನ್ನೇ ತಬ್ಬಿ ಸುಖ ನಿದ್ದೆಯ ಮಡಿಲಲ್ಲಿ ಮಲಗಿಸಿರುವ ದೃಶ್ಯವನ್ನು ನೋಡುವುದೊಂತರಹ ಮನಮೋಹಕ. ಆ ಸಮಯದಲ್ಲೇ ಬದುಕು/ ಹೊಟ್ಟೆ ಪಾಡಿನ ಜಂಜಾಟದಲ್ಲಿ ಮರೆತುಹೋದ ಧೂಳು/ಮಂಕು ಹಿಡಿದ ನನ್ನೆಲ್ಲಾ ಲೇಖನ/ಕವನ/ಬರಹಗಳಿಗೆ ಜೀವದಾನ. ಆಗಲೇ ನನ್ನ ನೆನಪುಗಳೆಲ್ಲ ತಾವು ಹೊದ್ದ ಸೋಮಾರಿತನದ ಜಿಗುಟುಗಳೆನ್ನೆಲಾ ಜಾಡಿಸಿ ಲವಲವಿಕೆಯಿಂದ ಕಣ್ಣ ಮುಂದೆ ಓಡುವುದು. ಕೆಲವನ್ನು ಹೆಕ್ಕೀ ಕೆಲವನ್ನು ಜಾರಿಸಿ ಕೈಬಿಡುವುದೋ ನಿರ್ಧರಿಸಿ ಬರಹಗಳಿಗೆ ಜೀವ ತುಂಬುವುದು ಮಾತ್ರ ಕಾಲವೇ. ಬರಹಗಳಿಗು ಹಣೆಬರಹ ಬರೆಯುವವನು ಕವಿಯೆ ಇರಬೇಕು, ನಾನಂತು ಪಾಮರ ನನಗಂತೂ ತಿಳಿದಿಲ್ಲ. ಇತ್ತಿಚೆಗೆ ನನ್ನ ಮಚ್ಚ ಹೇಳಿದ i Don't Want To Regrets My Decisions ಅನ್ನೊ ವಾಕ್ಯದಿಂದ ಹಿಡಿದು ಗಡಿ, ಭಾಷೇ, ಬಂಧನದ ಪರಿಧಿಗಳ ಹಂಗನ್ನು ತೊರೆದು ನನ್ನ ಪ್ರೀತಿಸಿದ ನನ್ನ ನೀಲೀ ಕಣ್ಣ ಹುಡುಗಿಯ ಮನೆ ಅವರ ದೇವಸ್ಥಾನ, ದೇವಸ್ಥಾನದ ಆನೆಯ ಮಮತೆ, ಅದರ ಸೊಂಡಿಲಿನ ಬೆಚ್ಚನೆ ಭಾವಗಳೆಲ್ಲದರವರೆಗೂ ಏಕಾಏಕಿ ಮೆದುಳಿನ ಮೇಲೇ ದಾಳಿ ಇಟ್ಟು ಭಾವಗಳೆಲ್ಲಾ ಚೆಲ್ಲಾ ಪಿಲ್ಲಿಮಾಡಿ ಭಾವನೆಗಳೇ ಇರದಂತೆ ನಿರ್ಲಿಪ್ತ ಸ್ಥಿತಿಗೆ ಜಾರಿಹೋಗುತ್ತಿದ್ದೇನೇ ಎಂಬಂತ ವಾತಾವರಣ ಸೃಷ್ಟಿಸಿ ಬಿಡುತ್ತದೆ. ಆದರೂ ಅದನೆಲ್ಲ ಹೆಕ್ಕಿ ಕೊಲಾಜ್ ಮಾಡುವ ರೀತಿಯಲ್ಲೆ ಅಕ್ಷರಗಳನ್ನು ಪೋಣಿಸಲು ಶುರು ಮಾಡಿರುತ್ತೇನೇ.
ಎಲ್ಲವನ್ನೂ ಗೀಚೀ ಒಟ್ಟಿಗೆ ಇಟ್ಟ ಬರಹಗಳಲ್ಲಿ ಆಯ್ದಾ ಭಾಗ ಇದು
ನಿಶೆಯಲ್ಲಿ ಅಕ್ಷರಗಳ ಮೆರವಣಿಗೆ.-
ಯಾರ ಮೇಲಾದರೂ
ಯಾವುದೇ ಥರ ಪ್ರೀತೀ ಇದ್ದರು
ಆ ಪ್ರೀತೀನಾ ಇವತ್ತೇ ಹೇಳ್ಕೊಂಡು ಬಿಡಿ...
ಯಾಕೆ ಅಂದ್ರೆ ಜೀವನ ಕ್ಷಣಿಕ
ಇವತ್ತಿದ್ದವರು ನಾಳೇ ಹೆಣ...
ಆ ಹೆಣದ ಮುಂದೆ ನೀವು ನಿಮ್ಮ
ಪ್ರೀತಿನಾ ಹೇಳ್ಕೊಂಡ್ರು ಅಷ್ಟೇ ಬಿಟ್ರು ಅಷ್ಟೇ...-
Priorities always matter.
When you are their priority,
they will serve you first.-
No need to explain yourself to everyone,
If they want they will Learn / know about you.
Head weight people learn Good lesson in End...-
ಏನೇನು ತಿಳಿಯದ ವಯಸಲ್ಲೆ ಬದುಕು ಕಿತ್ತುಕೊಂಡಿದ್ದು ಅಪ್ಪನ ಸಾವು
ಆಡುವ ವಯಸಲ್ಲೇ ಅಕ್ಕರೆಯ ಅಕ್ಕನ ಬೇರ್ಪಡಿಸಿ ಮುನ್ನಡೆಸಿದ್ದು ಕಾಲ
ವಿಧಿ ವಿಲಾಸ ಆಡಿಸಿದ ಆಟ ಹೋಗಲಿ ಬಿಡು ಎಂದು ನಿರಾಳವಾಗುವು ಮುನ್ನವೇ ನಡೆದಿದ್ದು ನನ್ನೆಲ್ಲಾ ಕವನ - ಬರಹಗಳಾ ಸಮೇತ ನನ್ನ ಪ್ರೀತಿಯ ನಿರ್ಗಮನ...
ಕಾಣದ ಕರೋನ ಕಸಿದಿದ್ದು ಕಂಡು ಕಂಡಿದ್ದೆಲ್ಲಾ ಬದುಕಲ್ಲಿ ಇದ್ದಿದ್ದೆಲ್ಲವಾ...
ಎಲ್ಲವೂ ಹೋಗಲಿ ನಿನಗೇ ನಾನೂ ನನಗೇ ನೀನೂ ಎನ್ನುವಾ ಮುನ್ನವೇ ಕಂಗೆಡಿಸಿದ್ದು ಅಮ್ಮನ ಸಾವು...
ಕಡೆಗೇ ಉಳಿದಿದ್ದು ನನ್ನೊಳಗಿನ ನಾನಷ್ಟೆ...
ನನಗೆ ನನ್ನ ನೋವುಗಳಷ್ಟೇ...
ಶಿವ-ಕೃಷ್ಣನ ಮೇಲೆ ಚಿಕ್ಕ ಭಕ್ತಿಯಷ್ಟೆ...-
ನೋವಿಗೂ ನಲಿವಿಗೂ ಮೌನದ ಲೇಪನ...
ಮಾತಿಗು ಮನಸಿಗೂ ತೀರದ ಬಂಧನ...
ಕಾಣದ ಕವಲು ದಾರಿಯಲಿ ಕಣ್ಣೀರ ಸಿಂಚನ
ಮುಗಿಯದ ಪಯಣಕೆ ಸಮಯದ ಸ್ಪಂದನ...-