Kiran Kallur   (ಬದುಕಿಗೊಂದು ಭರವಸೆಯ ನುಡಿ)
15 Followers · 8 Following

read more
Joined 30 June 2018


read more
Joined 30 June 2018
4 MAY AT 11:01

ಬದಲಾವಣೆಗಳೊಂದಿಗೇ ಬದುಕು ಸಾಗುತ್ತಿರುತ್ತದೆ. ನಮ್ಮ ವ್ಯವಹಾರ, ಸ್ವಭಾವಗಳನ್ನೆಲ್ಲ ಆಗಾಗ ವಿಮರ್ಶಿಸಿ ಬದಲಿಸಿಕೊಳ್ಳುತ್ತ ಸಾಗುವುದೇ
ಸರಿಯಾದ ಕ್ರಮ!

-


4 MAY AT 11:01

ಕ್ಷಮಿಸುವ ಮೂಲಕ ನಾವು ಸೋತೆವೆಂದುಕೊಳ್ಳುವುದಿಲ್ಲ, ನಮ್ಮ ಹೃದಯವನ್ನು ನಾವೇ ಗೆದ್ದಂತೆ. ಕ್ಷಮಿಸಿ ಹಗುರಾಗೋಣ.

-


4 MAY AT 11:00

ಕತ್ತಲೆಯಲ್ಲಿ ಬೆಳಕು ತೋರಿಸಬಲ್ಲ, ಭಾರವನ್ನು ಹಗುರವಾಗಿಸುವ, ಬಿಸಿಯನ್ನು ತಂಪಾಗಿಸುವ ಶಕ್ತಿಯಿರುವ ಪ್ರೀತಿಯನ್ನು ನೀಡುತ್ತ
ಪಡೆಯುತ್ತ ಸಾಗೋಣ!

-


4 MAY AT 10:59

ನಮಗಾಗದವರ ಕಠಿಣ ಮಾತುಗಳಿಗಿಂತ, ನಮ್ಮವರು ಅನ್ನಿಸಿಕೊಂಡವರ ಮೌನವೇ ಹೆಚ್ಚು ದುಃಖ ಕೊಡುತ್ತ ನೆನಪಿನಲ್ಲಿ ಉಳಿಯುವಂತಾಗುತ್ತದೆ!

-


4 MAY AT 10:59

ಜೀವದ ಸಾವು ಅನಿವಾರ್ಯ, ಇದ್ದವರ ಭಾವದ ಸಾವು ತಪ್ಪಿಸುವ ಪ್ರಯತ್ನದಲ್ಲಿ ತೊಡಗಿಕೊಂಡು ನೊಂದವರ ನೋವು
ಕಡಿಮೆ ಮಾಡೋಣ.

-


4 MAY AT 10:58

ಕಾಲವೊಂದು ಹರಿಯುತ್ತಿರುವ ನದಿ. ಒಮ್ಮೆ ತಾಗಿದ ನೀರು ಹರಿದು ಮುಂದೆ ಸಾಗಿ ಬಿಡುತ್ತದೆ. ಆ ಕ್ಷಣದ ಸಿಂಚನವನ್ನು ಅನುಭವಿಸಬೇಕು!

-


4 MAY AT 10:57

ಪ್ರತಿಷ್ಠೆಯೆಂದರೆ ನಮ್ಮ ಕನ್ನಡಕದ ಮೇಲಿನ ಧೂಳಿದ್ದಂತೆ, ಒರೆಸಿಕೊಂಡಾಗ ಎದುರಿಗಿರುವುದು ಸ್ಪಷ್ಟವಾಗುತ್ತದೆ ಮತ್ತು ತಪ್ಪು ತಿಳಿವಳಿಕೆ ದೂರವಾಗುತ್ತದೆ!

-


4 MAY AT 10:57

ಗೆಲುವಿಗೆ ಮೊದಲ ಮೆಟ್ಟಿಲೆಂದರೆ ನಾವು ಮಾಡಬೇಕಾದ ಕೆಲಸವನ್ನು ಪ್ರೀತಿಸಬೇಕು. ಶ್ರದ್ದೆಯೇ ಎರಡನೇ ಹಂತ. ಅಲ್ಲಿಂದ ಗೆಲುವು ದೂರವಿಲ್ಲ!

-


4 MAY AT 10:56

ಇಂದಿನ ಕಷ್ಟದಲ್ಲಿ ಬರುವ ಕಣ್ಣೀರ ಹನಿಗಳು ನಾಳಿನ ಕಾಮನಬಿಲ್ಲಿಗೆ ಕಾರಣವಾಗಬಲ್ಲವು. ಸವಾಲುಗಳನ್ನು ಎದುರಿಸಿ ನಾಳೆಯ ಸಂತೋಷಕ್ಕೆ ಸಜ್ಜಾಗೋಣ!

-


4 MAY AT 10:56

ಇತರರ ಬಗ್ಗೆ ನಮ್ಮೊಂದಿಗೆ ಹಗುರವಾಗಿ ಮಾತನಾಡುವವರು ನಮ್ಮ ಬಗ್ಗೆಯೂ ಅದೇ ಕೆಲಸ ಮಾಡುತ್ತಾರೆ ಎಂಬ ಎಚ್ಚರವಿರಲಿ!

-


Fetching Kiran Kallur Quotes