ನನ್ನ ಜೀವನದ ಅರ್ಥನೇ ನೀನೂ
ನಿನ್ನನ್ನ ಮೋಸ ಮಾಡಿ ಜೀವನ ಮಾಡೊದ್ರಲ್ಲಿ ಅರ್ಥ ಏನಿದೆ...?
ಜೀವನವು ನೀನೆ ಜೀವಾಳವು ನೀನೆ
ನಿನ್ನ ಹೊರತು ಜೀವನವೇ ಶೂನ್ಯ.
ಬಾಳಸಂಗಾತಿ.-
ಡಾ. ಬಾಬಾ ಸಾಹೇಬ್ ಅಂಬೇಡ್ಕರ್
ಯಾರು ಅಂತ ಕೇಳಿದ್ರೆ
ಐದು ಸಾವಿರ ವರ್ಷಗಳ ಜಾತಿ ಬೆಲಿಯನ್ನ
ಕಿತ್ತೊಗೆದು, ಸಮಾನತೆಯ ಮಹಾ ಸಾಗರ ಕಟ್ಟಿದ ಸಂವಿಧಾನ ಶಿಲ್ಪಿ ಅಂತ ಹೆಮ್ಮೆಯಿಂದ ಹೇಳು.-
ನೀನೂ ಒಬ್ಬನ ಒದ್ದು ಬೆಳೆದ್ರೆ
ನಿನ್ನನ್ನ ಇನ್ನೊಬ್ಬ ಒದ್ದು ಬೆಳೆಯಲು ಕಾಯ್ತಿರ್ತಾನೆ.-
ರಾತ್ರಿ ಎಂಬುದು ಕತ್ತಲೆಯ ಕಪ್ಪು
ದಿನವು ಕತ್ತಲೆಯ ಮರಿಚಿಕೆಯಾಗೆ ಇರುತ್ತಿತ್ತು
ನಮ್ಮ ಪಾಲಿಗೆ
ಒಂದು ವೇಳೆ ಭೀಮ ಸೂರ್ಯನ
ಕಿರಣಗಳು ನಮ್ಮ ಮೇಲೆ ಬಿಳದೆ ಹೋಗಿದ್ರೆ,
ಸಂವಿಧಾನ ಬರೆದು ಅಧಿಕಾರದ ಕೀಲಿ ಕೈ
ನಮ್ಮ ಕೈಗಿಡದೆ ಹೋಗಿದ್ರೆ
ಶಾಲೆಯೂ ಕೂಡ ಮರಿಚಿಕೆಯಾಗೆ ಇರುತ್ತಿತ್ತು
ನಮ್ಮ ಪಾಲಿಗೆ.-
ಒಳ್ಳೆಯವರಲ್ಲಿ ಕೆಟ್ಟತನ
ಹುಡುಕುತ ಹೋದರೆ,
ಭೂಮಿ ಮೇಲೆ ನಿನ್ನಷ್ಟು
ಕೆಟ್ಟವರಾರಿಲ್ಲ..-
ಕೆಟ್ಟ ಮಾತಿನ ಅರ್ಥ ಹುಡುಕಿದರೆ
ಒಳ್ಳೆ ಮಾತುಗಳು ಕಳೆದೆ ಹೋಗುತ್ತವೆ.
-
ಪಾದದಡಿಗೆ ಮುಳ್ಳಂಟಿದರೆ ತಗಿಯಬಹುದು,
ಮನಸಿನ ಭಾವಕೆ ಮಾತಂಟಿದರೆ ಮರಿಯುವುದು ಕಷ್ಟ.-
ಇಲ್ಲಿ ಎಲ್ಲರು ಆತ್ಮೀಯರೆ
ಆದರೆ ಸಂದರ್ಭ ಅಪರಿಚಿತರಾಗಿ ಮಾಡುತ್ತೆ.
-
ಜೀವನವೇ ಸಮಸ್ಯೆಗಳ ಸಾಗರ,
ಇಲ್ಲಿ ಬದುಕು ಅನಿವಾರ್ಯ, ಅಂದ ಮೇಲೆ
ನಗುತಾ ಬಾಳುವುದರಲ್ಲಿ ನಷ್ಟವೆನಿಲ್ಲ..
ನಗು
- ಜೀತ್ ಮೂಲಭಾರತಿ-