Keerthi (ಪೇಣಿ)   (✍Keerthi(ಪೇಣಿ)💕)
211 Followers · 39 Following

DOB feb 12
Joined 26 February 2020


DOB feb 12
Joined 26 February 2020
28 FEB 2022 AT 19:44

ನಿನ್ನ ಪರಿಚಯ
ನನ್ನ ಮನದ
ಪಾಲಿಗೆ
ಪಂಜರವೋ
ಸಂಭ್ರಮವೋ
ತಿಳಿಯದು

-


16 MAY 2021 AT 15:07

Please check

-


6 APR 2021 AT 16:25

ಅರಿತೋ ಅರಿಯದೆಯೋ
ನನ್ನ ಮನಸಿನೊಳಗೆ
ಬಂದ ನಿನ್ನನ್ನು
ನಾ ಬೇರೆಯವರೊಂದಿಗೆ
ಹೇಗೆ ಕಲ್ಪಿಸಿಕೊಳ್ಳಲಿ...!
ಈಗ ನೀ ನನ್ನವನಲ್ಲ
ಎಂದು ಎಷ್ಟೇ ಹೇಳಿದರು
ಕೇಳದ ನನ್ನ ಮನಸಿಗೆ
ಹೇಗೆ ಸಮಾಧಾನ ಮಾಡಲಿ...?

-


24 MAR 2021 AT 15:18

ಮರೆತರು ಮರೆಯಲಾಗದ
ನಿನ್ನ ನೆನಪಿನ ಬಂಧದ
ಸರಪಳಿಯಲ್ಲಿ
ಸೆರೆಮಾಡಿರುವೆ ನೀ ನನ್ನ...
ಎತ್ತ ನೋಡಿದರೂ
ಕತ್ತಲೆಯೇ ಆವರಿಸಿದೆ....
ಆ ಬಂಧನದಿಂದ ಹೊರಬರಲು
ನೀನೇ ದಾರಿ ತೋರಿಸುವೆಯಾ...

-


21 MAR 2021 AT 11:18

ಸಮಯವಿದ್ದಾಗ ಏನು
ಅರ್ಥವಾಗುವುದಿಲ್ಲ...
ಎಲ್ಲ ಅರ್ಥವಾದಾಗ
ಸಮಯವೇ ಇರುವುದಿಲ್ಲ...

-


25 JAN 2021 AT 11:40

ಈ ಜೀವನ ಅನ್ನೋ ಪಯಣದಲ್ಲಿ
ಕೆಲವರು ದೂರ ಆದಷ್ಟು ನೋವಾಗುತ್ತೆ....
ಇನ್ನೂ ಕೆಲವರು ಹತ್ತಿರ ಆದಷ್ಟು ನೋವಾಗುತ್ತೆ

-


20 JAN 2021 AT 15:14

ಒಂದ್ ಸಾರಿ ನಿನ್ನ ಬಿಟ್ಟು ಇರೋಕೆ ಆಗುತ್ತಾ ಅಂತ ದೂರ ಆಗಿ ನೋಡ್ದೆ ಆದರೆ ನನ್ಗೆ ಇರೋಕೆ ಆಗ್ಲಿಲ್ಲ...
ಇನ್ನೊಂದು ಸಾರಿ ದೂರ ಮಾಡ್ದೆ ಅವಾಗ್ಲೂ ನಿನ್ನ ಬಿಟ್ಟು ಇರೋಕೆ ಆಗ್ಲಿಲ್ಲ...
ನಿನ್ನ ಬಿಟ್ಟು ಇರೋಕ್ ಆಗೋದೆ ಇಲ್ಲ ಅಂತ ನಾನೇನೋ ತಿಳಿದುಕೊಂಡೆ...
ಆದರೆ,ನೀನು ನನ್ನ ಬಿಟ್ಟು ದೂರ ಇರೋದನ್ನ ಕಲಿಯೋದಕ್ಕೆ ನಾನೇ ನಿನಗೆ ಅಭ್ಯಾಸ ಮಾಡಿಸಿಬಿಟ್ಟೆ ಅನ್ನೋದು ಮಾತ್ರ ನನಗೆ ಆಗ ಗೊತ್ತಾಗಲೇ ಇಲ್ಲ...

-


12 JAN 2021 AT 14:26

ಮನಸ್ಸಿನಲ್ಲೆ ಕಟ್ಟಿದೆ ಒಂದು ಕನಸ...
ಆ ಕನಸು,ನನಸಾಗುವುದೆಂದು
ನೆನೆದು ಖುಷಿಯಾಯಿತು
ಎನ್ನ ಮನ...ಮರುಕ್ಷಣವೇ,
ಆ ನನಸಾಗುವ ಕನಸೆಲ್ಲ
ನನ್ನ ಭ್ರಮೆಯೆಂದು ತಿಳಿದು
ಕಣ್ಣಾಲಿಗಳು ತುಂಬಿ ಬಂದವು...

-


9 JAN 2021 AT 14:48

ಸ್ನೇಹದ ಗೂಡಿನ ಸುತ್ತ
ಪ್ರೀತಿಯ ಬಲೆ ಹೆಣೆದು
ಏನೂ ಅರಿಯದ ಮನಸ್ಸನ್ನು
ಸ್ನೇಹ ಪ್ರೀತಿಯ
ನಡುವೆ ಸಿಲುಕಿಸಿ
ಭಾವನೆಗಳಿಗೆ ಸಂಘರ್ಷದ
ಹಾದಿ ತೋರಿಸಿ
ಕಂಗಳಿಗೆ ಕಣ್ಣೀರನ್ನು
ಉಡುಗರೆಯಾಗಿ ನೀಡಿ
ಕೊನೆಗೆ ನನ್ನ
ಏಕಾಂಗಿಯಾಗಿ ಮಾಡಿ
ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ
ನನ್ನ ಮನಸನ್ನೇ
ಛಿದ್ರ ಛಿದ್ರ ಮಾಡಿ
ಬಲಿಯಾಗಿ ಪಡೆದೆಯಾ...

-


3 JAN 2021 AT 11:35

ಯಾರು ನಮ್ಮವರು
ಯಾರು ನಮ್ಮವರಲ್ಲ
ಎಂಬ ಪ್ರಶ್ನೆಗೆ
ಉತ್ತರ ಹುಡುಕುವುದರಲ್ಲೆ
ಅರ್ಧ ಜೀವನ ಕಳೆದುಬಿಡುತ್ತದೆ...

-


Fetching Keerthi (ಪೇಣಿ) Quotes