ನಾನು ಎಂಬ ಸೂಜಿಯ
ಎರಡೂ ತುದಿಯು ಮೊನಚು,
ಮತ್ತೊಬ್ಬರಿಗೆ ಚುಚ್ಚುವಾಗ
ಮೊದಲು ನಮಗೇ ಚುಚ್ಚುವುದು.-
ನಿನ್ನೊಲವು
ತೇಯ್ದಷ್ಟು ಒಲವ ತೇರೊಳಗೆ
ಘಮವ ಬೀರುವ ಗಂಧ ನೀನು
ತೋಯ್ದಷ್ಟು ನೆನಪ ಮಳೆಯೊಳಗೆ
ಸುಮ್ಮನೆ ಕಾಲ ಕಳೆಯುವೆನು
ಕಣ್ಮುಚ್ಚಿದರೆ ಅರೆಗಳಿಗೆ
ಸೆರೆ ಸಿಕ್ಕ ಮೀನಾಗಿಬಿಡುವೆ
ಸತ್ತರೂ ಬದುಕಿದರು
ನಿನ್ನೊಲವ ಬಲೆಯೊಳಗಿರುವೆ.-
ಶೃಂಗಾರ ಹನಿ
ಕೊರಳ ಹೆಣೆದ ಬಾಹುಗಳಲಿ ಬಯಕೆಯಿತ್ತು
ಬಳೆಗಳಿಗದು ತಿಳಿದಿತ್ತು
ಸದ್ದು ಮಾಡದೆ ಸಹಕರಿಸಿತ್ತು,
ನಡುವ ಬಳಸಿದ ಕೈಗಳಲಿ ಕಪಟವಿತ್ತು
ಬೆರಳಿಗದೇ ಸಾಕಿತ್ತು
ಮುದ್ದು ಮಾಡಲು ಸುತ್ತುವರಿಯುತ್ತಿತ್ತು..-
ಅಧರಗಳ ಅಂಚಿನಲಿ ಕಿರುನಗೆಯ ಸೊಲ್ಲು
ಮೂಡಿ ಮರೆಯಾಯಿತು ಮಿಂಚಂತೆ,
ನಾ ಕಂಡಿದ್ದು ಸುಳ್ಳು!!??
ಮಧುರ ಮೋಹದ ಮಂದಾರ ಅರಳಿತೆಲ್ಲೊ
ಕಾಡಿ ಕರೆಯಿತು ಸುಮವು ನಿನ್ನಂತೆ,
ನೀನೇನಾ.... ಬೇಗ ಹೇಳು..-
ಏನು ಅಲ್ಲದವನನ್ನು ಕವಿಯನ್ನಾಗಿಸಿದ ಸುಂದರ ವೇದಿಕೆ, ಕೆಲವೊಂದು ವೇದಿಕೆಗಳಿಗೆ ನನ್ನನ್ನು ಪರಿಚಯಿಸಿದ ಮೊದಲ ವೇದಿಕೆಯಿದು. ಬರಹಕ್ಕೆ ರೂಪ ಕೊಟ್ಟ ಉತ್ತಮ ಗುರು
ಎಂದಿಗೂ ಚಿರಋಣಿ..
ಧನ್ಯವಾದಗಳು ವೈಕ್ಯೂ...🙏🙏🙏-
ನೋವನೆಂದು ಬಿಚ್ಚಿಡಬೇಡ
ನಗುವನೆಂದು ಬಚ್ಚಿಡಬೇಡ
ನೋವ ನುಂಗಿ ನಗುವುದು
ನಗಿಸುವುದನೆಂದೂ ಮರೆಯಬೇಡ.-
ಅದಾವ ದೊಡ್ಡ
ಗಾಯಗಳೆಂದೂ
ನೋಯಿಸಲೆ ಇಲ್ಲ,
ಆದರೆ...
ಸಣ್ಣ ಸೂಜಿ
ಚುಚ್ಚಿದಾ ನೋವನೆಂದೂ
ಸಹಿಸಲಾಗಲ್ಲ...-
Sharing views of future life
For,
Become the husband and wife...-