Jayashree R Moger  
0 Followers · 3 Following

Joined 6 August 2024


Joined 6 August 2024
19 AUG 2024 AT 6:52

ರಕ್ತ ಸಂಬಂಧಿಗಳಲ್ಲ, ಹೃದಯ ಸ್ಪರ್ಶಿಸಿದೆ...
ಕರುಳಬಲ್ಲಿಯು ಅಲ್ಲ, ಕಾಳಜಿ ತೋರುವಂತಾಗಿದೆ...
ಮೊಗದಲ್ಲಿ ಸಂತೋಷದ ಪುಷ್ಪ ಬಾಡದಿರಲಿ...
ನಯನ ತೇವವಾದರೂ,ಕಾರಣ ಸಂತೋಷಕ್ಕಾಗಿರಲಿ...
ನನ್ನೆಲ್ಲಾ ನೋವಲ್ಲೂ ಪಾಲುದಾರ,
ಮನ ಕಟ್ಟಬಯಸಿದೆ ನಿಮಗೊಂದು ರಕ್ಷಾದಾರ
ಕರುಣಾಮೂರ್ತಿಯ ಸಾಹುಕಾರ,
ದೈವ ಇಚ್ಚೆಯಂತೆ ಬಾಳನಡುವಲ್ಲಿ ದೊರೆತ ಸಹೋದರ...

-


15 AUG 2024 AT 19:14

ಪ್ರತಿಯೊಬ್ಬರ ಜೀವನದ ಗುರುವೇ ಸಮಯ
ಸಮಯ ಸರಿದಂತೆ, ಜಗದಲ್ಲಿ ಎಲ್ಲವೂ ಮಾಯ
ನಾವು ಅರಿತು ಬಾಳುವೆವು ನಿನ್ನ ಮೌಲ್ಯ
ಒಮ್ಮೆ ನೀ ಹಿಂದಿರುಗಿಸಿ ಕೊಟ್ಟರೆ, ನಮ್ಮ ಬಾಲ್ಯ
ಕೆಲವೊಮ್ಮೆ ಅನಿಸುವುದು, ಈ ಸಮಯ ತುಂಬಾ ಕ್ರೂರಿ
ನಡೆಯೋದಿಲ್ಲ ಸಮಯದ ಮುಂದೆ ನಮ್ಮ ಪಿತೂರಿ
ನೀ ಆಗಿರುವೆ, ಕೊಂಡುಕೊಳ್ಳಲಾಗಷ್ಟು ದುಬಾರಿ ಇದನ್ನರಿತು ನಿಭಾಯಿಸಲೇಬೇಕು ನಮ್ಮ ಜವಬ್ದಾರಿ
ಸಮಯಕ್ಕೆ ಸರಿಯಾಗಿ ಸೇರಲೇಬೇಕು ನಮ್ಮ ಗುರಿ
ಸಮಯದ ಜೊತೆಗೆ ಸಾಗುತಲಿರಲಿ ನಿನ್ನ ದಾರಿ......

-


10 AUG 2024 AT 19:50

ಟಾರಿನ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಇರುವುದು ಅದರದೇ ಆದ ನಿಲ್ದಾಣ,
ಜಂಜಾಟದ ಸಂಚಾರದಲ್ಲಿ ಮಾಡಲೇಬೇಕು ಜೀವನವೆಂಬ ಪ್ರಯಾಣ..
ಸಂಚರಿಗಳಾದ ನಾವು ಬಯಸುವುದು, ನಮ್ಮ ನಿಲ್ದಾಣ...
ನಿಲ್ದಾಣ ಬಂದರೂ, ಪಯಣ ನಿಲ್ಲದೆ ಮತ್ತೆ ಸಂಚರಿಸುವುದು ವಾಹನದ ಪ್ರಯಾಣ...

-


8 AUG 2024 AT 19:26

ಕಡಲು... ಕರಾವಳಿಯ ಕಡಲು...
ನಿನ್ನ ನೋಡಿದಾಗ ನೆನಪಾಗುವುದು ತಾಯಿಯ ಮಡಿಲು...
ನಿನ್ನಿಂದಬೀಸುವ ತಂಗಾಳಿಗೆ ಮನಸೋಲದವರಿಲ್ಲ...
ನಿನ್ನಬ್ಬರದ ಆರ್ಭಟಕ್ಕೆ ಎದುರು ನಿಂತವರಿಲ್ಲ...
ನೀ ಶಾಂತವಾಗಿದ್ದಾಗ,ನಿನ್ನಲೆಗಳ ನರ್ತನಕ್ಕೆ ತಲೆದೂಗಿಸುವರೆಲ್ಲ...
ನೀ ಮುನಿದಾಗ, ನಿನ್ನಲೆಗಳ ಪ್ರದರ್ಶನಕ್ಕೆ ತಲೆಬಾಗುವರೆಲ್ಲ...
ನಿನ್ನ ಮಡಿಲಲ್ಲಿ ಸಿಗುವ ನೆಮ್ಮದಿ,ಕೈ ಬೀಸಿ ಕರೆಯುವುದು ನಿನ್ನ ಬಳಿ...
ಬಂದರೆ ನಿನ್ನ ಬಳಿ, ಬಯಸದು ಮನ ಬರಲು ಮರಳಿ...
ನಿನ್ನ ನೋಡಿದಾಗ ಮೊಗದಲ್ಲಿ ತಂತಾನೇ ಮೂಡುವುದು ಮಂದಹಾಸ...
ಜೊತೆಜೊತೆಗೆ ನೆನಪೊಂದು ಬಿಕ್ಕಳಿಸಿ ಬಂದು, ನಿಲ್ಲಿಸುವುದು ಎದೆಯೊಳಗಿನ ಶ್ವಾಸ...
ನಿನ್ನೊಡನೆಯೇ ದಿನ ಕಳೆಯಲು ಬಯಸುವುದು ಮನ,
ಕಾಣದ ಕಡಲಿಗೆ ಹಂಬಲಿಸಿದೆ ಈ ಮನ...

-


6 AUG 2024 AT 21:40

ಮನದಲ್ಲೊಂದು ಮುಗ್ಧತೆಯನ್ನಿರಿಸಿಕೊಂಡ ತುಂಟಿ...
ಬೈಗುಳದಲ್ಲಿ ಅರ್ಥವಾಗದಿರುವುದೇ ಅಜ್ಜಿ-ಶುಂಠಿ...
ನಗುವಿನಿಂದ ಕಂಗೊಳಿಸಿದ ನೀ ಹೋದಂತಹ ತಾಣ...
ನಿಲ್ಲದೇ ಸಾಗಲಿ ನಿನ್ನ ಮುಗ್ಧತೆಯ ಈ ಯಾನ...
ನಿನ್ನನ್ನು ನೋಡಿ ಒಮ್ಮೊಮ್ಮೆ ನಾಚುವುದು ಆ ಶಶಿ...
ಶಶಿಯ ಅಂಗಳದಲ್ಲೆ ಕನಸು ನನಸಾಗಲಿ, ಅದುವೇ ನನಗೆ ಖುಷಿ...

-


6 AUG 2024 AT 18:51

ಬದುಕೇ ನೀನೆಷ್ಟು ಒಗಟಾಗಿರುವೆ...?
ಯಾರು ಭೇಧಿಸದ ಕಗ್ಗಂಟಾಗಿ ಇರುವೆ...
ನಿನ್ನ ರಹಸ್ಯ ತಿಳಿದರೆ ಈ ಜಗತ್ತಾಗುವುದು ಬೆತ್ತಲೆ...
ಅದರೊಳಗೆ ಕಳೆದುಕೊಳ್ಳಬೇಕು ನಮ್ಮೊಳಗಿನ ಕತ್ತಲೆ...
ಕಳೆದು ಹೋಗಿರುವ ಪ್ರತಿಯೊಂದು ಕ್ಷಣವೂ ಪ್ರಶ್ನೆಯೇ...
ಉತ್ತರಕ್ಕಾಗಿ ಹಪಹಪಿಸುವ ಮನಕ್ಕೆ ಸಿಗುವುದು ಯಾತನೆಯೇ...
ಜಯಶ್ರೀ R. ಮೊಗೇರ

-


Seems Jayashree R Moger has not written any more Quotes.

Explore More Writers