ಸಾಧಿಸುವ ಛಲವಿದ್ದರೆ ಗೆಲುವು ನಮ್ಮದೇ
ಬಿಡದೆ ಮಾಡುವ ಪ್ರಯತ್ನ ತಾಳ್ಮೆ ಶ್ರಮ ಸಾಧನೆಯ ದಾರಿಗೆ ದೀವಿಗೆ-
ಹರ್ಷಿತ ರಾಣಿ
(ಹಿತರ್ಷಿ)
231 Followers · 89 Following
ಬರೆಯುವ ಹುಚ್ಚು.,
ಬರೆಯಲು ಆಸೆ ಹೆಚ್ಚು..
ಕವಯಿತ್ರಿ ಆಗುವ ಬಯಕೆ
ಬಯಕೆಗೆ ಬರವಣೆಗೆಯೆ ಪೀಠಿಕೆ
ಬರೆಯಲು ಆಸೆ ಹೆಚ್ಚು..
ಕವಯಿತ್ರಿ ಆಗುವ ಬಯಕೆ
ಬಯಕೆಗೆ ಬರವಣೆಗೆಯೆ ಪೀಠಿಕೆ
Joined 15 January 2020
13 DEC 2024 AT 19:06
13 DEC 2024 AT 18:56
ಜೀವನದ ಮುಖ್ಯ ಉದ್ದೇಶ ಜೀವಿಸುವುದೇ ಹೊರತು ಯಾವುದೋ ಕಾರಣಕ್ಕೆ, ಇನ್ಯಾವುದೋ ನೋವಿಗೆ, ಮತ್ಯಾವುದೋ ಕಿರಿಕಿರಿಗೆ ಅಂಜಿ ಸಾವಿಗೆ ಶರಣಾಗುವುದಲ್ಲ.
ಜೀವನ ತುಂಬಾ ದೊಡ್ಡದು
ಅದಕ್ಕೆ ಬೆಲೆಕಟ್ಟಲಾಗದು
ಜೀವ ಇರೋವರೆಗೂ ನೀತಿ-ನಿಯಮಗಳ
ನಡುವೆ ಬದುಕಿ ಬಾಳುವುದು
ಈ ಬದುಕಿನ ಮುಖ್ಯ ನಡೆಯೂ ಹೌದು.
-
24 MAY 2022 AT 15:39
ನೆನಪಿನಂಗಳದಲ್ಲಿ ಕಳೆದ ಪ್ರತಿಕ್ಷಣಗಳ ನೆನೆದು ನಗುತ್ತಾ ಅಳುತ್ತಾ ಕಾಲೆಳೆಯುತ್ತಾ ಹೊಸ ಕನಸುಗಳನ್ನು ಹೊತ್ತ ಪಯಣದತ್ತ ಹೆಜ್ಜೆ ಹಾಕುವ ಸಂಭ್ರಮವ ಸವಿಯುತ್ತಾ ಕುಳಿತಿದ್ದರು ಸಮಯದ ಪರಿವಿಲ್ಲದೆ
-
14 MAY 2022 AT 20:44
ಎಲ್ಲರನ್ನು ತನ್ನತ್ತ ಸೆಳೆಯುವ ಸ್ವರ್ಗ
ಆ ನಿಸರ್ಗದ ಮಡಿಲು ಮೈ-ಮರೆಸುವ ಖುಷಿಯ ಪರ್ವ-
12 MAY 2022 AT 21:24
ನಡುವೆ ಅಂತರ!
ಅರಿಯದೆ ಅರಳುವುದು ಹೃದಯದಿ ಈ ಪ್ರೀತಿ-ಪ್ರೇಮ
ಅರಿತು ಅರಳುವ ಆಸೆಗಳ ನಡುವೆ ಅಂತರವಿದ್ದರೆ ಎಲ್ಲವೂ ಕ್ಷೇಮ-
1 MAY 2022 AT 21:09
ಗುಡು ಗುಡು ಗುಡುಗಿದೆ
ಮಿರಿ ಮಿರಿ ಮಿಂಚಿದೆ
ಇಳೆಯೊಳಗೆ ಮಳೆ ಇಳಿದಿದೆ
ಮಳೆಯಲಿ ಮಿಂದು ಮೈ-ಮನ ನವಿರಿದೆ
-