ಕನಸಿನ ಸದ್ದು
ಮನಸ್ಸಿನಲ್ಲಿ ಇದ್ದು
ಚಂಚಲ ಬದುಕಿಗೆ ಕಂಕಣ ಕಟ್ಟಿ
ಕಟ್ಟೆ ಹಾಳು ಹರಟೆ ಬಿಟ್ಟು
ಬಹು ಮಾಧ್ಯಮ ಎಸೆದು
ನಿದ್ದೆಯಿಂದ ಎದ್ದು
ಕುತಂತ್ರ ಮಿತ್ರರ ದೂರವಿಟ್ಟು
ಕಣ್ಣಲ್ಲಿ ಎಣ್ಣೆ ಬಿಟ್ಟು
ಓದಿದರೆ ಎದ್ದು ಬಿದ್ದು
ಇಡೀ ಜಗತ್ತನ,ತೋರಿಸಬಹುದು ಗೆದ್ದು
-
ಅದುವೆ ನನ್ನ ಊರು ಹಾವೇರಿ
.... ಹೊಟ್ಟೆ ಬಟ್ಟೆಗಾಗಿ ಮೀನುಗಾರಿಕೆ ಇಲಾಖೆ ಹೊನ್ನಾವರದಲ್... read more
ದಿನವು ನಗುತ್ತಿರಿ ಹೀಗೆ
ಎದುರಿಗೆ ನಿಂತವರ ಬಗೆ-ಬಗೆಯ
ನೋವು ನಾಚುವ ಹಾಗೆ
ತಲೆ ಕೆಡಿಸಿಕೊಳ್ಳಬೇಡಿ ಕುಹಕಿಗಳ ಬಗ್ಗೆ
ತೋರುತ್ತಿರಿ ಸದಾ, ಪ್ರೀತಿಯ ಬುಗ್ಗೆ
ಜಗವು ಮೆಚ್ಚಿ,ಕೊಂಡಾಡುವುದು ಹೀಗೆ
ಅಡಿಯಿಡಿ ಎಲ್ಲರ ಮನದೊಳಗೆ
ಜಾಗ ಕೊಡುವರು ಎದೆಯೊಳಗೆ
ನಡಿಯಿರಿ ಆನೆಯ ಹಾಗೆ ಜಗದ ಸೇವೆಗೆ
ನಿಷ್ಠೆಯಿಂದ ಮಾಡಿ ಬಿಡಿ
ಮಾಡದೆ ಗಡಿ ಬಿಡಿ
ಲಗ್ಗೆ ಇಡುವಿರಿ ಎಲ್ಲರ ಹೃದಯದೊಳಗೆ
ಜನುಮದಿನದ ಹಾರ್ದಿಕ ಶುಭಾಶಯಗಳು ಸರ್
ಹಿಮಾ. Arl.-
ಹಟಮಾರಿ ಕಂದ
ಜಗಳ ತೆಗೆಯುತ ಬಂದ
ಅಂಗಳದಿ ಎದ್ದು ಬಿದ್ದ
ಹೋಯಕೊಂಡ ಯವ್ವೋ,ಯಪ್ಪೋ ,
ಊರಲಾಡಿ ಹೊರಳಾಡಿ ಕಿರುಚಾಡಿ ಎದ್ದ
ತಾಯಿ ನಿನ್ನತ್ತ ಮಾಡಿದಳು ಸನ್ನೆ
ನೋಡಿ ತಿಳಿ ನೀಲ ನಿನ್ನ ರೂಪ
ಶಮನ ಹಸುಗೂಸ ಕೋಪ
-
ಸುತ್ತಲು ರಣ ಮಳೆ
ಕೇಕೆ ಹಾಕಿ ಭೂಮಿ ಮೇಲೆ
ಸುರಿಯುತ್ತಿದೆ ಒಮ್ಮೆಲೇ
ನೆಲ ಸಮ ಎಲ್ಲಾ ಮಲೆ
ಅರಿಯದ ಬದುಕು ನೀರಲ್ಲೇ
ಹೇಳದೇ ಕೇಳದೇ ಪಾತಾಳ
ಯಾರು ಕೇಳುವರು ಗೋಳು
ಎಲ್ಲವು ಮಣ್ಣ ಪಾಲು
ಮಣ್ಣಡಿ ಸಿಲುಕಿದವರ ಕುರುಹು
ಅಗೆದು,ತೆಗೆದು ಮಾಡಿದರು ಹರವು
ಸಿಗುತ್ತಿಲ್ಲ ಯಾರ ಸುಳಿವು
ಹೀಗೇ ಅನಿಸುತ್ತೆ ನಮ್ಮೆಲ್ಲರ ಅಳಿವು
ಭೂಮಿಗೆ ಆಗಿರಬೇಕು ನಾವು ಭಾರ
ಹಾಗಾಗಿ ನಲುಗಿ,ನಡುಗಿವೆ ಎಲ್ಲಾ ತೀರ
ಸೇರಿದರೆ ಸಮುದ್ರ ಭೂಮಿ ಅಭದ್ರ
ನಮ್ಮೆಲ್ಲ ಬದುಕು ಛಿದ್ರ ಛಿದ್ರ
-
ಎಡ ಬಿಡದೆ ಎಲ್ಲಡೆ ವರ್ಷಧಾರೆ
ಬೆಟ್ಟ ಗುಡ್ಡ ಉರುಳುತ್ತಿವೆ ಧರೆಗೆ
ಬಲಿ ಆಗುತ್ತಿರುವರು ಕಾಲನ ಕರೆಗೆ
ಕೊನೆಗೂ ನೋಡಲು ಸಿಗದಾಯಿತು ಮೊರೆ-
"ಕಾಳಜಿ"
ಈ ಭುವಿಯು ಸಂಪತ್ತಿನ ಆಗರ
ಸಕಲ ಜೀವಿಗೂ ಇದುವೇ ಆಧಾರ
ಇದರ ಬಗ್ಗೆ ಯಾರಿಗೂ ಬೇಡ ನಿರಾಧಾರ
ನಾವೆಲ್ಲ ಮಾಡಬೇಕಿದೆ ರಕ್ಷಣೆಯ ನಿರ್ಧಾರ
-
"ಪ್ರೀತಿ "
ಪರಿಸರ ಇದ್ದರೆ ಸದ್ಗತಿ
ವಿನಾಶವಾದರೆ ಅದೋಗತಿ
ಮಾಡಿದಿರಿ ಇದರ ಅವನತಿ
ಎಲ್ಲರಿಗೂ ಇರಲಿ ವಸಿ ಪ್ರೀತಿ
-
"ಪ್ರಕೃತಿ"
ನಮಗೆಲ್ಲ ಬೇಕು ಈ ಪ್ರಕೃತಿ
ಇದರ ಮೇಲೆ ಮಾಡಬೇಡಿ ವಿಕೃತಿ
ಮಾಡಲಾಗದು ಪುನಃ ಉತ್ಪತ್ತಿ
ಉಳಿಸಿ, ಬೆಳಸಬೇಕು ಈ ಸಂತತಿ
-