ಕೆಟ್ಟವರೆನ್ನಿಸಿಕೊಳ್ಳಲು ಕೆಟ್ಟ ಕೆಲಸವೇ ಮಾಡಬೇಕೆಂದಿಲ್ಲ,
ಇದ್ದಿದ್ದನ್ನು ಇದ್ದ ಹಾಗೆ, ನೇರವಾಗಿ ಹೇಳಿದರೆ ಸಾಕು ನಮ್ಮ ಯಾವ ಉದ್ದೇಶವು ಅವರಿಗೆ ಕಾಣುವುದಿಲ್ಲ, ಬದಲಿಗೆ ತಪ್ಪು ಯೋಚನೆ, ಕೆಟ್ಟವರೆಂಬ ಹಣೆಪಟ್ಟಿ ಉಚಿತವಾಗಿ ನೀಡುತ್ತಾರೆ.
✍️ಕೀರ್ತಿ ಗೌಡ 💚-
@smilingqueen._quotes_22
ಕೆಲವರು ಸಾವು ಬದುಕಿನ ನಡುವೆ ಒದ್ದಾಡಿ, ಸಾವಿನ ಜೊತೆ ಯುದ್ಧ ಮಾಡಿ ಬದುಕುವುದಕ್ಕೆ ನೋಡಿದ್ರೆ,
ಇನ್ನು ಕೆಲವರು ಬದುಕು ಸಾಕಾಗಿ, ನಿನ್ನೊಂದಿಗೆ ನನ್ನ ಕರೆದುಕೊಂಡು ಹೋಗು ಎಂದು ಸಾವಿನ ಜೊತೆಗೆ ಯುದ್ಧಕ್ಕೆ ನಿಲ್ಲುತ್ತಾರೆ! ಅದು ಹುಚ್ಚುತನ ಅನ್ನಿಸಬಹುದು, ಆದರೆ ನಿಜವಾದ ಕಾರಣ ಪರಿಸ್ಥಿತಿಗೆ ಕಟ್ಟುಬಿದಿದ್ದು, ಹಾಗೆ ಅವರಿಗೆ ಸಾಂತ್ವನದ ಅವಶ್ಯಕತೆ ಇದೆ ಅಂತ ಅರ್ಥ ಮಾಡ್ಕೊಳೋದ್ರಲ್ಲಿ ಎಷ್ಟೋ ಜನ ಸೋಲ್ತಾರೆ!
ಬದುಕೇ ಹೀಗೆ, ನಮ್ಮನ್ನು ನಾವು ಬಿಟ್ಟರೆ ಮತ್ಯಾರು ನಮ್ಮಷ್ಟು ಅರ್ಥ ಮಾಡ್ಕೋಳೋಕೆ ಆಗಲ್ಲ!!(SQ👑✨)
✍️ಕೀರ್ತಿ ಗೌಡ💚-
ದೇಹದಲ್ಲಿ ಉಸಿರಿರುವರೆಗೂ ಜೀವನ ಸಾಗುತ್ತಲೆ ಇರುತ್ತದೆ..
ನೋವೋ-ನಲಿವೋ, ಸೋಲೋ-ಗೆಲುವೋ ಸದಾ ಮುಂದೆಜ್ಜೆ ಇಡಲೇಬೇಕಾಗುತ್ತದೆ..
ಎಲ್ಲವನ್ನು ಸಹಿಸುವ ಶಕ್ತಿ ಹಾಗೂ ತಾಳ್ಮೆ ಮುಖ್ಯ, ಜೊತೆಗೆ ಜೀವನಕ್ಕೊಂದು ಅರ್ಥ ಕಂಡುಕೊಳ್ಳುವುದು..!(SQ👑)
✍️ಕೀರ್ತಿ ಗೌಡ💚-
ಬದುಕೆಂಬ ಸಾಗರದೊಳು
ನೀನೆಂಬ ಅಲೆಯೊಂದು
ಮೊದಮೊದಲು ಮೆಲ್ಲನೆ
ಮನ ಆವರಸಿಕೊಂಡು
ಅಪ್ಪಳಿಸಿದ ವೇಳೆ ನನ್ನಲ್ಲಿ
ಬದುಕುವ ಆಸೆ ಹೇಳದಷ್ಟಿತ್ತು....
ಅದೇ ಬದುಕೆಂಬ ಸಾಗರದಲ್ಲಿ
ನೀನೆಂಬ ಅಲೆ ಮನಸ್ಸಿಗೆ ಏಟು
ಕೊಟ್ಟು ಚೂರಾಗಿಸುವಷ್ಟು ಜೋರಾಗಿ
ಅಪ್ಪಳಿಸಿದಾಗ ಬದುಕುವ ಆಸೆಯೇ ಇನ್ನಿಲ್ಲವಾಗಿಹೋಯಿತು....!(SQ👑)
✍️ಕೀರ್ತಿ ಗೌಡ💚-
ಕೆಲವೊಮ್ಮೆ ಬದುಕಿನ ಪಥ ಬದಲಾದಗೆಲ್ಲ ಮನಸ್ಥಿತಿಯು ಬದಲಾಗುತ್ತಲೇ ಇರುತ್ತದೆ..
ಒಮ್ಮೊಮ್ಮೆ ಯಾರಿಗಾಗಿ ಬದುಕದೆ ನನಗಾಗಿ ಬದುಕಬೇಕು ಅನ್ನಿಸಿದರೆ, ಮತ್ತೊಮ್ಮೆ ಯಾರಿಗೂ ಕಾಣದ ಹಾಗೆ ದೂರ ಹೋಗಿಬಿಡಬೇಕು ಅನ್ನಿಸಿದರೆ.. ಮಗದೊಮ್ಮೆ ಬದುಕುವ ಆಸೆಯೇ ಇಲ್ಲವಾಗಿ ಬಿಡುತ್ತದೆ...!
ಬದುಕೇ ಅಂತದ್ದು..ನೂರಾರು ದಾರಿಗಳು ಇದ್ದರೂ ಆಯ್ಕೆ ಮಾಡಿದ್ದ ಆ ಒಂದು ದಾರಿಯಲ್ಲಿ ಕಲ್ಲೊ, ಮುಳ್ಳೋ ಅಥವಾ ಹೂವಿನ ಹಾಸಿಗೆಯೋ,
ಆಯ್ಕೆಯ ಮೇಲೆ ನಿಂತಿರುವಂತದ್ದು..ತಿಳಿಯದೆ ಅನುಭವಿಸುವಂತದ್ದು...!!(SQ👑)
✍️ಕೀರ್ತಿ ಗೌಡ💚-
ಜೀವನ ಅಂದುಕೊಂಡಂತೆ ಇಲ್ಲ ಅನ್ನುವ ದೂರು ಪ್ರತಿಯೊಬ್ಬರದ್ದು ಕೂಡ..
ಅದೇ ಯಾವ ನಿರೀಕ್ಷೆಯಿಲ್ಲದೆ ಮಾಡುವ ಜೀವನ ನಿರೀಕ್ಷೆಗಿಂತ ಮೀರಿದ್ದು ಎಂದು ತಿಳಿದುಕೊಂಡರೆ ಯಾರೊಬ್ಬರ ದೂರು ಕೂಡ ಇರುವುದಿರಲಿ ಯೋಚನೆಯು ಕೂಡ ಸುಳಿಯುತ್ತಿರಲಿಲ್ಲವೇನೋ..!?(SQ👑)
✍️ಕೀರ್ತಿ ಗೌಡ💚-
ಕೆಲವೊಮ್ಮೆ ಬದುಕಿನ ತಿರುವುಗಳನ್ನು ನೋಡಿದಾಗೆಲ್ಲ, ಬದುಕುವ ಆಸೆಯೇ ಇಲ್ಲವಾಗಿಬಿಡುತ್ತದೆ..
ಅಂತಹ ಸಮಯದಲ್ಲೂ ನೆಮ್ಮದಿಯ ತಾಣವೊಂದು ಕಣ್ಮುಂದೆ ಬಂದು ಹಾದು ಹೋಗುತ್ತದೆ..
ಆದರೆ ಆ ಜಾಗಕ್ಕೆ ಹೋಗುವ ದಾರಿ ತಿಳಿದಿರುವುದಿಲ್ಲವಷ್ಟೇ..!!
ಬದುಕೇ ಹೀಗೆ.. ಅರ್ಥವೇ ಇಲ್ಲದಂತಿರುವುದು.. ಕೊನೆಗೆ ಅರ್ಥವನ್ನ ಹುಡುಕಿ ಹೋಗುವಂತದ್ದು..!(SQ👑)
✍️ಕೀರ್ತಿ ಗೌಡ 💚-
ಸತ್ವವಿಲ್ಲದ ನಗು
ತಡೆಯದ ನೋವು
ಯಾರಿಗೂ ಕಾಯದೆ
ತನ್ನ ಪಾಡಿಗೆ ತಾನು
ಓಡುತ್ತಿದ್ದ ಸಮಯ
ಎಲ್ಲವೂ ಒಂದೆ ಬಾರಿಗೆ
ಅರ್ಥೈಸಿದ್ದು..
ಜೀವ ಇರುವವರೆಗೂ,
ಜೀವನವೂ ಸಾಗುತ್ತಲೇ ಇರುತ್ತದೆ..
"ಈ ಸಮಯ ಕಳೆದು ಹೋಗುತ್ತದೆ!" ಎಂದು..(SQ👑)
✍️ಕೀರ್ತಿ ಗೌಡ💚-
ಯಾರು ನೋಡಿದ್ದರೇನು? ನೋಡದೆ ಇದ್ದರೇನು?
ಜಗವನ್ನೇ ನೋಡುವವನು ಮೇಲೊಬ್ಬ ಇದ್ದನಲ್ಲ..
ಯಾರು ಸುಮ್ಮನೆ ಬಿಟ್ಟರೇನು??
ಕರ್ಮ ಅನ್ನುವುದೊಂದು ಇದೆಯಲ್ಲ..
ಅದೆಂದಿಗೂ ಸುಮ್ಮನೆ ಬಿಡುವುದಿಲ್ಲ!..(SQ👑)
#Karma returns....
✍️ಕೀರ್ತಿ ಗೌಡ💚-
ಪ್ರಪಂಚಕ್ಕೆ ಕಾಲಿಡುವ ಮೊದಲು ಹಾಗು ಬಿಟ್ಟು ಹೋಗುವ ಮುನ್ನ ಅಳುವುದು ಇದ್ದೆ ಇದೆ..
ಇರುವಷ್ಟು ದಿನ ನಗುವಿನಲ್ಲೇ ಕಳೆಯೋಣ..
ನೋವು-ನಲಿವು, ದುಃಖ-ಸುಖಗಳೆಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಬಾಳೋಣ..
ನೋವಿನ ನೆನಪ ಅಳಿಸಿ, ನಗುವಿನ ಖುಷಿಯ ಅನುಭವಿಸೋಣ..(SQ👑)
✍️ಕೀರ್ತಿ ಗೌಡ💚
-