Jayaprakash Hudali   (ಜೆಪಿ (ಸ್ವಾತಿಮುತ್ತು))
19 Followers · 9 Following

read more
Joined 9 April 2020


read more
Joined 9 April 2020
4 APR 2022 AT 23:40

ಮನಸ್ಸಿಗೆ ಇಲ್ಲ ನೆಲೆ
ಮನಸ್ಸೆ ನಿನೇಕೆ ಚಂಚಲೆ...??
ಜಗವ ಸುತ್ತುವ ನೀ ಅಲೆಮಾರಿ
ಮಾಡದಿರು ನನ್ನನ್ನು ಸೋಮಾರಿ
ನಿನ್ನ ಬಲೆಯ ಮೀನು ನಾನು
ಕತ್ತಲೆಯ ಕೋಣೆಯಲ್ಲಿ ಬಂಧಿಸಿರುವೆ ನೀನು
ನಿನ್ನ ಬಲೆಯಿಂದ ಬಿಡುಗಡೆ ಮಾಡು ನನ್ನನ್ನು
ನಿನಗೆ ಹಾಕಿದಾಗಲೇ ಮೂಗುದಾರ
ನಾ ಆಗುವೆ ಸರದಾರ
ನಿನಗೆ ಹಾಕುವರಾರು ಮೂಗುದಾರ...??

-


6 MAR 2022 AT 21:39

ಸತ್ಯವಂತರು...

ಸತ್ಯವನ್ನು
ಒಪ್ಪುವರಲ್ಲದೆ
ಅಪ್ಪುವರು ಕೂಡಾ...
ಅದು ಸತ್ಯವಂತರಗೆ ಮಾತ್ರ ಸಾಧ್ಯ.

-


28 FEB 2022 AT 22:32

ಜೀವನ ಅಂದ್ರೆ tension
ಅದಕ್ಕಿಲ್ಲ ಯಾವುದೇ limitation
ಆದ್ರೂ ಬಿಡಲ್ಲ expectation
ಮನಸ್ಸಿಗಿಲ್ಲ relaxation
ಎಷ್ಟೀದ್ದರೇನು..? Qualification
ಮರೆತಿದ್ದಾನೆ moral education
ಅದಕ್ಕೆ ಬೇಕು meditation

-


11 FEB 2022 AT 20:18

Sikkapatte hightu
Light weightu
Tumba cuteu
Agbardu claimate changeu
heart Alli iro sweetu
avle nan smart Sanju 😍

-


17 NOV 2021 AT 17:06

ಪುನೀತನಿಲ್ಲದ ಪೃಥ್ವಿ
ಚಂದ್ರನಿಲ್ಲದ ಆಕಾಶದಂತೆ
ರಾಜ,ಯುವರಾಜನಿಲ್ಲದ ರಾಜ್ಯ
ಹೂ ಬಿಡದ ಮರದಂತೆ
ಯುವರತ್ನನ ಕಳೆದುಕೊಂಡ ಮನಗಳು
ಬತ್ತಿದ ಬಾವಿಯಂತೆ
ಅಭಿಮಾನಿಗಳ ಭಗವಂತ
ಮರಳಿ ಬರಬೇಕಿದೆ ಪವಾಡದಂತೆ
ಮರಳಿ ಬಾ ಭಗವಂತ

-


15 OCT 2021 AT 6:40

ಎಲ್ಲರಿಗೂ ಬಂಗಾರ ಹಂಚುವಷ್ಟು ಶ್ರೀಮಂತ ನಾನಲ್ಲ,
ಆದರೆ ನನ್ನ ಭಾಗ್ಯದಲ್ಲಿ ಬಂಗಾರದಂತಹ ನೀವೆಲ್ಲ ಸೀಕ್ಕಿದ್ದಿರಿ,
ಈ ದಿನದಂದು ನಿಮ್ಮನ್ನು ನೆನಪಿಸಿಕೊಳ್ಳುವುದು ಈ ನನ್ನ ಚಿಕ್ಕ ಪ್ರಯತ್ನ ,
ಬಂಗಾರದಂತೆ ನೀವಿದ್ದಿರಿ ಹಾಗೆ ನಮ್ಮವರಾಗಿ ಮತ್ತು ನಿಮ್ಮ ಸ್ನೇಹ ಪ್ರೀತಿ ನಂಬಿಕೆ ಸದಾ ಹೀಗೆ ಇರಲಿ,
ಬನ್ನಿ ಬಂಗಾರವಾಗಲಿ ನಮ್ಮ ನೀಮ್ಮ ಸ್ನೇಹ ಪ್ರೀತಿ ಚಿರಕಾಲ ಉಳಿಯಲಿ
ನಾವು ನೀವು ಬಂಗಾರದಂತೆ ಇರೋಣ..

ಮಹಾನವಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು

-


10 OCT 2021 AT 7:17

ನವಾವತಾರಿ ನವದುರ್ಗೆ
ಸಕಲ ಜೀವ ಸಂಕುಲದ ಮಹಾತಾಯೇ
ಮಹಿಷ ಮರ್ದಿನಿಯೇ
ಬೀಜಾಸುರ ಸಂಹಾರಿನಿಯೇ
ನಾನಿರುವೆನಮ್ಮ ನಿನ್ನ ಮಡಿಲಲ್ಲಿ
ನವಾವತಾರಿಯು ನೀ
ನನ್ನ ಭಕ್ತಿಯು ನೀ
ನನ್ನ ಶಕ್ತಿಯು ನೀ
ಜಗದ ರಕ್ಷಕಳು ನೀ
ಕಾಯಬೇಕೆನ್ನ ಜಗದ ತಾಯೆ
ಜಯತು ಜಯತು ಮಹಾತಾಯೆ
ಶರಣು ಶರಣು ಮಹಾಮಾಯೆ

-


5 OCT 2021 AT 10:32

ವಂದನೆ ಗುರುವಿಗೆ ವಂದನೆ🙏🙏
ಮಕ್ಕಳಂತೆ ಪೊಷಿಸಿದ ಗುರುವಿಗೆ ವಂದನೆ
ಬದುಕಿನ ದಾರಿ ತೋರಿದ ಗುರುವಿಗೆ ವಂದನೆ
ಬುದುಕಿನ ಅರ್ಥ ತಿಳಿಸಿದ ಗುರುವಿಗೆ ವಂದನೆ
ತಿದ್ದಿ-ತೀಡಿದ ಗುರುವಿಗೆ ವಂದನೆ
ಮಾಡಿದ ತಪ್ಪನು ಕ್ಷಮಿಸಿದ ಗುರುವಿಗೆ ವಂದನೆ
ಜನುಮ ಜನುಮದಲೂ ತೀರಿಸಲಾಗದ
ಕೊಡುಗೆ ನೀಡಿದ ಗುರುವಿಗೆ ವಂದನೆ
ಬಾಳಿಗೆ ಬೆಳಕಾದ ಗುರುವಿಗೆ ವಂದನೆ
ವಂದನೆ ಗುರುವಿಗೆ ಸಾವಿರ ವಂದನೆ🙏🙏

-


22 SEP 2021 AT 19:57

ನಗುತಿರಬೇಕು ನೂರು ನೋವಿದ್ದರೂ
ನಿನ್ನ ನಗು ನೋಡಿ ನಗಬೇಕು ನೋವಿದ್ದವರು

ನಗುವೊಂದಿದ್ದರೆ ಗೆಲ್ಲುವೆ ಸಾವಿರ ನೋವು
ತಿರುಗುವ ಚಕ್ರದಂತೆ ನೋವು-ನಲಿವು

ನಿನ್ನ ನಗು ನೋಡಿ ನೋವಿಗೂ ನೋವಾಗಬೇಕು
ನಗುತಿರಬೇಕು ನೀ ಎಂದೆಂದೂ ನಗುತಿರಬೇಕು

-


5 SEP 2021 AT 7:24

ಕಷ್ಟಗಳು ಬಂದಾಗ ತೊಡೆತಟ್ಟಿ ನಿಲ್ಲಲು ಕಲಿಸಿ
ಬಾಳಲ್ಲಿ ನೊಂದಾಗ ನೋವಿಗೆ ಔಷಧಿ ತಿಳಿಸಿ
ಸೋಲುವ ಭಯ ಕಣ್ಮುಂದೆ ಇದ್ದಾಗ,
ಸ್ಪೂರ್ತಿದಾಯಕ ಮಾತಿಂದ ಗೆಲುವಿನ ಮಾಲೆ ತೊಡಿಸಿ
ಹುಟ್ಟಿನಿಂದ ಸಾವಿನವರೆಗೆ ಜೀವನದಲ್ಲಿ
ಅರಿಷಡ್ವರ್ಗಗಳನ್ನು
ಅರೆದು ಬಾಳೆಂದು ತಿಳಿಸಿ
ನಮ್ಮ ತಪ್ಪುಗಳನ್ನೆಲ್ಲ ಮನ್ನಿಸಿ
ಕಲ್ಲುಬಂಡೆಯಾಗಿದ್ದ ನಮ್ಮನ್ನು ತಿದ್ದಿ-ತೀಡಿ,
ಸಮಾಜಕ್ಕೆ ಸುಂದರ ಮೂರ್ತಿಯಾಗಿ ನೀಡಿದ
ನನ್ನ ಆತ್ಮೀಯ ಗುರುವೃಂದಕ್ಕೆ ಹೇಗೆ ಹೇಳಲಿ ಧನ್ಯವಾದ
ನಾ ನಿಮಗೆಂದೆಂದೂ ಆಭಾರಿ🙏🙏

ನನ್ನ ಪ್ರೀತಿಯ ಗುರುವಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು💐💐

-


Fetching Jayaprakash Hudali Quotes