ವಸ್ತುವಾಗಲಿ ವ್ಯಕ್ತಿಯಾಗಲಿ ಯಾವುದೇ ಕಷ್ಟ ಇಲ್ಲದೆ
ಸುಲಭವಾಗಿ ದಕ್ಕುತ್ತೆ ಅಂದ್ರೆ ಆ ವಸ್ತು ಅಥವಾ ವ್ಯಕ್ತಿಯ ಮೇಲಿನ ತಾತ್ಸಾರ ಅತಿಯಾಗಿನೆ ಇರುತ್ತೆ.
ಇದ್ದಾಗಲೇ ಅರ್ಥ ಮಾಡ್ಕೋಬೇಕು ಪ್ರತಿಯೊಂದರ ಮಹತ್ವವನ್ನು.
ಅಷ್ಟು ಇಲ್ಲದೆ ಗಾದೆ ಮಾಡಿಲ್ಲ, "ಮಿಂಚಿ ಹೋದ ಕ್ಷಣವನ್ನು ಚಿಂತಿಸಿ ಫಲವಿಲ್ಲ" ಅಂತ.-
ಹಲವು ಬಾರಿ ಪರಿಸ್ಥಿತಿ ಹೇಗ್ ಇರುತ್ತೆ ಅಂದರೆ,
ನಮ್ಮದ್ದಲ್ಲದ ತಪ್ಪಿಗೆ ನಾವ್ ಶಿಕ್ಷೆ ಅನುಭವಿಸೋ
ಥರ ಇರುತ್ತೇ.
ಇನ್ನು ಹಲವು ಬಾರಿ ಬೇಕಾದದ್ದು ದೊರೆಕದೆ ಇದ್ದಾಗ
ಅದನ್ನ ಪಡೆದುಕೊಳ್ಳೋಕೆ ಕೇಳಿದ್ರು ಕೂಡ
ಶಿಕ್ಷೆ ನಮಗೇನೆ ಆಗುತ್ತೆ.
-
ನಾನು ಎಂಬ ಅಹಂನಾ ಕಿಚ್ಚು ನಮ್ಮನ್ನೇ
ಸುಡೋದು ನೆರೆಮನೆಯವರನ್ನಲ್ಲ!
ಹಾಗೇ,ಬಡವನು ಮಣ್ಣಿಗೆ,ಸಿರಿವಂತನ
ಅಂತ್ಯವೂ ಸಹ: ಮಣ್ಣಿಗೆ.
ಮಾತುಗಳು ಹೃದಯ ಮುಟ್ಟಬೇಕೋ ಹೊರತು,ಇನ್ನೊಬ್ಬರೇದೆಯ ಸ್ವಾಭಿಮಾನದ ಕದನಾ ಎಂದೂ ತಟ್ಟುಬಾರದು...
ಸ್ವಾರ್ಥಕ್ಕಿಂತ ಸ್ವಾಭಿಮಾನವೇ ದೊಡ್ಡದು.-
*ಹೊಂಗಿರಣಕ್ಕೊಂದು ನುಡಿ-6*
ಶ್ರೇಷ್ಠ
ನಮ್ಮದಲ್ಲದ ಕಾರ್ಯದಲ್ಲಿ ನಮ್ಮ
ಹಸ್ತಕ್ಷೇಪವಿದ್ದರೂ ಸೈ,ಹಸ್ತಕ್ಷೇಪವಿರದಿದ್ದರೂ ಸೈ,
ನಾಲಿಗೆಗೊಂದು ಮಾತು ನಮ್ಮತ್ತ ಉರುಳುವುದು ಸಹಜ!
ಮಾತು ಎಲ್ಲ ಸಮಯದಲ್ಲಿಯೂ ಸೂಕ್ತವಲ್ಲ.
ಅಂತೆಯೇ ಮೌನವು ಸಹ: ಎಲ್ಲ ಸಂಧರ್ಭದಲ್ಲಿಯೂ ಶ್ರೇಷ್ಠವಲ್ಲ.
-
ಸಣ್ಣ-ಪುಟ್ಟ ತಗಾದೆಗಳಲ್ಲಿ ನೀ ನನ್ನತ್ತ ಬೀರುವ ಅಪರಿಚಿತ ನೋಟ ಕುಗ್ಗಿಸುವುದರ ಬದಲು ಸಾಯಿಸಿಬಿಡುತ್ತದೆ!ನೀ ನಿಂದಿಸಿದರದೂ ನಂಗೆ ನಗುವಾಗಬೇಕು,ನಾ ಸಿಡುಕಿದರೆ ಅದು ನಿನಗೆ ನೋವಾಗಿಬಿಡುತ್ತೆ.ಹೇಳುವ ಸ್ಥಾನ ನನ್ನದಲ್ಲ,ಕೇಳುವ ಸ್ಥಾನ ನನ್ನದಷ್ಟೇ!ಎಲ್ಲವೂ ನೆನಪಾಗಿಬಿಟ್ಟರೆ ಗಾಳಿಗೊಮ್ಮೆ ಹೀಗೆ ಮೈಕೊಡವಿ ಕೂತುಬಿಡಬೇಕು ಅನಿಸುತ್ತದೆ!— % &
-
ಕಾಯಿಸಿ ಕಾಡಿಸಿದಷ್ಟೂ ನೋಯೋದು ಜಾಸ್ತಿ.
ಒಮ್ಮೊಮ್ಮೆ ಕಳೆದುಕೊಂಡಿದ್ದೆ ಮುತ್ತಾಗಿರುತ್ತೆ,ಮತ್ತಾಗಿರುತ್ತೆ!ಆ ಮುತ್ತು ಮತ್ತೆಂದೂ ಸಿಗೋದಿಲ್ಲ.
ಇರೋದನ್ನ ಇದ್ದಾಗಲೇ ಎಷ್ಟು ಆಗುತ್ತೋ ಅಷ್ಟು ಪ್ರೀತಿಸಬಿಡಬೇಕು...— % &-
ಅಬ್ಬಾ!
ನೆರಿಗೆಯ ಗತ್ತಿನಿಂದ ಅಂದವೋ,
ಹುಟ್ಟ ನವಿಲೂರ ಹೆಣ್ಣ ನಿಷ್ಕಲ್ಮಶ ಭಾವವೋ,ಕಾಣೆ!
ಮಿಂಚಂತೆ ಸುಳಿವ ಆ ನಗುವ ಸೆಲೆ
ಅರೆಕ್ಷಣಕ್ಕಾದ್ರು ಅಪರಿಚಿತರನ್ನು ಸೆಳೆದುಬಿಡುತ್ತದೆ ನೋಡಿ!
ಅದೇ ಕಣ್ರೀ ನಿಷ್ಕಲ್ಮಶತೆ ಮೋಡಿ— % &-
ಸುರಿವ ಹನಿಗಳೋಡನೆ
ಬಿಸಿಬೆರೆತ ಅಧರಗಳಲ್ಲಿ
ಹುಟ್ಟುವ ಉನ್ಮಾದ
ಆ ಕ್ಷಣಕ್ಕೆ ಬದುಕನ್ನು
ಝಲ್ ಅನಿಸಿಬಿಡುತ್ತದೆ. — % &-
ನನ್ನದು ಅನ್ನೋದು ಎನ್ ಇದಿಯೋ ಅದು ನನಗೋಸ್ಕರ,ನನಗಾಗಿ ಕಾಯ್ತಾ ಇರುತ್ತೆ.
ಸ್ವಲ್ಪ ತಾಳ್ಮೆ,ಮತ್ತು ಸ್ವಲ್ಪ ಶ್ರಮವಹಿಸಬೇಕು ಅಷ್ಟೇ.
ಯಾವುದು ನನ್ನದಲ್ಲವೋ ಅದು ನನ್ನ ಕಣ್ಣ ಮುಂದೆ ಇದ್ರು ದೊರೆಯಲ್ಲ.
ಆಗ ಎಷ್ಟೇ ಶ್ರಮವಹಿಸಿದ್ರು ಮನಸು
ಚಂಚಲಗೊಂಡು ಬುದ್ಧಿಹೀನವಾಗಿ ಬಿಡುತ್ತೆ.
ತಾಳ್ಮೆ ಮತ್ತು ಮೌನ ಸದೃಢ ಮನದ ಬುನಾದಿಗೆ ತಳಪಾಯ.
-
ಬದುಕಿನಂಗಳದಲ್ಲಿ ತೀರಾ ಹತ್ತಿರಕ್ಕೆ
ಬಂದು ನಿಂತಾಗ ಆಗೋ ಸಣ್ಣ ವ್ಯತ್ಯಾಸಗಳು
ಮನಸ್ಸನ್ನ ವಿಚಲಿತಗೊಳಿಸ್ತಾವೇ!
ಆದ್ರೆ ಆ ಸಣ್ಣ ಸಣ್ಣ ವ್ಯತ್ಯಾಸಗಳು
ಬದುಕಿನ ಗಟ್ಟಿತನವನ್ನ ಬಿರುಸುಗೊಳಿಸುವಲ್ಲಿ
ಸಹಕಾರ ನೀಡ್ತಾವೆ.-