King katte   (Katte Basava)
27 Followers · 31 Following

Smile to face anything and everything
Joined 15 April 2020


Smile to face anything and everything
Joined 15 April 2020
25 JAN 2022 AT 9:02

ನಮ್ಮ ಶತ್ರುಗಳೇ
ನಮ್ಮ ನಿಜವಾದ ಹಿತೈಷಿಗಳು.
ಯಾಕೆಂದರೆ, ಅವರು
ನಮ್ಮ ಕಾಲುಗಳನ್ನೆಳೆದು
ಮತ್ತೆ ಮತ್ತೆ ನಾವು ಮೇಲೆ ಹತ್ತಲು
ಪರೋಕ್ಷವಾಗಿ ಪ್ರೋತ್ಸಾಹಿಸುತ್ತಾರೆ.

-


25 DEC 2021 AT 11:42

ಬಲಹೀನನು ಬಲಹೀನನೇ ಹೊರತು
ಎಂದಿಗೂ ಬಲವಂತನಾಗಲಾರ
ಎಂದು ಬೀಗಬೇಡ.

ಬಲವಂತನು ಬಲಹೀನನಾಗಿ,
ಬಲಹೀನನು ಬಲವಂತನಾಗುವ ಕಾಲ
ಬಂದೇ ಬರುವುದು.

-


28 OCT 2021 AT 7:26

ಒಬ್ಬಂಟಿಗನ ಪಯಣದಲಿ
ಹಲವು ಹೃದಯಗಳ ಪರಿಚಯ.
ಕೆಲವ್ರು ಶಾಶ್ವತಮಯ,
ಇನ್ನು ಕೆಲವ್ರು ಅಯೋಮಯ,
ಮತ್ತೆ ಕೆಲವ್ರು ಹೃದಯಾಳದಿಂದ ಮಾಯಾವೋ ಮಾಯ.

-


27 OCT 2021 AT 8:11

ಅನೇಕ ಸುಳ್ಳು ಹೇಳಿಕೆಗಳ ಹಿಂದೆ
ಒಂದು ಕಟುವಾದ ಸತ್ಯ ಅಡಗಿರುತ್ತದೆ.
ಸತತ ಅವಲೋಕನಗಳ ನಂತರ ಸತ್ಯದ
ಮಾರ್ಗವು ತೆರೆದುಕೊಳ್ಳುತ್ತದೆ.

-


21 OCT 2021 AT 23:18

ಸಾವು.
➡️ ಅದಾಗದೇ ಬಂದ್ರೆ ಒಳ್ಳೆತನ,
➡️ ಬೇಕೆಂದು ಅಪೇಕ್ಷಿಸುವುದು ಮೂರ್ಖತನ,
➡️ ಸಮಸ್ಯೆಗೆದುರಿ ಸತ್ತರೆ ಹೇಡಿತನ.

-


18 OCT 2021 AT 20:49

➡️ಸೂಕ್ಷ್ಮವಾಗಿ ಆಲೋಚಿಸಲು,
➡️ಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದನ್ನು ಕಲಿಯಲು,
➡️ವಿವೇಚನಾಯುತ ನಿರ್ಧಾರಗಳನ್ನು ಕೈಗೊಳ್ಳಲು,
➡️ನಿರ್ಲಕ್ಷ್ಯದಿಂದ ಮಾಡಿದ ತಪ್ಪನ್ನು ತಿದ್ದಿಕೊಂಡು ಬಾಳಲು.

-


18 OCT 2021 AT 19:24

1.ತಾಯಿಯ ಮಡಿಲಿನ ಕೂಸು ಆಕೆ,
ತಂದೆಯ ಮುದ್ದಿನ ಕುವರಿಯಾಕೆ,
ಒಟ್ಟಾರೆ ಪಾಲಕರ ಪಾಲಿಗೆ ಪ್ರಪಂಚವೇ ಆಕೆ.
2.ಓದುವವರ ನೆಚ್ಚಿನ ಸಹಪಾಠಿಯಾಕೆ,
ಆಡುವವರ ಜೊತೆಗಿನ ಸ್ನೇಹಿತೆಯಾಕೆ,
ನಲ್ಮೆಯ ಮನಸುಗಳ ಭರವಸೆಯೂ ತಾನಾಕೆ.
3.ಋತುಸ್ರಾವ ಚಕ್ರಕೆ ಸಿಲುಕಿದವಳಾಕೆ,
ತಾರುಣ್ಯಕ್ಕೆ ಕಾಲಿಟ್ಟ ತರುಣಿಯಾಕೆ,
ಸಂಪೂರ್ಣ ಹೆಣ್ತನವ ಪಡೆದೆನೆಂದು ಬೀಗುವಾಕೆ.
4.ಕಣ್ಮನವ ಸೆಳೆಯುವ ಸುಂದರಿಯು ತಾನಾಕೆ,
ಯುವಕನ ಕನಸಿನ ಪ್ರೀತಿಯಾಕೆ,
ಮಾಂಗಲ್ಯಕೆ ಮಣಿದು, ಮಧುಮಂಚದಲಿ ಸರ್ವಸ್ವವನ್ನೂ ಅರ್ಪಿಸಿದವಳಾಕೆ.
5.ನಾಚಿಕೆಯಲಿ ವಿಧವಿಧದ ತಿನಿಸುಗಳನು ತಿಂದಳಾಕೆ,
ನೋಡನೊಡುತಲೀ ತಾಯ್ತನದ ಮೈದಳೆದವಳಾಕೆ,
ಇನ್ನೊಂದು ಜೀವಕೆ ಜೀವವ ನೀಡುತಲಿ,
ಮರುಜನ್ಮವ ಪಡೆದಳಾಕೆ.
6.ಮಕ್ಕಳನು ಅಕ್ಕರೆಯಿಂದ ಬೆಳೆಸಿದಾಕೆ,
ಸಂಸಾರದ ನೊಗವನ್ನು ಹೊತ್ತಿರುವಳಾಕೆ,
ಬದುಕಿನ ತಿರುವುಗಳಿಗೆ ಒಡನಾಡಿಯಾಕೆ.
ಒಟ್ಟಾರೆ....
7.ದೈವ ಸ್ವರೂಪಿಯ ಮಾನವಳಾಕೆ,
ಮನುಕುಲದ ವೃದ್ಧಿಗೆ ವರವು ಆಕೆ,
ಜನ್ಮಾಂತ್ಯದವರೆಗೂ ವಿವಿಧ ಪಾತ್ರಗಳ ನಿಭಾಯಿಸಿದವಳಾಕೆ.
ಆದರೂ...!!?? ಆದರೂ.....!!??
8.ಅತಿಬೇಗ ಚರ್ಚೆಗೆ ಒಳಗಾಗುವಾಕೆ,
ಕಟುಕನ ಕಾಮಕೆ ಬಲಿಯಾಗುವಳಾಕೆ,
ಅನ್ಯರ ಮೋಸವನು ಮಾತೃ ಹೃದಯದಿ ಸಹಿಸಿ ಕ್ಷಮಿಸಿದವಳಾಕೆ...
ಆಕೆ, ಆಕೆ, ಆಕೆ....

-


13 OCT 2021 AT 14:47

ಇನ್ನೊಬ್ಬರ ದೃಷ್ಠಿಯಲ್ಲಿ ತಾವು ಪ್ರಭಾವಿತರಾಗಲು
ನಮ್ಮ ಪಾತ್ರ/ವ್ಯಕ್ತಿತ್ವವನ್ನು ತಮಗಿಷ್ಟ ಬಂದಂತೆ ಬದಲಾಯಿಸುವ ಜನರ ಮಧ್ಯೆ ನಾವಿದ್ದೇವೆ.
ಸದಾ ಎಚ್ಚರದಿಂದಿರಿ.

-


1 OCT 2021 AT 10:21

ಸಾಗುತ್ತಿರುವ ಜೀವನದಲ್ಲಿ ಸಮಯಕ್ಕಾಗಿ ನೀ ಸಾಗಬೇಕಷ್ಟೇ. ನಿನ್ನ ಸಮಯ ಬರುವವರೆಗೆ ಜಡವಾಗಿ ಕುಳಿತರೆ ಸಮಯ ವ್ಯರ್ಥವಷ್ಟೇ. "ಉದರ ನಿಮಿತ್ತಂ ಬಹುಕೃತ ವೇಷಂ" ಅನ್ನೋಹಾಗೆ ಗುರಿಯನ್ನು ನಿಶ್ಚಲವಾಗಿ ಮಸ್ತಕದಲ್ಲಿಟ್ಟು, ಅದಕ್ಕೆ ಪೂರಕವಾದ ಕರ್ಮಾದಿಗಳನ್ನು ಮಾಡುತ್ತಾ ನೀ ಮುಂದೆ ಸಾಗು ಗೆಳೆಯ/ಗೆಳತಿ...

-


30 SEP 2021 AT 7:38


ಕಾರಣ, ಮಾನವ ಜಗದೊಳು ನಾನಿರುವೆ.
ಇಲ್ಲಿ ಮನಸ್ಸಿಗಿಂತ ಮುಖವಾಡ ಧರಿಸಿರುವವರೇ ಹೆಚ್ಚು. ತಮ್ಮ ಕೆಲಸದ ನಿಮ್ಮಿತ್ತ ಮನ ಪ್ರವೇಶಿಸುವರು!
ಕೆಲಸ ಮುಗಿದಾಕ್ಷಣ ಅರೆಕ್ಷಣ ನಿಲ್ಲಲು ಯೋಚಿಸುವರು.
ಸಂಘಜೀವೀಯಾಗಿರುವ ನಾನು, ಒಬ್ಬಂಟಿಗನಾಗಿದ್ದರೂ, ಎಲ್ಲರಲಿ ಒಬ್ಬನಂತೆ ಮೇಲ್ನೋಟಕ್ಕೆ ನಗುವ ಹೊತ್ತಿರುವೆ.

-


Fetching King katte Quotes