ಕಂಬದ ಗೊಂಬೆ   (...✍︎ಚೈತ್ರ(ಕಂ ಗೊಂ))
250 Followers · 108 Following

read more
Joined 12 October 2018


read more
Joined 12 October 2018
3 NOV 2021 AT 22:53

ಬತ್ತಿ ಒಸೆದಂತೆ ಬೆಸೆದ ಭಾವನೆಗಳನೆಲ್ಲ
ಎಣ್ಣೆಯಂತೆ ಹರಿವ ಮನಸ್ಸಿನಲಿ ಮಿಂದು
ಬೆಳಕಂತೆ ಬತ್ತದ ಪ್ರೀತಿ ಹಂಚುವ.


ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು✨️

-


27 OCT 2020 AT 22:09

ಪ್ರತಿ ಬಾರಿ ಗೆದ್ದಾಗ ಸಿಕ್ಕ ಖುಷಿಗಿಂತ,
ಪ್ರಥಮ ಬಾರಿ ಗೆದ್ದ ಖುಷಿಯೇ ಮೇಲು..

-


25 OCT 2020 AT 12:26

ಒಡೆದ ಮಾತ್ರಕ್ಕೆ ಕನ್ನಡಿ ತನ್ನ ಗುಣ ಬದಲಾಯಿಸದು,
ಬಿಟ್ಟುಹೋದ ಮಾತ್ರಕ್ಕೆ ನೆನಪು ಸುಟ್ಟು ಹೋಗದು.

-


30 MAY 2020 AT 12:08

ಮಾತು ಬೆಳ್ಳಿ
ಮೌನ ಬಂಗಾರ

ಮಾಡಿರುವೆ ನಿನ್ನ
ಮೌನದಿ ಮನಸ್ಸಲ್ಲಿ ಶೃಂಗಾರ...!

-


17 MAY 2020 AT 11:10

"ನನ್ನಪ್ಪನೆಂದರೆ"

೫.
ನನ್ನಪ್ಪನೆಂದರೆ
ನನ್ನೊಳಗಿನ ಬಾಳ ಕೈಪಿಡಿಯಂತೆ
ಕಿರು ನುಡಿಯು ನನ್ನ ಬಗೆಗೆ
ಅವನ ಪರಿವಿಡಿಯಲ್ಲಿ..

೬.
ನನ್ನಪ್ಪನೆಂದರೆ
ನಗುವಿಗೆ ನೆಲೆಯಾಗಿ
ನಗುವಿನ ತಿಳಿಯ ಗುರುವಾಗಿ
ಗುಟ್ಟಾಗಿ ಹಿಂದೆ ನಿಂತವನು..

೭.
ನನ್ನಪ್ಪನೆಂದರೆ
ಆಗಸದೆತ್ತರದ ನನ್ನ ಆಸೆಗಳ
ಅವನ ಆಸೆಯಂತೆ
ಆಗಸನಾಗಿ ದುಡಿದವನು..

೮.
ನನ್ನಪ್ಪನೆಂದರೆ
ಸರಿ ತಪ್ಪುಗಳ ಪಾಠ ಕಲಿಸಿ
ಸರಿ ದಾರಿಯಲ್ಲಿ ಸ್ವರ ಮೂಡುವಂತೆ
ಸೆರೆಯಾಗಿ ತಾಯಿಯ ವರದಲ್ಲಿ ನಿಂತವನು...!

-


12 MAY 2020 AT 0:27

ಕರುಣೆ ಇಲ್ಲದ ಜನ,
ಕಂಡು ಅರಿಯದ ಮನ,
ಕೊನೆಗಾಣದ ಈ ಆಕ್ರಂದನ,
ಕಲ್ಪನೆಗೂ ಮೀರಿ ವರ್ತಿಸುತ್ತಿದ್ದಾನೆ ಈ ಮನುಜ..

ಕ್ರೂರಿಯಂತೆ...!

ಕಾಯಲು ಬೇಡ
ಕಾಲ ಬರುವುದೆಂದು
ಕಾರಣಕರ್ತ ನೀನೆ
ಕೊನೆಗಾಣಿಸಲು ಅವಕಾಶ ನಿನ್ನದೆ..

ಕಾರಣಾಂತರಗಳನ್ನು
ಕರೆತಂದು
ಕೊನೆಗಾಣಿಸು
ಕಸಗಳಂತ ಕ್ರಿಮಿಗಳನ್ನು...

-


17 JAN 2022 AT 11:22

ದಿನಕ್ ಒಂದಾದ್ರು ಬರೀಬೇಕು ಕವನ
ಇಲ್ಲ ಅಗ್ತೀನಿ ಬಾಡಿ ಹೋದ ಹೂವಂತೆ ನಾ..

-


29 OCT 2021 AT 7:25

"ರುಶಿ ಪ್ರಕಾಶನ ಹಾಸನ" (ಸ್ಪರ್ಧೆಗೆ)
___________________________

*ಹೆಮ್ಮೆಯ ಕನ್ನಡಿಗರು*
~~~~~~~~~~~~~~~

ಅದ್ಭುತ ಸೃಷ್ಟಿಗೆ ಅಪರೂಪದ ವರವೇ, ನಾವ್ ಕನ್ನಡಿಗರು||

ಶಿಲ್ಪ ಕಲೆಯ ತವರೂರು,
ಯಾವುದೇ ಕೊರತೆ ಇಲ್ಲದ ನಮ್ಮೂರು.
ಕನ್ನಡಿಗರ ಹುಟ್ಟೂರು,
ಕರುಣೆ-ಮಮತೆಗೆ ಸ್ಫೂರ್ತಿ ನಾವೇ ಕನ್ನಡಿಗರು..

ಕಲಿಯಲು, ನಲಿಯಲು, ಉಳಿಯಲು,
ಕೊನೆ ಇಲ್ಲದ ಕನ್ನಡದ ಒಲವು,,
ಕೋಟಿ ಭಾಷೆ ಕಲಿತರು ಕನ್ನಡವೇ ನಮಗೆ ಗೆಲುವು.
ಸಂಭ್ರಮಿಸುತ್ತಿದೆ ಈ ಸೃಷ್ಟಿ, ಇದೆ ನಮಗೆ ವರವು..

ಸಹ್ಯಾದ್ರಿಯ ಮಡಿಲಲ್ಲಿ ಸೊಗಸಾಗಿ,
ಸ್ವರ ಮೇಳಗಳಂತ ನದಿಗಳಲಿ ಸಲೀಸಾಗಿ,,
ಚಿಮ್ಮುತಿದೆ ಕನ್ನಡದ ಚೆಲುವು.
ಈ ಕರ್ನಾಟಕದ ಮೇಲೆ ನನ್ನ ಪೂರ್ತಿ ಮನವು..

ಕನ್ನಡವೇ ನನ್ನ ತನು, ಮನ
ಕರ್ನಾಟಕದವರೆಲ್ಲ ನನ್ನ ಜನ, ಈ ಜನ್ಮಕೆ ಇದೆ ನನ್ನ ವರದಾನ.
ಕೋಟಿ ಜನ್ಮದ ಪುಣ್ಯ ಫಲವೋ,
ಈ ಜನ್ಮದಲಿ ನಾವ್ ಕನ್ನಡಿಗರೊ, ನಾವ್ ಕನ್ನಡಿಗರೊ..

-ಚೈತ್ರ ಡಿ(ಕಂ ಗೊಂ)


ಚೈತ್ರ.ಡಿ
ಚಾಪೆ ಬ್ಯಾಡರಹಳ್ಳಿ, ಕಿರೀಸಾವೆ ಅಂಚೆ, ಹಿರಿಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲೋಕು, ಹಾಸನ ಜಿಲ್ಲೆ. (೫೭೩೧೨೪)
ದೂರವಾಣಿ ಸಂಖ್ಯೆ : ೯೯೪೫೫೨೭೪೫೯

-


29 DEC 2020 AT 14:11

ಮುಂದಿನ ಚಿಂತೆ ಯಾಕಿಂದು
ಹಿಂದಿನ ನೆನಪೆ ಸಾಕೆಂದು
ಚೆಂದದಿ ಬದುಕು ಈಗಿನ ಕ್ಷಣವ
ತಿಳಿಯದೆ ನಡೆವೆ ನೀ ಮುಂದು.

-


29 DEC 2020 AT 13:48

🤗ಬರಹದಲ್ಲಿ ವೀರತೆಯ ನಿಮ್ಮ ಭಾವ ನೋಡಿಯೇ,
ಗುಣಗಾನ ಮಾಡಲೆಂದು ಬಂದಿರುವೆ ನಿಮ್ಮ ಜೀವಕೇ🤗
"""""""""""""""""""""""""""""""""""""""""""""""
ಜೀವ ಕೊಟ್ಟ ಜನನಿಯೇ ನಿನಗಿದೋ ನನ್ನ ನಮನ..🙏
ಇಂದು ಕಂಡಿರುವುದು ನನ್ನ ಮನ, ಒಬ್ಬ ವಿಯೋಗಿಯ ತಾಣ 🍃

ಇವ ಭಾವಗಳನೆಲ್ಲ ಗುಚ್ಛದಂತೆ ಕಟ್ಟಿ ಕೂಡಿಬರೆಯುವ ಜಾಣ😇
ಜೀವನ ನೆಡೆಸಲೆಂದು ರೈತನಾಗಿರುವ ದೇಶದ ಜೀವ💚

ಇಂದು ಜನುಮದಿನವ ಆಚರಿಸಿಕೊಳ್ಳುತ್ತಿರು ನಿಮಗೆ ನನ್ನ ಕಡೆಯಿಂದ ಒಂದು ಹೂವ🌹

-


Fetching ಕಂಬದ ಗೊಂಬೆ Quotes