ಮನೆಯ ಸ್ಥಿತಿ ಹಾಗೂ ಮನೆ ಸ್ಥಿತಿ
ಗಂಡ ಹೊರಗಡೆ ಹೋದರೆ,
ಹೆಂಡತಿಗೆ ವಿಶ್ರಾಂತಿ ನಿಲಯ.
ಹೆಂಡತಿ ತವರಿಗೆ ಹೋದರೆ,
ಗಂಡನಿಗೆ ನೆಮ್ಮದಿ ನಿಲಯ.
ಮಕ್ಕಳು ಮನೆಯಲ್ಲಿ ಇದ್ದರೆ,
ಮನೆ ಯುದ್ಧಕಾಂಡ.
ಮಕ್ಕಳು ಶಾಲೆಗೆ ಹೋದರೆ,
ಶಾಂತಿ ನಿವಾಸ.
-
Jyothi Bellary
(ಛಲಗಾತಿ J🔥thi)
2.1k Followers · 72 Following
ಜ್ಯೋತಿ ಎಂಬ ಹೆಸರಿನೊಂದಿಗೆ,
ಛಲಗಾತಿ ಎಂಬ ಹೆಸರು,
ನನ್ನ ನಾಮಧೇಯವಾಯಿತು,
ಅದಕೆ ಕಾರಣ ಈ ನನ್ನ yourquote🙏🙏... read more
ಛಲಗಾತಿ ಎಂಬ ಹೆಸರು,
ನನ್ನ ನಾಮಧೇಯವಾಯಿತು,
ಅದಕೆ ಕಾರಣ ಈ ನನ್ನ yourquote🙏🙏... read more
Joined 20 March 2018
8 MAR AT 11:53
11 JUN 2023 AT 18:36
ಓ ಪ್ರಕೃತಿ ಮಾತೆಯೆ
ನಿನ್ನದು ಅದೆಂತಹ ತಾಳ್ಮೆ!
ಕಸವನ್ನು ಎಸೆಯುವ ಮನುಷ್ಯನನ್ನೇ,
ಒಡಲೊಳು ಇಟ್ಟುಕೊಂಡಿರುವ,
ನಿನ್ನ ಆ ಸಹೃದಯಕ್ಕೆ,
ನನ್ನದೊಂದು ಕೋಟಿ ನಮನ ತಾಯೆ.
🙏🙏
-
18 JUN 2022 AT 19:51
ಇಳಕಲ್ ಸೀರೆ ಪುಸ್ತಕ,
ಅಚ್ಚುಕಟ್ಟಾಗಿ ಬರೆದ ಲಲಿತೆ,
ಕನ್ನಡ ಕಂಪು ಸೂಸಿ,
ಎಲ್ಲರ ಮನವ ತಣಿಸಿದ ಲಲಿತೆ.
ನಮ್ಮ ಸಂಸ್ಕೃತಿಯ,
ಪರಂಪರೆಯನ್ನು ಉಳಿಸಿ,
ಬೆಳೆಸುವ ಇವರ ರೀತಿ,
ಮೆಚ್ಚಲೆ ಬೇಕಾದ ಸಂಗತಿ.
ಕಾಲೇಜಿನ ಪ್ರಾಂಶುಪಾಲರಾಗಿ
ಹೆಣ್ಣು ಒಂದು ಶಕ್ತಿ ಎಂದು
ತೋರುವ ಇವರ ರೀತಿ
ಮೆಚ್ಚಲೆ ಬೇಕಾದ ಸಂಗತಿ.
ಹೆಣ್ಣೊಂದು ಕಲಿತರೆ
ಶಾಲೆಯೊಂದು ತೆರೆದಂತೆ ಎನ್ನುವ ಹಾಗೆ
ಹೆಣ್ಣು ಕಾಲೇಜಿನ ಪ್ರಾಂಶುಪಾಲೆಯಾದರೆ
ಉತ್ತಮ ಸಮಾಜ ನಿರ್ಮಿಸಿದಂತೆ
ಎನ್ನುವುದಕ್ಕೆ ನಿದರ್ಶನ ಈ ಲಲಿತೆ.
- ಜ್ಯೋತಿ ನಿರಂಜನ್.ಜಿ-