ಅತ್ತೆಗೆ ಶುಗರ್ ಚಿಂತೆ
ಸೊಸೆಗೆ ಫಿಗರ್ ಚಿಂತೆ

ಅತ್ತೆಗೆ ಕೂದಲುದುರುವ ಚಿಂತೆ
ಸೊಸೆಗೆ ಬಿಳಿಕೂದಲ ಚಿಂತೆ

ಅತ್ತೆಗೆ ತಿನ್ನುವ ಚಿಂತೆ
ಸೊಸೆಗೆ ಅಡಿಗೆಯ ಚಿಂತೆ

ಅತ್ತೆಗೆ ಮಾತ್ರೆ ಚಿಂತೆ
ಸೊಸೆಗೆ ಪಾತ್ರೆ ಚಿಂತೆ

ಅತ್ತೆಗೆ ಚೆಕಪ್ ಚಿಂತೆ
ಸೊಸೆಗೆ ಮೇಕಪ್ ಚಿಂತೆ

ಅತ್ತೆಗೆ ಗಂಟಿನ ಚಿಂತೆ
ಸೊಸೆಗೆ ನೆಂಟರ ಚಿಂತೆ

ಅತ್ತೆಗೆ ಜಗಳವಾಡೊ ಚಿಂತೆ
ಸೊಸೆಗೆ ತಿರುಗಾಡೋ ಚಿಂತೆ

ಅತ್ತೆಗೆ ಸೊಸೆ ತಲೆ ನೋವು
ಸೊಸೆಗೆ ಅತ್ತೆ ತಲೆ ನೋವು..!!

- ✍️ ಹರೀಶ್ ಎಸ್ ಎಂ