...K swamy   (.)
249 Followers · 254 Following

Sep 18
ಬರಲು ಏನು ತಂದೆ
ಬರದು ಏನು ಹಿಂದೆ..
Joined 14 December 2019


Sep 18
ಬರಲು ಏನು ತಂದೆ
ಬರದು ಏನು ಹಿಂದೆ..
Joined 14 December 2019
21 FEB 2021 AT 10:49

ರೋಮಾಂಚನ ವೀ....ಕನ್ನಡ

-


1 JAN 2021 AT 17:11

ಸೆಳೆತವದು
ಕರೆತಿಹುದು
ಮತ್ತೆ ಮತ್ತದೆ ಗುಂಗಿನಲಿ
ಸಾನಿದ್ಯ ಸುಖದ
ಮತ್ತೆ ಹಾಗೆ
ಬಿಟ್ಟು ಬಿಡದೆ ಕಾಡುವುದು
ಮತ್ತದನ್ನೆ ಬೇಡುವುದು..

-


24 DEC 2020 AT 7:10

ಮೃದು ಹೃದಯ ಸ್ಥಾಪನೆಗೆ
ಮೊದಲು ದೇವರು ಸಾವಿರ
ಬಾರಿ ಯೋಚಿಸಿದ
ಮೆದುಳು ಮುಚ್ಚಿಡುವ
ಮುನ್ನ ಅದೇಕೊ ಕಠೋರವಾದ
ಮೆದುಳು ಹೃದಯಕ್ಕಿಂತ
ಮೆದುವಾದರೂ ಜನ
ಹೃದಯದ ಮೃದುತ್ವದ ಬಗ್ಗೆಯೇ
ಮಾತಾಡಿಕೊಳ್ಳುತ್ತಾರೆ..

-


28 NOV 2020 AT 12:06

ತಿರುವಿನ ಕೊನೆಯಲ್ಲಿ
ಅವಳ ಮನೆ
ಅನಿವಾರ್ಯವಾಗಿ
ನಿಧಾನವಾಗಿ
ಚಲಿಸಬೇಕು
ನನಗೂ ಅದೇ ಬೇಕು..

-


28 NOV 2020 AT 11:59

ಹೆಣ್ಣು ಮಕ್ಕಳಿಗೆ
ಬಹಳ ಹಿಂದಿನಿಂದಲೂ
ಅಲಂಕಾರದ ಬಗ್ಗೆ ಕಾಳಜಿ ಇದೆ
ಗಂಡು ಮಕ್ಕಳಿಗೋ
ಅವಳಂದ ಹೊಗಳಲಷ್ಟೇ
ಅಲಂಕಾರ ಸಾಕಾಗಿದೆ...

-


7 NOV 2020 AT 17:10

ತದೇಕ ಚಿತ್ತದೆ ನೋಳ್ಪ
ಅವನ ಕಾತರವ ಕಂಡು
ಕೇಳಿದಳು ಆಸೆಯೇ ?
ಮೆಲ್ಲನುಸುರಿದ ಅವ
ಬಳಿಸುಳಿದು, ಬರಸೆಳೆದು
ಮತ್ತದೆ ಪ್ರಶ್ನೆಯ ಕೇಳು
ನನ್ನ ಮೌನದುತ್ತರದ
ಕೌತುಕವ ಅರಿವೆಂದ..

-


7 OCT 2020 AT 18:23

ಯಾಂತ್ರಿಕತೆಗೂ
ತಾಂತ್ರಿಕತೆಗೂ
ವ್ಯತ್ಯಾಸ ತಿಳಿಯದ
ಮುಗ್ಧ ನಾನು
ರಸಿಕತೆಗೂ
ಪೋಲಿತನಕ್ಕೂ
ವ್ಯತ್ಯಾಸ ಗೊತ್ತಿರದ
ಮುಗ್ದೆ ಅವಳು...

-


2 OCT 2020 AT 18:25

ತಡೆಯದಿರು ಚೆಲುವೆ
ನಾ ಅಂಗಾತ
ಮಲಗುವೆ....

-


1 OCT 2020 AT 12:19

ಹೆಚ್ಚು ಕೊರಗದ
ಅಪ್ಪ ತುಸು ಹೆಚ್ಚೆ
ಗದ್ಗದಿತನಾಗಿದ್ದ

ನಿತ್ಯ ಸಂಕಟಪಡುವ
ಅಮ್ಮ ನಿರಾಳವಾಗಿದ್ದಳು

ಗೂಡು ಕಟ್ಟುವ ಕೆಲಸ
ಬಲ್ಲವನು ಅಪ್ಪ
ಗೂಡಿಲ್ಲದವರ ಪಾಡು
ಕಂಡವಳು ಅಮ್ಮ..

-


1 OCT 2020 AT 12:12

ಅವಳ
ಹೃದಯದರಮನೆಯ
ಬಾಗಿಲಲಿ ನಿಂತು
ನನ್ನ ಸ್ವಾಭಿಮಾನವನ್ನು
ಅಡವಿಟ್ಟು ಅವಳೆದರು
ಕೈಚಾಚಿದೆ,
ಬಾಗಿಲು ತೆರೆಯದೆ
ಕಿಟಕಿಯ ಮರೆಯಲೆ
ನಿಂತು ನೋಡಿ
ಕಿಟಕಿಯ ಪರದೆಯ
ಮುಚ್ಚಿ ಸಾಂಕೇತಿಕ
ತಿರಸ್ಕಾರ ತೋರಿದಳು
ಅಸಲಿಗೆ ನಾ ಈಗ
ನಿರ್ಗತಿಕ..

-


Fetching ...K swamy Quotes