🌹JYOTI PATIL 🌹   (✍️ ಜ್ಯೋತಿ ಪಾಟೀಲ್)
585 Followers · 368 Following

ನನಗೆ ಬರೆಯೊ ಹವ್ಯಾಸ, ಇತ್ತೀಚೆಗಷ್ಟೇ
Joined 19 May 2020


ನನಗೆ ಬರೆಯೊ ಹವ್ಯಾಸ, ಇತ್ತೀಚೆಗಷ್ಟೇ
Joined 19 May 2020
16 FEB AT 0:26

ಕೆಲವೊಂದಿಷ್ಟು ನಿನ್ನ ಸಮಯಗಳನ್ನು ನನಗಾಗಿ ಮೀಸಲಿಡುತ್ತಿರು.!
ಅಸಾಮಾನ್ಯಳು ಎಂಬ ಅನುಭವ ನನಗೂ ಆಗಲಿ.!!
🫠😇

-


16 FEB AT 0:21

ಒಂದು ದಿನ ನನ್ನ ಪಾಲಿಗೆ ದೇವರಾಗಿ ಬಿಡು...
ನಿನ್ನಲ್ಲಿ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶ ನೀಡು...
ಬೇಕಿಲ್ಲ ನಾನಿದ್ದೀನಿ ಎಂಬ ಭರವಸೆ
ಸಮಾಧಾನದ ನಿನ್ನ ಹಸ್ತ ತಲೆಯ ಮೇಲಿಡು ಸಾಕು
ಪುಟ್ಟ ಕಂದನಂತೆ ಅಳು ಮರೆತು ನಿನ್ನ ಮಡಿಲು ಸೇರಿಬಿಡುವೆ.....
🍁🍁

-


11 FEB AT 15:10

ಅವಶ್ಯಕತೆಗಳಿಗೆ ಹುಟ್ಟಿಕೊಂಡಿರುವ ಸಂಬಂಧಗಳು ಬುನಾದಿ ಇಲ್ಲದೆ ಕಟ್ಟಿದ ಮಹಲಿನಂತೆ....
ಯಾವಾಗ ಬೇಕಾದರೂ ಉರುಳಿ ಹೋಗುವವು...

-


11 FEB AT 14:52

ಇವಾಗೆಲ್ಲಾ I phone, dress, jwellery, gifts ಕೊಟ್ಟು ಪ್ರೀತಿಯ ನಿವೇದನೆಯಲ್ಲಿ ಪಡ್ಕೋತಾರಂತೆ, ಆದ್ರೆ ನನಗೆ ನಿನ್ನ ಪ್ರೀತಿ ಒಂದಿಷ್ಟು ಸಮಯ ಉಡುಗೊರೆಯಾಗಿ ನೀಡು ಸಾಕು ನಿನ್ನ ವಶವಾಗುವೆ...

-


8 FEB AT 12:07

ಸಿಹಿಯಾದ ಮಾತುಗಳು, ಪ್ರೀತಿಯ ಭಾಷೆಗಳು, ಸುಳ್ಳು ಆಣೆ ಪ್ರಮಾಣಗಳು, ಯಾವಾಗಲು ಜೊತೆಯಾಗಿರುವ ಪೊಳ್ಳು ಭರವಸೆಗಳು, ಇನ್ನು ಏನೇನೋ ಮಾಡ್ತಾರೆ ಜನ, ತಮ್ಮ ಖಾಲಿ ಸಮಯ ಕಳಿಯಲು, ಇಲ್ಲಿ ಬೆಲೆಕಟ್ಟಲಾಗದ ಭಾವನೆಗಳ ಮಾರಾಟಕ್ಕಿಟ್ಟವರೇ ಹೆಚ್ಚು, ನಿಜ ಒಲುವೆಂಬ ಕುಲುಮೆಯಲ್ಲಿ ಬೇಯುವ ಭಯದಿಂದರಬಹುದು.....
🤔🙄😑😔

-


9 DEC 2023 AT 0:14

ಸ್ವರ್ಗ ನರಕಗಳ ದರ್ಶನ ಮಾಡಿಸಿಬಿಡುತ್ತವೆ ನಿರ್ಧರಿಸುವಾಗಿನ ಆಲೋಚನೆಗಳು

-


8 NOV 2023 AT 15:50

ಪ್ರೀತಿ ಹಂಚಿ ಹೋಗು ನಗುತಲಿ
ಪರಿಸ್ತಿತಿಗಳು ಏನಿದ್ದರು ಎಂತಾದರು
ಮುಖ ಭಂಗಿಗದು ಬಾಧಿಸದಿರಲಿ

ಸುಖಿಯಂತೂ ಒಬ್ಬರಿಲ್ಲಾ ಈ ಜಗದಲ್ಲಿ
ಬದುಕು ಬಂಡಿಯ ಸಾಗಿಸಲೇಬೇಕು
ನೋವಲ್ಲೂ ನಗೆಬೀರಿ ಜಂಬದಲ್ಲಿ

ವಿಕಾರ ವಿಸ್ಮಯಕ್ಕೆ ತಲೆಬಾಗಿದರಲಿ
ಕಾಡುವುದು ಹಗಲಿರುಳು ಉರುಳುವವು
ಕ್ಷಣಕ್ಷಣವೂ ಮಸಣ ಕಣ್ಣೆದುರಲ್ಲಿ

ಪ್ರೀತಿ ಒಂದೆ ಇದ್ದರೆ ಬದುಕಲ್ಲಿ
ಕಾಲವದು ಕೇಡಾಗದು ನಂಬಿಕೆಗಳಿಗೆ
ಪ್ರೀತಿ ಹಂಚಿ ಹೋಗು ನಗುತಲಿ




-


8 JUN 2023 AT 10:27

ಇಂದಿಗೂ ನೀನು ನನ್ನವನೇ ಆಗಿರುವೆ ಎಂದು
ಅದೆಷ್ಟು ಹಗಲು ರಾತ್ರಿಗಳಿಗೆ
ನೀನು ನೆನಪಾಗಿ ಜೊತೆಯಾದೆಯೆಂದು
ಆಕಾಶ ನೋಡುತ ಚುಕ್ಕಿಗಳ ಎಣಿಸುವ ನೆಪದಲ್ಲಿ ನಿನ್ನ ಮರೆಯಲೆತ್ನಿಸಿ ಬೆರಳು ನೋಯಿತಷ್ಟೆ ಆದ್ರೆ ನಿನ್ನ ಮರೆಯಲಾಗಲೆಂದು
ಒಂದು ಮಾತು ಹೇಳಲಿಲ್ಲಾ
ನೀನು ಮರೆತರು ನಾನೆಂದು ಮರೆಯಲಾರೆ ಎಂದು
ಇಂದಿಗೂ ನೀನು ನನ್ನವನೇ ಆಗಿರುವೆ ಎಂದು

-


8 JUN 2023 AT 9:52

ಅಂದುಕೊಳ್ಳದ್ದು ಅನಿರೀಕ್ಷಿತವಾಗಿ ಸಿಕ್ಕು ಖುಷಿಪಡುವುದೇ ಭಾಗ್ಯ.....

-


2 MAY 2023 AT 11:11

ಅವನ ಅಲೆದಾಟಕ್ಕೆ ಗಮ್ಯ ಸಿಗಲು, ಅವನ ಚಡಪಡಿಕೆಗೆ ಶಾಂತಿ ಸಿಗಲು, ಅವನ ಅಸ್ತಿತ್ವಕ್ಕೆ ಗುರುತು ಸಿಗಲು ಮತ್ತು ನನ್ನ ನೆಪದಲ್ಲಿ ಅವನು ಆಧ್ಯಾತ್ಮಿಕ ಪ್ರೀತಿಯಿಂದ ಬದುಕಲು ಸಮಯ ನನ್ನ ವಿಳಾಸವನ್ನು ಹುಡುಕುತ್ತಲೇ ಇರುತ್ತದೆ....💓💓

-


Fetching 🌹JYOTI PATIL 🌹 Quotes