ಹೃದಯವೆಂಬ ಊರಿನಲ್ಲಿ...
ಮನಸೆಂಬ ಬೀದಿಯಲ್ಲಿ...
ಬೆಳಕರೆದರೂ ಸಿಗದೆ...
ಕತ್ತಲಾದರೂ ಕಾಣಿಸದೆ...
ಹುಡುಕುತ ನಿನ್ನನೇ...
ಕಾಣೆಯಾಗಿಹೆನೂ ನಾನೇನೇ...-
ಮುಟ್ಟು ಮುಟ್ಟೆಂದೇಕೆ ಆಡುವಿರಿ ನೀವು...
ಮುಟ್ಟಿನ ಅಂಟಿಲ್ಲದೆ ಹುಟ್ಟಿದ್ದೀರ ನೀವು...
ಮುಟ್ಟು ಮುಟ್ಟೆಂದು ಮಡಿ ಮಾಡಲು ಹೊರಗಟ್ಟಿದರೇನು...
ಮುಟ್ಟಿನ ಹೊಟ್ಟೆ ನೋವಾ ಎರವಲು ಪಡೆಯುವರೇನು...
ಮುಟ್ಟಾದವಳ ಮುಟ್ಟಿದರೆ ಮೈಲಿಗೆಯೆನ್ನುವರು...
ತಿಂಗಳ ಮೂರು ದಿನ ಹೊರದಬ್ಬುವರು...
ಹರಿದ ಚಾಪೆ, ದಿಂಬು, ಚೊಂಬು, ತಟ್ಟೆ ನೀಡಿ ದೂರಮಾಡುವರು...
ಮೈ ನೆರೆದರೆ ಮನೆಯಲಿ ಸಂಭ್ರಮ ಪಡುವರು...
ಮುಟ್ಟಾದರೆ ಮನೆಯಲಿ ಮುಟ್ಟಲು ಹಿಂಜರಿಯುವರು...
ಮೈಲಿಗೆಯಲಿ ರಕ್ತದ ಮಡುವಲಿ ಹುಟ್ಟುವ ಕೂಸೊಂದನ
ಎತ್ತಿ ಮುದ್ದಾಡಿ ಮನೆ ತುಂಬಿಸಿಕೊಳ್ಳುವರು...
ಮುಟ್ಟು ಹೊಲಸೆನ್ನುವರು
ಹುಟ್ಟು ಹೊಲಸೆನ್ನುವುದಿಲ್ಲವೇಕೆ???
ಮುಟ್ಟೆ ಹುಟ್ಟಿನ ಮೂಲವಲ್ಲವೆ...
ಹೆಣ್ಣು ಮುಟ್ಟಾಗದಿದ್ದರೆ ಹೂ ಬಿಡದ ಮರವಂತೆ...
ಅದೇ ಹೆಣ್ಣು ಮುಟ್ಟಾದರೆ ಮೈಲಿಗೆಯಂತೆ...
ಮುಟ್ಟೆಂದು ಹಲವರು ಜರಿಯುವವರಲ್ಲ,
ಅವರ ಹುಟ್ಟಿನ ಗುಟ್ಟು ಯಾವುದು???
ತಿಳುವಳಿಕೆಯಿದ್ದರು, ತಿಳಿದಿದ್ದರೂ ಮಡಿವಂತಿಕೆಯ ಬಿಡಲಿಲ್ಲವೇಕೆ ??????-
ನನ್ನ ಹೃದಯ ಸಾಮ್ರಾಜ್ಯದ ಸಾಮ್ರಾಟ ನೀ...
ನನ್ನ ಕನಸಿನ ಪಯಣದ ನಾವಿಕ ನೀ...
ನನ್ನ ಉಸಿರಿನ ಪ್ರತಿ ಮಿಡಿತ ಏರಿಳಿತ ನೀ...
ನನ್ನ ಬರವಣಿಗೆಯ ಹಾದಿ-ಅಂತ್ಯದಕ್ಷರವೇ ನೀ...
ಮನಸಿನ ಮಂಟಪದಿ ಕಾದಿರುವೆ ನಿನಗಾಗಿ ನಾ...-
ನಿನ್ನಯ ಮೊದಲ ನೋಟಕ್ಕೆ ನಾ ಸೋತು ಶರಣಾದೆ...
ನನ್ನಯ ಪ್ರಬಲ ಕಾಟಕ್ಕೆ ನೀ ನಿಂತು ಮೂಕಾದೆ...
ಪ್ರೀತಿ-ಪದಗಳ ಪೋಣಿಸುತಾ ಪ್ರೇಮ ಶಾಹಿರಿಯ ನಾ ಹೆಣೆದೆ...
ಪ್ರಾಸ-ಪದಗಳ ಹುಡುಕುತಾ ಶ್ಯಾಮ ಸುಂದರನ ನಾ ನೆನೆದೆ...
ನಿನ್ನೆದೆಯ ಚಿಪ್ಪಿನಲಿ ಸ್ವಾತಿ ಮುತ್ತಿನಂತೆ ನಾ ಅವಿತು ಕುಳಿತುಕೊಳ್ಳುವಾಸೆ...
ನನ್ನೆದೆಯ ಗೂಡಿನಲಿ ಗುಡಿ ಕಟ್ಟಿ ನಿನ್ನ ನಾ ಪ್ರತಿಷ್ಠಾಪಿಸುವಾಸೆ......-
ಯೋಗ*****
ಮುಂಜಾನೆ ಮಡುವಿನಲ್ಲಿ ನಾವೆಲ್ಲ ತಪ್ಪದೆ ಮಾಡಿದರೆ ಯೋಗ...
ನಮ್ಮತ್ತಿರಕ್ಕೂ ಸುಳಿಯದು ಯಾವುದೊಂದು ಸಣ್ಣ ರೋಗ...
ವ್ಯಾಯಾಮವನ್ನು ನಿತ್ಯದ ದಿನಚರಿಯಲ್ಲಿ ಅಳವಡಿಸಿಕೊಂಡರೊಂದು ಭಾಗ...
ತುಟಿಕ್ ಪಿಟಿಕ್ ಎನ್ನದೆ ಯಮಧರ್ಮರಾಯನು ಬಿಡುವನು ಇಲ್ಲಿಂದ ಜಾಗ...-
ಪ್ರೀತಿಯಲಿ ಇರಬಾರದು ಯಾವಗಲೂ ಮುದ್ದಾಟ...
ಜೀವನದಲಿ ಎದುರಿಸಬೇಕು ಕಷ್ಟ ಸುಖಗಳ ಜಂಜಾಟ...
ನಂಬಿಕೆ ಕೆಟ್ಟರೆ ಆಗುವುದು ಜಗಳಗಳ ಆರ್ಭಟ
ಸಂಭಂದದ ಸೂತ್ರ ನಮ್ಮೊಟ್ಟಿಗಿದ್ದರೆ ಮೇಲೆ
ಹಾರುವುದು ನಮ್ಮ ಪ್ರೀತಿಯೆಂಬ ಗಾಳಿಪಟ.......-
ಖುಷಿ ಆದಾಗ ಖುಷಿ ಅಂಚಿಕೊಳ್ಳುತ್ತ, ಕುಣಿದಾಡುತ್ತಿದ್ದ, ಅಳುವಾಗ ಸಮಾಧಾನ ಮಾಡಿ, ಧೈರ್ಯ ತುಂಬುತ್ತಿದ್ದ ಸ್ನೇಹಿತರು, ಇಂದು ಒಂದು ಮಾತು ಆಡುವುದಕ್ಕೆ ಇಂದು ಮುಂದು ಯೋಚನೆ ಮಾಡುವಾಂತಾಗಿದೆ.......
-
ನಿನ್ನ ಕೆಂದಾವರೆಯಂತ ಮೊಗದಲಿ
ಕೆಂಡದಂಥ ಹುಸಿಮುನಿಸು ಕಂಡಾಗ
ಮುದ್ದಾದ ದುಂಬಿ ನಾನಾಗಿ
ನಿನ್ನ ಅದರಗಳನ್ನು ಚುಂಬಿಸಿ
ನಿನ್ನ ಮೊಗವರಳಿಸೊ ಅಸೆ ಹುಡುಗಿ......-
ನೀ ನನ್ನ ಜೊತೆಗಿರಲು,
ನಾ ನಾನಾಗಿಯೇ ಇರಲಾರೆ...
ನೀನೆನ್ನ ಗಲ್ಲ ಸವಿದ ಮೇಲಂತೂ,
ಶುರುವಾದ ತಳಮಳವ ನಾ
ಹೇಗೆ ತಡೆಯಲಿ ಹೇಳೂ.....-
💕ಇರಬೇಕು ಸಂಗಾತಿ.....
ನೋವು ಎಂದಾಗ ಎದೆಯ ಮೇಲೆ
ಮಲಗಿಸಿಕೊಂಡು ನನ್ನನ್ನು,
ನಾನಿದ್ದೀನಿ ಎಂದು ಸ್ಪಂದಿಸುವವನು.....💕
💕ಇರಬೇಕು ಸಂಗಾತಿ.....
ಎಲ್ಲರು ನಿನ್ನದೇ ತಪ್ಪು, ನೀನು ತಪ್ಪು ಮಾಡಿದೆ
ಎಂದಾಗ ಅವಳು ನನ್ನವಳು,
ಯಾವುದೇ ತಪ್ಪು ಮಾಡಿಲ್ಲ ಎನ್ನುವವನು......💕
💕ಇರಬೇಕು ಸಂಗಾತಿ.....
ತಂದೆ ತಾಯಿಯಂತೆ ಪ್ರೀತಿಸುತ್ತಾ
ಮಗುವಂತೆ ಮುದ್ದಿಸಿ
ಆಗಾಗ ಪ್ರೇಮಿಯಂತೆ ರೇಗಿಸುವವನು.......💕
💕ಇರಬೇಕು ಸಂಗಾತಿ.....
ಬದುಕಿಗೆ ಸ್ಪೂರ್ತಿ ತುಂಬುತ್ತಾ,
ಒಳ್ಳೆಯ ಗೆಳೆಯನಾಗಿ,
ನನ್ನ ಬಾಳಿಗೆ ಬೆಳಕು ತೋರಿಸುವವನು........💕-