ಈ ದಿನ ನನ್ನ ಜನಮ ದಿನ
-
ಆಡಿ ನಲಿದವಳು ನಾನು.ಅಪ್ಪ ಅಂದ್ರೆ ಆಕಾಶದಷ್ಟು ಪ್ರೀತಿಯ ಅಂಗೈಯಲ್... read more
ದ್ವೇಷ ವಾಗಲಿ,ಕೋಪವಾಗಲಿ
ಹಾಗೇ ಇರದು.
ಕಾಲ ಚಲಿಸುತ್ತಾ ಹೋದಂತೆ
ಎಲ್ಲವೂ ಕ್ಷೀಣ ವಾಗುವುದು-
ನಾವು ಯಾರ ಮೇಲೆ ಅವಲಂಬಿತ ವಾಗುವ ಅವಶ್ಯವಿಲ್ಲ
ನಮ್ಮ ಖುಷಿಯನ್ನ ಯಾರಿಂದಲೂ ಕಸಿದುಕೊಳ್ಳಲಾಗದು
ಏನೇ ಸಮಸ್ಯೆ ಬಂದರೂ ದೈರ್ಯವಾಗಿ
ಎದುರಿಸಬಹುದು
-
ಬಿಡಿಸಿಕೊಳ್ಳಬೇಕೆಂದರೂ
ಬಿಡಿಸಲಾಗದ ಬಂಧ
ಮುರಿಯಲಾಗದ ಅನುಬಂಧ
ಮುರಿದರು ಮತ್ತೆ ಬೆಸೆದುಕೊಳ್ಳುವಂಥ
ಸಂಬಂಧ
ಯಾರೇ ನಮ್ಮನ್ನು ದೂರಿದರು
ದೂರ ತಳ್ಳದೆ ತಬ್ಬಿಕೊಳ್ಳುವ ಬಂಧವೇ
ಕುಟುಂಬ
ತಂದೆ ತಾಯಿ ಮಕ್ಕಳು ಮೊಮ್ಮಕ್ಕಳ
ಬಂಧ ಅದುವೇ ರಕ್ತದಲ್ಲಿ ಬೆಸೆದಿರುವ
ಸಂಬಂಧ-
ಅಪ್ಪ,ಅಮ್ಮ
ವಿದ್ಯೆ,ದುಡಿಮೆ
ಇವುಗಳಿಗಿಂತ ಮಿಗಿಲಾದವರು
ಯಾರಿಲ್ಲ
ನಮ್ಮನ್ನು ಕಾಯುವ ಕಾಪಾಡುವ
ಅದ್ಬುತ ಶಕ್ತಿಗಳು-
ಎಷ್ಟು
ಬಾರಿ
ಕೇಳಿದರು.....
ಹಾಡಿದರು.....
ಹಳೆಯದಾಗದ ಹಾಡು
ನನ್ನ ಮನದಲ್ಲಿ
ಗುನುಗುವ ಹಾಡು
ನನ್ನ ಅಪ್ಪ.....
ಎಂದು ಮರೆಯದ
ಮರೆಯಲಾರದ ಹಾಡು
ನನ್ನ ಅಪ್ಪ.....
ನನ್ನ ಅಪ್ಪ ನನ್ನ ಪ್ರೀತಿಯಿಂದ
ಮುದ್ದಿಸುತ್ತಿದ್ದ ಮುದ್ದು ಮಾತುಗಳು
ಕಿವಿಯಲ್ಲಿ ಮೆಲ್ಲಗೆ ಗುನುಗುತಿದೆ
-
ಯಾವುದೇ ಕೆಲಸ ಅಡೆತಡೆಯಾಗದಂತೆ ಸುಗಮವಾಗಿ ಸಾಗಲು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವುದೇ ಮುಂಜಾಗ್ರತೆ
-
ಹೊಸ ವರುಷದಲ್ಲಿ ಹೊಸ ಹರುಷ ಇರಲಿ
ನೀವು ಕಾಣುವ ಪ್ರತಿ ಕನಸು ನನಸಾಗಲಿ
ನೋಡಿ ಆನಂದ ಪಡುವ ಅ ಘಳಿಗೆ ಬೇಗ ಬರಲಿ-