Kavya B S   (ಕಾವ್ಯ ಬಿ ಎಸ್)
7 Followers · 1 Following

Joined 25 September 2020


Joined 25 September 2020
1 NOV 2021 AT 8:33

ಕನ್ನಡ ನಮ್ಮ ಹೆಮ್ಮೆ,
ಕರ್ನಾಟಕ ನಮ್ಮ ಹುಸಿರು....

ಲಿಪಿಗಳಿಗೆ ರಾಣಿಯಾಗಿಹ ಶೃಂಗಾರ ಸಿರಿಯಾ ಬೀಡು
ಗದ್ಯ ಪದ್ಯ, ತ್ರಿಪದಿ ಷಟ್ಪದಿ ಛಂದಸ್ಸುಗಳಿಂದ ಅಲಂಕಾರವಾದ ಕನ್ನಡಾಂಬೇಯ ನೋಡು
ಕನ್ನಡದ ಕಂಪ ಹಿಂಪಾಗಿಸಿಹ ಕವಿಜನಕರ ಬೀಡು
ವಿಶಿಷ್ಟ ತಿನ್ನಿಸು, ವಸ್ತ್ರವಿನ್ಯಾಸ, ಜನಪದ ಜಾತ್ರೆಗಳ ನೋಡು...

ವಾಸ್ತುಶಿಲ್ಪ ವಿಜ್ಞಾನದ ಐಸಿರಿಯ ಬೀಡು
ವೈವಿಧ್ಯತೆಯಲ್ಲೂ ಏಕತೆಯ ಅಡಿಪಾಯ ನೋಡು
ಭಾರತರತ್ನ, ಜ್ಞಾನಪೀಠ ಪುರಸ್ಕಾರಗಳ ಹಿರಿಮೆ ಇರುವ ಬೀಡು
ಸದಾ ಹಚ್ಚಹಸಿರಿನಿಂದ ಕೂಡಿರುವ ಕರುನಾಡ ನೋಡು...

ಕಣಕಣದಲ್ಲೂ ಬೆರೆತು ಮೈನವಿರೇಳಿಸುವ ಬೀಡು
ನಮ್ಮ ಹೆಮ್ಮೆ ನಮ್ಮ ಕನ್ನಡ ನಾಡು ನೀ ಒಮ್ಮೆ ಕಣ್ಣರಳಿಸಿ ನೋಡು....






-


2 OCT 2021 AT 9:33

ಮುದ್ದು ತಮ್ಮ...

ಅನಲ ಪರೀಕ್ಷೆಗಳ ಸಾಹಸವನ್ನು ತೋರುತ್ತಿರು
ಮುಳಿದು ಅಳಿಪಂ ಬಿಡದೆ ಮೆಟ್ಟಿನಿಲ್ಲುವ ಸುತನಾಗಿರು
ಸಮಸ್ತ ಸಮೃದ್ಧಿ ಕೀರ್ತಿಯಿಂದ ಭವದಲ್ಲಿ ಕಂಗೊಳಿಸುತ್ತಿರು
ಅನಾಗತದಿ ಆರೋಗ್ಯ ಶಾಂತಿ ಏಳ್ಗೆಯ ಹೊಂದುತ್ತಿರು
ಏಳೇಳು ಜನ್ಮಕೂ ನೀನೇ ನನ್ನ ಮುದ್ದು ಸಿದ್ದು ತಮ್ಮನಾಗಿರು.....

ಜನ್ಮ ದಿನದ ಶುಭಕಾಮನೆಗಳು......

-


1 OCT 2021 AT 20:54

ಬಿಸಿಲು ಮಳೆ ಇರಲಿ
ಕಷ್ಟ ಸುಖ ದುಃಖವಿರಲಿ
ಅಂಜದೆ ಅಳುಕದೆ ಮುನ್ನುಗ್ಗುತ್ತಿರು
ಗಟ್ಟಿ ಚಿನ್ನದ ರೇಖೆಯಾಗಿ ಹೊಳೆದು ಪ್ರಜ್ವಲಿಸುತಿರು
ಸುವರ್ಣ ಅಕ್ಷರದಿ ಅಚ್ಚಳಿಯದೆ ಉಳಿವ ಮನೆಯ ಮುದ್ದುಮಗಳಾಗಿರು.....

ಬಿಡಿಸಲಾಗದ ಬಂಧ
ನನ್ನ ನಿನ್ನ ಅನುಬಂಧ
ರವಿ ಚಂದುವಿನಂತಹ ಸಂಬಂಧ
ಅದುವೆ ಸಹೋದರತೆಯ ಸುಗಂಧ......👭😍✍️

-


15 SEP 2021 AT 9:32

"ಗುರುವಂದನೆ"
ಗುರುವಾಗಿ ಜ್ಞಾನಿಯಾಗಿ
ಗಣಕಯಂತ್ರ ತಂತ್ರಜ್ಞರಾದ ಚೈತನ್ಯ ಚಿಲುಮೆ,
ದವನ್ ಕಾಲೇಜಿನ ಧೃವ ತಾರೆ....

ಯುವಪೀಳಿಗೆಗೆ ಸದಾ ಸ್ಫೂರ್ತಿ
ನಿಮ್ಮ ಪಾಠದ ಶೈಲಿ, ನೀವು ಅರ್ಥೈಸುವ ರೀತಿ,
ಎಂದೂ ಮರೆಯಲಾಗದ ಗುರುಗಳಿವರು
ನಮ್ಮೆಲ್ಲರ ನೆಚ್ಚಿನ ಮಾರ್ಗದರ್ಶಕರು ರಂಜಿತ್ ನಾಯರ್..

ದುಂಡು ಮೊಗದ ಶಿಕ್ಷಕರಿವರು
ಸದಾ ಹಸನ್ಮುಖಿಯಾಗಿ ನಗುವವರು,
ನನ್ನೆಲ್ಲಾ ಜ್ಞಾನವ ಉಚಿತವಾಗಿ ನೀಡುವೆ ಆದರೇ
ಕೌಶಲ್ಯವನ್ನಲ್ಲವೆಂದು ಹೇಳುವವರು
ನಮ್ಮೆಲ್ಲರ ನೆಚ್ಚಿನ ಉಪನ್ಯಾಸಕರು ರಂಜಿತ್ ನಾಯರ್...

ಇರುಳಿನ ಗೂಡಿನೊಳಗೆ ಬೆಳಕ ತುಂಬಿಸಿದ ದೀಪಕ..
ಜ್ಞಾನದಿಂದ ಪೂರ್ಣ ಜ್ಞಾನದೆಡೆಗೆ ನಡೆಸುವ ಮಾರ್ಗದರ್ಶಕ
ಪ್ರೀತಿ ವಿಶ್ವಾಸದ ದ್ಯೋತಕ ನಮ್ಮೆಲ್ಲರ ಪ್ರೀತಿಯ ಉಪನ್ಯಾಸಕರು...
*ರಂಜಿತ್ ನಾಯರ್*
.....✍️😍

-


12 SEP 2021 AT 19:07

Waiting to win is common....But
working to win is genius.
Say....Make a nice day
Instead of.... Have a nice day.

-


30 MAY 2021 AT 10:32

ಕೊರೊನ..............

ಮೈಮರೆಯದಿರಿ
ಮರೆತು ಜೀವ ಬಿಡದಿರಿ,
ಮರಕಡಿಯದಿರಿ
ಆಮ್ಲಜನಕ ಕೊರತೆ ಅನುಭವಿಸದಿರಿ
ಇನ್ನಾದರೂಸ್ವಾರ್ಥಿಯಾಗದಿರಿ
ಮಾಸ್ಕಧರಿಸಿ, ಸಾಮಾಜಿಕ ಅಂತರದಿಂದಿರಿ
ಆರೋಗ್ಯವ ಕಾಪಾಡಿಕೊಳ್ಳಿರಿ.........

ಪ್ರಕೃತಿ ಕಲಿಸಿದ ಪಾಠವಿದು
ಮನುಕುಲಕ್ಕೆ ನೀಡಿದ ಅವಕಾಶವಿದು
ಇನ್ನಾದರೂದುರ್ಬಳಕೆ ಮಾಡದಿರುವುದು
ಜವಾಬ್ದಾರಿತನದಿ ಮುನ್ನಡೆಯುವುದು
ದುರ್ಬುದ್ದಿಯ ಬಿಟ್ಟು ಬದುಕುವುದು......

ಪ್ರಾಣ ಲೆಕ್ಕಿಸದೆ ಹೋರಾಡುವವರು ಕೆಲವರು
ಅಸಡ್ಡೆಮಾಡಿ ಆತಂಕ ತರುವರು ಕೆಲವರು
ಸಿಕ್ಕಿದ್ದೆ ಅವಕಾಶವೆಂದು ದುಡ್ಡು ಮಾಡುವರು ಕೆಲವರು
ಮನುಷ್ಯತ್ವ ಬಿಟ್ಟ ಮೂರ್ಖ ಮಾನವರು
ಪ್ರಾಣವಿದ್ದು ಮನಸಿಲ್ಲದ ಅಸ್ತಿಪಂಜರದವರು....

-


9 MAY 2021 AT 10:53

"ಮಾತೃ ದೇವೋ ಭವ"

ಅವನಿಯ ಅಂಶ ನೀ
ತಾಳ್ಮೆಯ ಆಗರ ನೀ
ಮಮತೆಯ ಸಾಗರ ನೀ...

ಋತುಗಳಲ್ಲಿ ವಸಂತ ನೀ
ನಸುಕಿನ ಹಿಬ್ಬನಿ ನೀ
ಮುಂಗಾರಿನ ಮಳೆ ನೀ...

ಕೋಗಿಲೆಯ ದನಿಯು ನೀ
ನವಿಲಿನ ನಾಟ್ಯ ನೀ
ಪ್ರಕೃತಿಯು ಸುಧೆಯು ನೀ....

ಹೂಗಳಲ್ಲಿ ತಾವರೆ ನೀ
ಮರಗಳಲ್ಲಿ ಕಲ್ಪವೃಕ್ಷ ನೀ
ಜೀವನದ ಸಂಜೀವಿನಿ ನೀ....

ಮನೆಯ ಜ್ಯೋತಿ ನೀ
ಕುಟುಂಬದ ಕೀರ್ತಿ ನೀ
ಅಪ್ಪನ ಮನದರಸಿ ನೀ.....

ಎಲ್ಲದಕ್ಕೂ ಮಿಗಿಲಾಗಿ ನನ್ನಯ ಮುದ್ದಿನ ಅಮ್ಮ ನೀ...

-


27 FEB 2021 AT 18:48

ಮುಖನೋಡಿ ಗೆಳೆತನ ಮಾಡುವವರಿಗಿಂತ
ಗುಣ ನೋಡಿ ಗೆಳೆತನ ಮಾಡುವವರು ಲೆಸಯ್ಯ,

ದೊಡ್ಡವರ ದೊಡ್ಡ.... ತನದ ಮುಂದೆ
ದಡ್ಡರೆಂಬ ಧೀರರೆ ಧರೆಯೊಳಗಿನ ಧೀಮಂತರ ಕಂಡಯ್ಯ....

-


5 FEB 2021 AT 21:20

ಪ್ರಪಂಚವನ್ನು ನನಗೆ ಪರಿಚಯಿಸಿದವರು,
ಪ್ರಪಂಚಕ್ಕೆ ನನ್ನ ಪರಿಚಯಿಸಿದವಳು,

ಕಣ್ಮುಂದಿವರುವ ನಿಸ್ವಾರ್ಥದ ದೇವರು,
ನಿಸರ್ಗದ ಕಡಲು, ಪ್ರೀತಿಯ ಒಡಲು,

ಹಸಿವಿನ ಬೆಲೆ ತಿಳಿಸಿದವರು,
ಹಸಿವೆ ತಿಳಿಯದಂತೆ ನೋಡಿಕೊಂಡಳು,

ಬಿದ್ದರೆ ಮೇಲೆ ಹೇಗೆ ಏಳಬೇಕೆಂದು ಕಲಿಸಿದವರು,
ಕೆಳಗ ಬೀಳದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾದವಳು,

ನಾ ಕಂಡ ನಾಯಕ,
ನಾ ಕಂಡ ನಾಯಕಿ,
🥰ಅಪ್ಪ - ಅಮ್ಮ🥰

-ಕಾವ್ಯ✍️.




-


31 JAN 2021 AT 16:47


ಇರುವುದೊಂದೇ ಬದುಕು ಎಲೇ ಮಾನವನೇ,
ಅದೇ ಕನಸುಗಳ ಸರಮಾಲೆ......
ಕಲ್ಲಿರಲಿ-ಮುಳ್ಳಿರಲಿ, ಹೂವಿರಲಿ-ಶ್ರಿಗಂಧವಿರಲಿ,
ಕನಸಲ್ಲಿಯು ಕನಸುಗಳು ಕಮರದಿರಲಿ......
ತಿರುಕರು ರಾಜ-ರಾಣಿಯಾಗಬಲ್ಲರು,
ಛಲ, ವಿಶ್ವಾಸ, ಗುರಿ ಮುಖ್ಯವಾಗಿದ್ದಲ್ಲಿ.....
ನೀ ಮಣ್ಣಲ್ಲಿ ಮಣ್ಣಾಗುವ ಮುನ್ನ
ನನಸಾಗಿಸು ನಿನ್ನ ಕನಸುಗಳನ್ನು........

- ✍️

-


Fetching Kavya B S Quotes