ಈ ಜಗವೇ ಹೀಗೆ,
ಸರಿದರೆ ಒತ್ತುವವರು
ಒತ್ತಿದರೆ ಸರಿಯುವರು...-
Jayateerth Desai
(ಜಯತೀರ್ಥ ದೇಸಾಯಿ)
140 Followers · 184 Following
Joined 29 December 2018
14 APR AT 23:20
ನಂಬಿಕೆಯ ಸೇತುವೆ
ಕುಸಿದುಬಿದ್ದು
ಅವನಿಗಾಗಿ ಕಣ್ಣೀರು ಸುರಿಸಿ
ಕಣ್ಣೀರು ಬತ್ತಿರುವಾಗ
ಆಣೆ ಕಟ್ಟು ಕಟ್ಟುವ ಮಾತೆಲ್ಲಿ..?-
12 APR AT 22:42
ಕೆಟ್ಟ ಘಟನೆಗಳ ಕಸದಂತೆ
ಹೊರ ಹಾಕಿ
ಸಿಹಿ ನೆನಪುಗಳನು
ಮುತ್ತು ರತ್ನದಂತೆ
ಮನವೆಂಬ ಸಾಗರದ
ಗರ್ಭದೊಳು
ಇಟ್ಟುಕೊಳ್ಳಲು
ಮನಸೊಂದು
ನೆನಪುಗಳ ಸಾಗರ...-
2 JUN 2024 AT 22:38
ದುಃಖ ಹಂಚಿಕೊಂಡಷ್ಟು
ಕಡಿಮೆಯಾಗುತ್ತದೆ
ಸಂತೋಷ ಹಂಚಿಕೊಂಡಷ್ಟು
ಹೆಚ್ಚಾಗುತ್ತದೆ...-