ದಿನವಿಡಿ ನಿನ್ನದೇ ದ್ಯಾನ
ನೀನಿಲ್ಲದೆ ವ್ಯಸನಿ ನನ್ನೀ ಮನ
ನಿನ್ನ ನೆನಪಲ್ಲಿ ಮರೆತಿರುವೆ ನಾ ನನ್ನ
ವರ್ಣರಂಜಿತ ನೀ ಜೊತೆಗಿದ್ದರೆ ನನ್ನೀ ಜೀವನ-
ಸಿದ್ಧತೆಯ ಶುದ್ಧ ಮನದಿಂದ ಬರೆಯುತ್ತಿರುವೆ ಬದುಕಿಗೆ ದೀವಿಗೆ
ಬದುಕ ಸಕಾ... read more
ದಣಿವ ತೀರಿಸಲೆಂದು ದರೆಯ
ವರ್ಷಧಾರೆ ಸೇರುವುದು ಭೂ ತಾಯಿಯ ಮಡಿಲು
ನನ್ನ ಮನಕ್ಕೆ ಪ್ರೀತಿಯ ಪರಿಚಯ
ಮಾಡಲು ನೀ ಸೇರಿದೆ ಎನ್ನ ತೋಳು
ರಂಜಿತಾ ರಂಜಿತಾ ಎಂದು ಗುನುಗುತ್ತಿದೆ ಮನ
ಪಿಸುದನಿಯಲ್ಲಿ ನೀನೇ ನನ್ನ ಜಗತ್ತೆಂದು-
ಮಾತು ತೂತು ಮಡಿಕೆ ಇದ್ದಂತೆ
ಅದಕ್ಕೆ ವಿಚಾರವನ್ನು ಮೆತ್ತಿದರೆ ಮಾತ್ರ
ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂದು ಘನತೆ-
ನಯನಾ....!!
ನೀ ನಗುತ್ತಿದ್ದರೆ ಆನಂದವನ
ನಿನ್ನ ನಗುವಲ್ಲೆ ಗೆಲ್ಲುವೆ ಉಳಿದವರ ಮನ
ನಿನಗಾಗಿ ನಾ ಬೇಡುವೆ ಮುಕ್ಕೋಟಿ ದೇವರುಗಳನ್ನು
ಅರಸಿ ಹಾರೈಸಲೆಂದು ನಿನ್ನನ್ನು-
ಮರೆತಿರುವೆ
ನಾ ಜಗವನ್ನೇ ಅವಳ
ನೆನಪ ಬುತ್ತಿ
ಹೊತ್ತು ತೇಲುತಿರುವೆ
ಸೋಕದಂತೆ ತುಸು ಗಾಳಿಯು-
ಮನದ ವಾಂಛೆಯ
ಚಂಚಲತೆಯ ಚುಂಬನವೆ
ಜೀವನ್ಮರಣದ ನಡುವಿನ
ಹುಟ್ಟು ನಡೆಸುವವ
ಮೈ ಮರೆಯದಿರಲಿ ಕೊಂಚವೂ-
ಮೋಸ......
ಮಾಡಲಿಲ್ಲ ಎನ್ನವರೇನಿಸಿಕೊಂಡವರು
ಎನ್ನ ನಂಬಿಕೆ ಸುಳ್ಳೆಂದು ಜಗಕ್ಕೆ ಸಾರಿದರು
ಎನ್ನೆದರು ನಗುವಿನ ಮುಖವಾಡ
ಮನದಲ್ಲಿ ದ್ವೇಷದ ಕೈವಾಡ
ಮೊಗವೇನೋ ಮಗುವಿನಂತೆ
ಮನದಲ್ಲಿ ವಿಷ ತುಂಬಿದ ಜಂತುವಂತೆ-
ಕನಸ ಕಣ್ರೆಪ್ಪೆಯಂತೆ ಕಾಯುತ್ತಿರುವೆನು
ಅಲ್ಲಗೆಳೆದವರ ಮುಂದೆ ಬಿತ್ತರಿಸಲು
ಕಂಡು ರಾಕ್ಷಸ ನಾಮಂಕಿತನನ್ನು
ಬಿಟ್ಟು ಭಯ ಔದಾರ್ಯದ ಮೂರ್ತಿ ಎನ್ನುತ್ತಿರಲು
ಮನದ ಮೈದಾನದಲ್ಲಿ ಜೋಪಾನ ಮಾಡುತ್ತಿರುವೆ ಕನಸನ್ನು
ನೊಡಲದೆಂತ ಸೊಗಸು ಅಲ್ಲಗೆಳೆದವರು ಅಂಜುತಿರಲು
ಮರ್ದನದಂತೆ ಮನದಲ್ಲಿ ಇವನೇನ ಆ ರಾಕ್ಷಸ ನಾನು-
ನನ್ನೊಲವ ಆಲಂಗಿಸಲು ಭಯವೇ
ಓ ನನ್ನ ಚೆಲುವೆ
ನಿನ್ನ ಪ್ರೀತಿಗಾಗಿ ಹಗಲಿರುಳು
ನಾ ಕಾಯುತ್ತಿರುವೆ-