Kiran Kumar KV   (kavikiran)
29 Followers · 25 Following

I exploit words & worlds for you..!!!
Joined 23 October 2017


I exploit words & worlds for you..!!!
Joined 23 October 2017
15 DEC 2024 AT 22:00

ನಾ ಉಸಿರಾಡೋ
ಪ್ರಾಣ ನೀನು...
ಅಲ್ಪ ಪ್ರಾಣ
ಮಹಾ ಪ್ರಾಣ
ಈ ಬಾಳ ವ್ಯಾಕರಣ ನೀನು..|
ನಾ ಬರೆಯೋ ಹಾಡಿನ
ಪ್ರತೀ ಸ್ವರ ನೀನು...
ಹ್ರಸ್ವ ಸ್ವರ
ದೀರ್ಘ ಸ್ವರ
ವರ ಕೊಟ್ಟ ಈಶ್ವರ ನೀನು...|
ನನ್ನ ಕನಸಿನ ಕಥೆಯ
ಸೂತ್ರಧಾರೆ ನೀನು
ತತ್ಸಮ ನೀನು...
ತದ್ಭವ ನೀನು...
ದಿನವೆಲ್ಲಾ ಉಲ್ಲಾಸ ಭಾವ ನೀನು...|
ಈ ಸಲದ ಈ ಜನ್ಮದ
ಜತೆಗಾತಿ ನೀನು
ಸಂಧಿ ನೀನು
ಸಮಾಸ ನೀನು
ನೂರು ಜನ್ಮದ ಮೀಮಾಂಸೆ ನೀನು...|
-ಕಿ-

-


15 DEC 2024 AT 14:12

You're cordially invited for the
Birthday Treat Dinner
of
"Gayathri Sheelvant"
today at 7 pm.

Menu
Pure Veg Continental Food
with Non-alcoholic Beverages

Location - Socialise Yelahanka
(Let's meet at a common place at 7)

Kiran

-


4 DEC 2024 AT 11:31

ಅಮಾಸೆ ರಾತ್ರಿಯಲಿ..
ಬರೆಯ ತೊಡಗಿದೆ..
ಬಾನಲಿಲ್ಲದ ಚಂದ್ರನ
ಮೇಲೊಂದು ಕವನ...||
ಬಣ್ಣಗಳ ಗೈರುಹಾಜರಿ
ಕಣ್ಣಿರದ ನವಿಲುಗರಿ
ಹೆಣ್ಣವಳ ನೆನಪಿಸುವ
ಹುಣ್ಣಿಮೆಯ ನರ್ತನ...||
ಆ ನಗುವಿನ ಚಂದ ಸುಂದರ
ನನ್ನೊಂದಿರಲು ಕೂಡಿದಂದ
ಮೋಹದ ಮೋಡದ ಮೋಡಿ
ಪಲ್ಲಕ್ಕಿಯಲ್ಲಿ ಸುಖಾಸನ... ||
ಕನಸಲಿ ಸ್ಖಲಿಸಿದ ಮೀಮಾಂಸೆ
ಅನಿಸಿದೆಲ್ಲವ ಅವಳಲಿ ಹೇಳುವಾಸೆ
ಅಮಾಸೆಯಲಿ ಬೆಳಕ ತಿಂಗಳ ಕೋರಿದ
ಅನಿವಾರ್ಯ ವಿಪರ್ಯಾಸ ಈ ಜೀವನ... ||

ಕಿ







-


6 MAY 2022 AT 21:34

Sita to Raavan:
"I wish I could....!!!"

k

-


14 FEB 2022 AT 18:57

Traveling few light years...
To spend a few lighter moments
with you, is totally our love...

I love you...!!!

-


14 DEC 2021 AT 11:34

ಪಂಚಭೂತ

ಭೂಮಿತೂಕ ಗೆಳತಿ ನಿನ್ನ ಸಹನೆ...
ತಾಯ್ಗರುಳ ಕರುಣೆ ನಿನ್ನೊಳು ಸಂವಹನೆ...
ನನ್ನ ಜೀವನದ ಅಡಿಗಡಿಯೂ ನೀ ಸಹಗಮನೆ...!!

ನೀರಿನಂತೆ ಪಾರದರ್ಶಕ ನೀ ಮನಸಾರೆ...
ನಿರಂತರ ಭೋರ್ಜಲಪಾತ ನಿನ್ನೊಲವಧಾರೆ...
ಪನ್ನೀರ ಸಿಂಚನ ನೀನಿರದೆ ನಾ ಉಸಿರಾಡಲಾರೆ...!!

ಬೆಂಕಿಯ ಪಾವಿತ್ರ್ಯ ನೀನಿರುವ ಪರಿಸರ...
ಬೆಳಕ ಹಬ್ಬದಿ ಉರಿಯೋ ಹಣತೆ ನಿನಗೋಸ್ಕರ...
ನಾ ಪರಿತಪಿಸೋ ಉಜ್ವಲ ಭವಿಷ್ಯ ನನ್ನೀ ದಿನದವಸರ...!!

ಗಾಳಿ ನೀನಾದೊಡೆ ನಾನಾದೆ ತೂಗುದೀಪ...
ಸವಿದೆ ನನ್ನೊಡತಿ ನಿನ್ನೊಡನೆ ಬೀಸಿದ ಹೂಗಂಪ...
ಅದೃಷ್ಟದ ಚಂಡಮಾರುತ ನಿನ್ನಿಂದೀ ಬದುಕಪ್ರಲಾಪ...!!

ಆಕಾಶಕ್ಕೂ ಇಲ್ಲ ನಿನ್ನ ಕನಸಿಗೂ ಇಲ್ಲ ಇತಿ...
ದಿಗಂತದಾಚೆ ದಾಟಿ ಮೆರೆದ ನಿನ್ನ ನಡೆ ನಿರ್ಭೀತಿ...
ರೂಪವಲ್ಲ ನಿನ್ನ ಗುಣ ಹಾಡತೊಡಗಿದೆ ಕಾಣುತ್ತಿಲ್ಲ ಮಿತಿ...

ಕಿ

-


14 JAN 2022 AT 17:16

Should I
complement you
or pity you
for the fight
you keep fighting
everyday
between
Life
And
Love

-

-


30 DEC 2021 AT 23:04

ಕೋರ್ಟು-ಕಚೇರಿ-ಅನಿಸಿಕೆ

ಈ ಲೋಕ ತಪ್ಪು ಸರಿಗಳ ತುಲಾಭಾರ...
ಜಗದ ಜನರೆಲ್ಲರ ಅಗಣಿತ ಲೆಕ್ಕಾಚಾರ...
ತಾ ಮಾಡಿದ್ದು ಆ ಘಳಿಗೆಗೆ ಸರಿನಿರ್ಧಾರ...
ಆ ಪ್ರಕಾರ ಮೂಗಿನ ನೇರದ ವ್ಯವಹಾರ...!!?

ಬಿಳಿಯ ಮೇಲ್ಗಡೆ ಕಪ್ಪು ಬಣ್ಣದ ಕೋಟು...
ಎಡಗಡೆ ಬಲಗಡೆ ಎಳೆದಾಡೋ ಸಾರೋಟು...
ಎದುರೇ ಮುದುರಿದ ಮನಸಾಕ್ಷಿಗೆ ಬಿಸ್ಕೇಟು...
ಒಲ್ಲದ ಗಾಂಧಾರತನ ನ್ಯಾಯದಮ್ಮನ ಕೋರ್ಟು...!!?

ಇಂತಿಪ್ಪಿರತಕ್ಕ ನ್ಯಾಯಕ್ಕೆ ಇಷ್ಟೆಂಬ ರೇಟಿನ ಪಟ್ಟಿ...
ವಕೀಲಿಕೆ ತನ್ನದೇ ಮುಕದ್ದಮೆಯ ಚಿತ್ರಕಥೆ ಕಟ್ಟಿ...
ಚಿಟಿಕೆಯ ತೀರ್ಮಾನ ತಾ ವಾಯಿದೆಗಳ ಬೆನ್ನಟ್ಟಿ...
ಮುಗ್ಧತೆಗೆ ತಾಳ್ಮೆಯ ಶಿಕ್ಷೆ ನೀಡಿದೆ ದೈವ ಮರಗಟ್ಟಿ...!!?

ಕಿರಣ್

-


25 DEC 2021 AT 11:27

ವಿಪರೀತ ವಿಪರ್ಯಾಸ

ಅದೇನ್ ವಿಚಿತ್ರಾನೋ...
"ಕಾಗೆ ಬಂಗಾರ" ಈಗೆಲ್ಲಾ ಲೈಫು
ಹೊರಗ್ ಥಳಕು ಒಳಗ್ ಉಳುಕು
"ಕಾಮನ ಬಿಲ್ಲು" ಈಗೆಲ್ಲಾ ಟೈಮು
ಎಲ್ಲಾ ಇದೆ ಅನ್ಸುತ್ತೆ ಏನೋ ಅಳುಕು...!!!

ಅದೇನ್ ವಿಚಿತ್ರಾನೋ...
"ಸೆರಗಲ್ಲಿರೋ ಕೆಂಡ" ಸೋಶಲ್ ಸ್ಟೇಟಸ್ಸು
ಬಡವ ನೀ ಮಡಗ್ದಂಗಿರು ಅಂತಿರಕ್ಕಾಗಲ್ಲ
"ಬಿಸಿಲ ಮರೀಚಿಕೆ" ಈಗೆಲ್ಲಾ ಫ್ಯೂಚರ್ ಪ್ಲಾನು
ದೂರದಲ್ಲೇನೋ ಇದ್ದಂಗೆ ಹೋದ್ರೆ ನಿಜವಾಗಲ್ಲ...!!!

ಅದೇನ್ ವಿಚಿತ್ರಾನೋ...
"ಸುಖದ ಸುಪ್ಪತ್ತಿಗೆ" ಮಾಸ್ಟರ್ ಬೆಡ್ರೂಮು
ಕಾಲು ಚಾಚೋಷ್ಟು ಹಾಸಿಗೆ ಇದೆ, ನಿದ್ದೆಯಿಲ್ಲ
"ಐರಾವತ"ದಷ್ಟು ಕಾಸ್ಟ್ಲಿ ಕೈಲಿರೋ ಐಫೋನು
ಮಾತು ಬರದವರಿಲ್ಲ ಜಗಳ ಮಾಡದವರಿಲ್ಲ...!!!

ಕಿರಣ್

-


11 SEP 2021 AT 11:14

Dictionary
📢pleasantly surprised
/ˈplɛz(ə)ntli səˈprʌɪzd/

When I woke up
and realised that
you're a reality
and a not dream..!!

More so when I know
you're in my life
you're in my world
and me in yours..!!

-


Fetching Kiran Kumar KV Quotes