ಅಳುತ್ತಿದೆ ನಗುವು ಬಿಕ್ಕಳಿಸಿ...
ಸೋತಿದೆ ಒಲವು ಮಂಡಿಯೂರಿ...
ನರಳುತ್ತಿವೆ ಭಾವನೆಗಳು ಪ್ರತಿಸಾರಿ...
ಕೆಣಕುತ್ತಿದೆ ಮೌನವೊಂದು ಮಿತಿಮೀರಿ...
ಗುರಿಕಾಣದ ದಾರಿಯಲ್ಲಿ ಒಬ್ಬಂಟಿ ಸಂಚಾರಿ..
ಕಳೆದುಹೋಗುತ್ತಿವೆ ಕನಸುಗಳೆಲ್ಲ ಕೈಜಾರಿ...
ಜೀವನವೇ ಅರ್ಥವಾಗದೇ ಇರೋ ಕಾದಂಬರಿ...
ದಣಿದು ಹುಡುಕಾಡುತ್ತಿರುವೆ ವಾಸ್ತವದ ದಾರಿ...-
ಭಾವನೆಗಳು ಸತ್ತುಹೋಗಿ ಈ ಮನವು ಕಲ್ಲಾಗಿ ಬದಲಾಗಿದೆ...ವಾಸ್ತವಕ್ಕಾಗಿ ಈ ಗಟ್ಟಿತನ ಅಷ್ಟೇ..
-
ಶಾಂತವಾಗಿರೋ ಸಮುದ್ರ ಎಂದಿಗೂ ಒಬ್ಬ ಉತ್ತಮ ನಾವಿಕನನ್ನ ಸೃಷ್ಟಿ ಮಾಡಲು ಸಾಧ್ಯವಿಲ್ಲಾ... ಹಾಗೇ ನಮ್ಮ ಜೀವನದಲ್ಲೂ ಕಷ್ಟ- ನೋವುಗಳು ಇಲ್ಲದೆ ಯಾವ ವ್ಯಕ್ತಿಯು ಪರಿಪೂರ್ಣ ವ್ಯಕ್ತಿತ್ವ ಆಗೋಕೆ ಸಾಧ್ಯವಿಲ್ಲಾ...
-
ನನ್ನ ನೋವಿಗೆ ಸ್ಪಂದಿಸೋರಿಗಿಂತ... ಅದ್ನ ಸಂಭ್ರಮಿಸೋರೆ ಜಾಸ್ತಿ ಇರೋದು ನನ್ನ ಬದುಕಲ್ಲಿ..
-
ನಾಟಕೀಯ ಜೀವನಕೇ ಸಾಕ್ಷಿಯಾಗಿದೆ ಸದ್ಯದ ನನ್ನ ಈ ಬದುಕು...
ಎದೆಯಾಳದಲ್ಲಿ ನೋಹಿಸುತಿರೋ ಗಾಯಕೇ ಔಷದಿ ಇಲ್ಲದಂತಾಗಿದೆ...
ಮನಸಿನ ತುಂಬಾ ಗೊಂದಲಗಳು, ಒಂದಿಷ್ಟು
ಆಸ್ಪಷ್ಟ ಯೋಚನೆಗಳು, ಪ್ರಶ್ನೆಸೋ ಒಂಟಿತನ,
ಕಾಡುವ ಅತೃಪ್ತ ಭಾವನೆಗಳು, ವಾಸ್ತವ & ಕಲ್ಪನೆಗಳ ನಡುವಿನ ಸಂಘರ್ಷ,
ಎಲ್ಲಾ ಸೇರಿ ಬದುಕಿನ ನೆಮ್ಮದಿಯನ್ನೇ ಅಂತ್ಯಗೊಳಿಸಲು ಯತ್ನಿಸುತ್ತಿವೆ...-
ಅಗತ್ಯಗಿಂತ ಜಾಸ್ತಿ ಒಳ್ಳೆತನನ,
ಅವಶ್ಯಕತೆಗಿಂತ ಜಾಸ್ತಿ ಪ್ರೀತಿ & ನಂಬಿಕೆನ
ಯಾರ ಮೇಲೂ ತೋರ್ಸೋಕೆ ಹೋಗಬಾರದು...
ಅದ್ಕೆ ಬೆಲೆ ಕೊಡೋರಿಗಿಂತ ತಮ್ಮ ಸ್ವಾರ್ಥಕೇ ಬಳಸಿಕೊಳೋರೆ ನಮ್ಮ ಸುತ್ತ ಮುತ್ತ ಇರೋದು...-
ನನ್ನ ಮನದ ಮುಗಿಲಲ್ಲೂ ನಿರಾಸೆಯ ಮಳೆ ಸುರಿಯುತ್ತಿದೆ..
ಬೀಸುವ ತಂಗಾಳಿಯೂ ಮೌನವ ತಬ್ಬಿ ಅಳುತ್ತಿದೆ..
ಕಂಡ ಕನಸುಗಳ ಸೋಲಿಗೆ ಅಂತರಾಳವು ಹೊತ್ತಿ ಉರಿದಿದೆ..
ಅವಕಾಶವಾದಿ ಸಂಬಂಧಗಳ ಬೆಲೆಯೂ, ಕಾಲ ಕಳೆದಂತೆ ನೈಜರೂಪ ಬಯಲಗುತ್ತಿದೆ..
ಆದರೂ ಬದುಕಬೇಕಿದೆ ಎಲ್ಲಾ ಬೇಸರ, ನೋವುಗಳ ಮರೆತು ಸಣ್ಣ ನಗುವಿನೊಂದಿಗೆ
ಈ ಒಂಟಿ ಪಯಣ ಸಾಗಬೇಕಾಗಿದೆ...-
ತುಂಬಾ ಸಲ ನನ್ನ ಭಾವನೆಗಳನ್ನ ಬಚ್ಚಿಡೋ ಪ್ರಯತ್ನ ಮಾಡ್ತೀನಿ...
ಅದ್ರೆ ಪ್ರತಿ ಪ್ರಯತ್ನದಲ್ಲೂ ಸೋಲ್ತನೇ ಇದೀನಿ...
ಅ ಭಾವನೆಗಳ್ನ ಕೊಲೋ ಮನಸು ಇಲ್ಲ and ಸಾಕೋ ಇಷ್ಟನ್ನೂ ಇಲ್ಲ...
ಕೃತಕ ನಗುವನ್ನು ಮುಖದಲ್ಲಿ ಧರಿಸಿ ದಿನಗಳ ಕಳೆಯುತ್ತಿರುವೆ...
-
ನಾವಿಬ್ಬರು ಕಂಡ ಕನಸೊಂದು ಯಾರೋದೋ ಅಪರಾಧಕೇ ಸಮಾಧಿಯಾಗಿದೆ...
ನೂರಾರು ನೆನಪು,ಭರವಸೆಗಳನ್ನು ಹೊತ್ತ ಮನಸು ಮುಖವಾಗಿ ಹೋಗಿದೆ..
ಪ್ರೀತಿಯಲ್ಲಿ ಸೋತ ಈ ಕಂಗಳು ಸಹ ಕಂಬನಿಗೂ ಬೇಡವಾಗಿದೆ...
ನಾ ಪ್ರೀತಿಸಿದ ಜೀವವೊಂದು ನೋವಲ್ಲಿ ಸಪ್ತಪದಿಯ ತುಳಿಯ ಹೊರಟಿದೆ..
ನಾ ಬರೆದ ಪ್ರೀತಿಯ ಅಧ್ಯಾಯವೊಂದು ಮೌನದಿ ಕೊನೆಯಾಗಿದೆ.. 💔-
ಈ ಜೀವನದಲ್ಲಿ ಇಟ್ಕೊಬೇಡ ಯಾವುದೇ ನಿರೀಕ್ಷೆ...
ನೀ ಇಡೋ ಪ್ರತಿಹೆಜ್ಜೆನೂ ಒಂದು ರೀತಿಯ ಪರೀಕ್ಷೆ...
ಸೋತ ಮನಕ್ಕೆ ಮಾತುಗಳಿಗೆ ಮೌನವೇ ಶ್ರೀರಕ್ಷೆ...
ಯಾರಬಳಿಯೂ ಕೇಳಬೇಡ ಸ್ನೇಹ ಸಂಬಂಧಗಳ ಭಿಕ್ಷೆ..
ಯಾಕೇ ಬೇಕು? ಈ ಪ್ರೀತಿ ಅನ್ನೋ ಮಧುರ ಶಿಕ್ಷೆ...-