ಕನ್ನಡ ಮಲ್ಲಿಗೆ   (ಲಕ್ಷ್ಮಣ್ ಗೊಲ್ಲರ್ ✍️)
136 Followers · 5 Following

read more
Joined 18 July 2018


read more
Joined 18 July 2018

"ಪ್ರೇಮ ಕಥನ"
ನಾ ನಿನ್ನೆ ರಾತ್ರಿ ಕನಸೊಂದು ಕಂಡಿದ್ದೆ
ಆ ಕನಸಿನಲ್ಲೊಂದು ಗುಡೊಂದು ಕಟ್ಟಿದ್ದೆ
ಆ ಗುಡಿಗೆ ಬುತ್ತಿ ತಂಗೊಂಡು ಬಂದಾಕಿ ನೀನೇನ್?
ಕತ್ತಲಿನಲ್ಲಿ ಸರಿಯಾಗಿ ಏನು ಕಾಣಲಿಲ್ಲ, ನನ್ನ ಬೆನ್ನಿಂದೆ ಗಟ್ಟಿಯಾಗಿ ತಬ್ಬಿಕೊಂಡು ಬಚ್ಚಿಟ್ಟುಕೊಂಡವಳ ಮಾರಿ...
ಅದ್ಕೆ ಕೇಳ್ದೆ ಅದು ನೀನೇನ್?

-



*ಭಾವ ಗೀತೆ*
ಎದೆಯ ತುಂಬಾ ನಿನದೇ
ಗುಡಿನೊಳಗೂ ಕನಸಿದೆ
ನೀ ಕಾಣದೆ ಇದ್ರೆ..
ನಾನು ಹೇಗೆ... ಇರಲೇ
ತಳಮಳ ತಳಕಾಡಿ
ಸಂಕಟದೊಳಗು ನರಳಾಡಿ
ಜೀವ ಹಿಡಿದು ಕುಂತಿದೆ
ನಿನ್ನ ಬರುವಿಕೆಗಾಗಿ....||•

ಚುಕ್ಕಿ ಮಿನುಗುವುದು ಕಾಣದೆ
ಹಕ್ಕಿ ಹಾರದೆ ಕುಳಿತಿದೆ
ಭಾವನೆಗಳ ರೆಕ್ಕೆ.. ಕಟ್ಟಿ
ಸುಮ್ಮನೆ ಹೊರಟು ಹೋದರೆ
ಏನು ಎಂದು ತಿಳಿಯದೇ
ಗೊಂದಲಗಳ ಬಂಧಿಯಾಗಿ
ಚಿಂತೆಯೊಳಗು ಚಿತೆಯಾಗಿ
ಬತ್ತಿ ಹೋಗುತ್ತಿದೆ.. ಜೀವ||•

ಅಚ್ಚ ಹಸಿರ ಮಲ್ಲಿಗೆ
ಸ್ವಚ್ಛ ಗಾಳಿಯಾಡದೆ
ನಿಂತ ನೀರಿನಂತೆ ಹರಿದು ಹೋಗದೆ..
ನಿಂತು ಕೊಂಡೆ ಏಕೆ?
ಹೇಳು ಮನವೇ...
ಒಲವೇ ನಿನ್ನ ಆಸರೆ
ನನ್ನಗೆ ಹೀಗ ಬೇಕಿದೆ
ಬಂದು ಸೇರು ನನ್ನ
ಬಹುಬೇಗ.........||•

-



ಕೊಟ್ಟರೆ ನೀ ನನ್ನಗೆ, ನಿನ್ನ ಕೊರಳಿಗೆ ತಾಳಿ ಕಟ್ಟುವ ಅಧಿಕಾರ
ಸಪ್ತಪದಿ ತುಳಿದು ಹೊತ್ತೊಯ್ಯುವೆ ನಾನು ನಿನ್ನ ಹೃದಯದ ಸಾವುಕಾರ.
-ಲಕ್ಷ್ಮಣ್ ಗೊಲ್ಲರ್ ✍️

-



ಕೊಟ್ಟರೆ ನಿ ನನ್ನಗೆ ಪತಿಯ ಅಧಿಕಾರ
ಕಣ್ತುಂಬಿ ನೋಡುವೆ ನಿನ್ನ ಸೌಂದರ್ಯದ ಅಲಂಕಾರ.
-ಲಕ್ಷ್ಮಣ್ ಗೊಲ್ಲರ್ ನಾಗೇಶನಹಳ್ಳಿ (ಕೊಪ್ಪಳ)

-



ಒಲವೆಂಬ ಸುಂದರ ಕಾಯ,
ಮನಸ್ಸೇಂಬುದು
ಅಂತರಂಗದ ಮಾಯೆ;
ಅರಿಯೆ ನೀ,ಅರಿ.

-



*ನಡುರಾತ್ರಿ ಕವನ*
ನೀ ಜಾರಿ ಬೀಳುವ ಮಂಜಿನ
ಕನಸಾಗಿರುವೆ..
ನಾ ನಿನ್ನನ್ನು ಬೆಚ್ಚನೆಯಾಗಿ
ಎದೆಗಪ್ಪಿ ಬಚ್ಚಿಡುವೆ...
ಬೆಳದಿಂಗಳ ಮೋಡಗಳ
ತಣ್ಣನೆ ಗಾಳಿಯ ಚಳಿಗೆ
ನೀ ನಡುಗುತ್ತಾ ನಕ್ಷತ್ರಗಳ ಮಿನುಗು
ಚಂದ್ರನನ್ನು ನೀಇಣುಕಿ ನೋಡುವಾಗ..
ನಾ ಕಂಬಳಿಯಂತೆ ನಿನ್ನ ಮೈಯೆಲ್ಲಾ
ಒದ್ದು ಬೆಚ್ಚಗೆ ಇಡುತ್ತಾ ಜೊತೆಯಾಗಿ
ಈ ಸೌಂದರ್ಯವನ್ನು ಸವಿಯುವೇ...
ಸದಾ ನಾ ನಿನ್ನೊಟ್ಟಿಗೆ ಜೊತೆಯಾಗಿ ಇರುವೆ.

-



ಎಲ್ಲವೂ ಬರಿ ಹುಚ್ಚು ಕಲ್ಪನೆ ಪರಿಶುದ್ಧ ಪ್ರೀತಿ ಪ್ರೇಮ
ಸ್ನೇಹ ಸಂಬಂಧಗಳು ಈ ಮೂಕ ಪ್ರಾಣಿಗಳ ಪ್ರೀತಿಗಿಂತ..

-



ನಡುರಾತ್ರಿ
ನಿದ್ದೆಯಿಲ್ಲದೆ
ನಿನ್ನ ಗುಂಗಿನಲ್ಲಿ
ನಿನ್ನದೇ ನೆನಪು
ನೆನೆದು ನೆನೆದು
ನೇತಾಡುತ್ತಿವೆ
ನೀ ಕಟ್ಟಿ ಹೋದ
ನೆನಪಿನ ಕನಸುಗಳು.

-



ಗೌರಿ ಗೌರಿ
ನನ್ನ ಗೌರಿ
ಬೇಗ ಬಾರೇ..

ನೀನುಟ್ಟ ಸೀರೆ
ಈ ಬೆಳದಿಂಗಳ ನೋಡಿ
ನಾಚಿ ಓಡುವುದು ಯಾಕೆ
ನೀ ಹೇಳೇ...

ಮೈಸೂರು ಮಲ್ಲಿಗೆ
ಮುಡ್ಕೊಂಡು ಹಸಿರು
ಗಾಜಿನ ಬಳೆಯತೊಟ್ಟು
ಕಾಲ್ಗೆಜ್ಜೆಯ ಹೆಜ್ಜೆ ಹಾಕುತ್ತಾ
ಆರತಿ ತಟ್ಟೆ ಹಿಡಿದುಕೊಂಡು
ಬಾರೇ ಗೌರಿ ನಮ್ಮ ಮನೆಗೆ...

ಸ್ವಲ್ಪನಾದ್ರೂ ಉಪಚರಿಸು
ಇಲ್ಲಾಂದ್ರೆ ಅಪಹರಿಸು
ಹಿಂದೆ ಮುಂದೆ ನೋಡದೆ
ನಿನ್ನೊಟ್ಟಿಗೆ ಬರುವೆ
ಈ ಮುದ್ದು ಹುಡ್ಗನ
ಪ್ರತಿಕ್ಷಣವೂ ಪ್ರೀತಿಸು...

-



ನೀ ನಗುತಿದ್ದರೆ ಒಂದು ಕಳೆ..
ನೀ ನನ್ನ ನೋಡುತ್ತಿದ್ದರೆ
ಏನೋ ಒಂದು ಸೆಳೆ
ಮನಸ್ಸಿನ ಭಾವನೆಯೊಳಗೆ...
ಮುಗಿಲಿಗೂ ಮಿಂಚು ಬಳಿಯುವ
ನಿನ್ನ ಕೈಯ ಬಳೆ..
ಹಚ್ಚು ಬಾರೇ ದೀಪವನ್ನಿಡಿದು
ನಮ್ಮನೆ ಓಲೆ....

-


Fetching ಕನ್ನಡ ಮಲ್ಲಿಗೆ Quotes