ಹುಳಿಯಾರ್ ಷಬ್ಬೀರ್   (ಷಬ್ಬೀರ್)
317 Followers · 976 Following

read more
Joined 9 October 2019


read more
Joined 9 October 2019

ಶಬ್ಬು ಕವಿತೆ

ನಿನ್ನದೇ ನೆನಪು ಆದಾಗ್ಯೂ
ನನ್ನಲ್ಲಿ ಹೊಸತು ಸಂಭ್ರಮ
ಒಲವೇ ಬಲದ ಚೆಲುವು...!!

ಹುಳಿಯಾರ್ ಷಬ್ಬೀರ್

-



ಶಬ್ಬು ಕವಿತೆ


ಕೇಳಲಾರದ
ಹೇಳಬಾರದ
ಎರಡು ಮಾತು
ಬಾಂಧವ್ಯದ
ಬದುಕಿನುದ್ದಕ್ಕೂ
ದುಬಾರಿ
ಎನಿಸುವುವು...

ಹುಳಿಯಾರ್ ಷಬ್ಬೀರ್

-



ತನಗ

ಕರ್ಮಯೋಗಿಯ ಶ್ರಮ
ಸಾಕುತ್ತಿದ್ದಾರೆ ದಿನ
ಅನ್ನದಾತನ ಜನ್ಮ
ಆಗಿದೆ ರೈತ ದಿನ.

ಹುಳಿಯಾರ್ ಷಬ್ಬೀರ್

-



ಹಾಯ್ಕು..

ಅಕ್ಕಡಿ ಸಾಲು
ಬೆವರಿನ ಹನಿಯೂ
ಅನ್ನದಗಳು..,

ಹುಳಿಯಾರ್ ಷಬ್ಬೀರ್

-



ಚಿಗುರಿದ್ದು
ಎಂದೋ ಆಗಿದ್ದು
ಇಂದಾಗಿರುವುದು ಹಳೆಯ ಋಣ.

ಹುಳಿಯಾರ್ ಷಬ್ಬೀರ್

-



ನಿನ್ನವನು
ನನ್ನವಳು
ಎಂದ ಮೇಲೆ
ಹೊರಗಿಡುವ
ಮಾತಿಲ್ಲ..
ಅಂತರಂಗದಿಂದ
ಒಲವಿನ ಮೃದಂಗವಷ್ಟೇ..

ಹುಳಿಯಾರ್ ಷಬ್ಬೀರ್

-



ಶಬ್ಬು ಕವಿತೆ

ನಾ...
ಕರಗಿದ್ದು ಕೊರಗಿದ್ದು
ನಿನ್ನ...
ನೋಟದೂರಿನಿಂದ
ಸೊರಗಿದ್ದು ಮರುಗಿದ್ದು
ಮೌನದೂರಿನಿಂದ
ಹತ್ತಿರವಾಗಿದ್ದು ಬೇಕೆನಿಸಿದ್ದು
ಹೃದಯದೂರಿನಿಂದ
ಹಿಂಬಾಲಕನಾಗಿದ್ದು ಬೆಂಬಲವಾಗಿದ್ದು
ಉಸಿರಿನಿಂದ
ಉಸಿರಿಗಾಗಿ
ಉಸಿರಿರುವವರೆಗೆ
ಉಸಿರಾಗಿರುವೆ...!!

ಹುಳಿಯಾರ್ ಷಬ್ಬೀರ್

-



ತನಗ

ನನ್ನೊಡನೆ ಇದ್ದಷ್ಟು
ಒಲವೇ ನಾಚಿದಂತೆ
ನೀ ಹೋದ ಮೇಲಷ್ಟೇ
ಮೌನವೇ ರಾಚಿದಂತೆ.

ಹುಳಿಯಾರ್ ಷಬ್ಬೀರ್

-



ತನಗ

ಸೋತಿದ್ದು ಮನಸ್ಸಲ್ಲ
ಮುಂದಿನವ ಗೆದ್ದಿದ್ದು
ಗುರಿಯು ಸಡಿಲಿಲ್ಲ
ಪ್ರಯತ್ನ ಛಲದದ್ದು.

ಹುಳಿಯಾರ್ ಷಬ್ಬೀರ್

-



ತನಗ

ಹುಣ್ಣಿಮೆಯ ಚಂದಿರ
ರಾತ್ರಿಯಲಿ ನಕ್ಕಂತೆ
ಚುಕ್ಕಿಗಳು ಸುಂದರ
ಗಗನವೇ ಹೊಕ್ಕಂತೆ.

ಹುಳಿಯಾರ್ ಷಬ್ಬೀರ್

-


Fetching ಹುಳಿಯಾರ್ ಷಬ್ಬೀರ್ Quotes