When you are eating something while WFH and your boss calls you
-
Karthik S K
(Skk)
4 Followers · 3 Following
Just an ordinary person who likes to write mostly on ಕನ್ನಡ based on my experiences, curren... read more
Joined 13 September 2020
7 AUG 2021 AT 20:17
Javelin ಅನ್ನು ಎಸೆದು ಬಲು ದೂರ
ಸ್ಪರ್ಧೆಯಲ್ಲಿ ಮೊದಲಿಗನಾದ ಭಾರತದ ಕುವರ
ಗಳಿಸಿದ ದೇಶಕ್ಕೆ ಈ ಬಾರಿಯ ಮೊದಲ ಬಂಗಾರ
ನೀಗಿಸಿದ ಚಿನ್ನದ ಪದಕದ ಬರ
ದೇಶವೇ ಹೆಮ್ಮೆ ಪಡುವ ಧೀರ
ಇವನೇ ನಮ್ಮ ನೀರಜ್ ಚೋಪ್ರಾ
🥇🥇🥇🥇🥇🥇🥇🥇
🇮🇳🇮🇳🇮🇳🇮🇳🇮🇳🇮🇳🇮🇳🇮🇳-
23 JUL 2021 AT 18:48
ಒಂದೆಡೆ ಕೊರೋನಾದ ಮೂರನೇ ಅಲೆಯ ಕಾಟ
ಅದರ ನಡುವೆಯೇ ಶುರುವಾಗುತ್ತಿದೆ Olympics ಕ್ರೀಡಾಕೂಟ
ಹೋಗಿದೆ ಭಾರತದ ಬಲಿಷ್ಠ ತಂಡ ಜಪಾನ್‌ನ ತನಕ
ಈ ಸಾರಿ ಆದರೂ ದೊರಕುವುದೇ ಹೆಚ್ಚಿನ ಪದಕ!???-
20 JUN 2021 AT 20:34
ಎಲ್ಲರೂ ತಿಳಿಯುತ್ತಾರೆ ಈತನೊಬ್ಬ ಕೋಪಿಷ್ಟ
ಹಾಗಾಗಿಯೇ ಮಕ್ಕಳಿಗೆ ಅಮ್ಮನೆಂದರೆ ಬಲು ಇಷ್ಟ
ಪತ್ನಿ-ಮಕ್ಕಳ ಆಸೆ ಈಡೇರಿಸದೇ ಆಗುವನು ಒಮ್ಮೊಮ್ಮೆ ದುಷ್ಟ
ಆದರೆ ಆತನಿಗಷ್ಟೇ ಗೊತ್ತು ಆತ ಪಡುವ ಸಂಕಷ್ಟ
ತನ್ನ ಪ್ರೀತಿಯ ಹೆಚ್ಚು ವ್ಯಕ್ತ ಪಡಿಸದೇ ಎಲ್ಲರ ಕಾಯೋ ಮನುಜ ಶ್ರೇಷ್ಠ
ಮನೆಯವರ ಸಣ್ಣ ನಗುವಿನಿಂದಲೇ ಆಗುವನು ಬಲು ಸಂತುಷ್ಟ
ತನ್ನ ಸಂಸಾರ ಸುಖದಲ್ಲಿರಬೇಕೆಂಬ ಆತನ ನಿಲುವು ಮಾತ್ರ ಬಲು ಸ್ಪಷ್ಟ
ಅದಕ್ಕಾಗಿಯೇ ಹಗಲು ರಾತ್ರಿ ಶ್ರಮ ಪಡುವ ನಿಷ್ಠ-