ಮಾಧವನ
ಮನದನ್ನೆ ಮನವ ಆವರಿಸಿ
ಮೌನವಾಗಿಹಳು-
ಹೀಗೇಕೆ ಆಗಿದೆ ಜಗವು
ಬೇಕೇ ಮೊದಲೇ ಪ್ರೀ ವಿಡ್ಡಿಂಗ್ ಶೂಟ್
ಮದುವೆಗೆ ಮೊದಲೇ ಕೈಯಲ್ಲಿ ಕೈ ಹಿಡಿದು
ಸೊಂಟವನು ಬಳಸಿ ನಡೆದು
ತುಟಿಗೆ ತುಟಿ ತಾಗಿಸಿ
ಬರಸೆಳೆದು ಬಿಗಿದಪ್ಪಿ
ಎಲ್ಲವ ಮುಗಿಸಿದ ನಂತರ
ಉಳಿಯುವುದೆಲ್ಲಿ ಆ ಮೊದಲ ಸ್ಪರ್ಶ
ಅಂತರ್ಪಟ ಸರಿಸಿದಾಗ ಕಾಣಲು ಇರುವ ತವಕ
ಲಾಜ ಹೋಮದಲ್ಲಿ ಅವನ ಕೈಯಲ್ಲಿ
ಇವಳ ಕೈ ಇರಿಸಿ ಆಗುವ ಆ ಪುಳಕ
ತಾಳಿ ಕಟ್ಟಲು ಬೇಕಿದೆಯಾ ಮುಹೂರ್ತ
ಎಲ್ಲಾ ಮುಗಿದಿರುವ ರಂಗಿನಾಟ
-
ಬೇಕೆನಿಸುತಿದೆ ಏಕಾಂತ
ಬೇಡವೆನಿಸುತಿದೆ ಅವನ ತುಂಟಾಟ
ಮನದಲ್ಲೆನೋ ಹೊಯ್ದಾಟ
ಬೇಡವಾಗಿದೆ ಕಣ್ಣ ಮುಚ್ಚಾಲೆ ಆಟ
ಮನದಲ್ಲೆನೊ ತೂಗುಯ್ಯಾಲೆ ಆಟ
ಯಾಕೆ ಈ ಸಂಸಾರದ ಜಂಜಾಟ
-
ರೆಕ್ಕೆ ಇದ್ದರೆ ಹಾರ ಬೇಕೆನಿಸುತ್ತದೆ ಹಕ್ಕಿಯಂತೆ
ಆಗಸದಿ ಬಾನೆತ್ತರಕ್ಕೆ
ನಾ ಹಾರಿದೆ
ಮೇಲೆ ಮೇಲೆ ಆಗಸಕ್ಕೆ
ತಿಳಿಯಿತು ನನಗಾಗ ಈ ರೆಕ್ಕೆ ಕೃತಕ
ಬೀಳುವೆ ನಾ ಪಾತಾಳಕ್ಕೆ-
ಹೂ ಒಂದು
ಬಳಿ ಬಂದು
ತಾಗಿತು ಎನ್ನೆದೆಯ
ಕೇಳಲು ಹೇಳಿತು ಜೇನಂತ ಸವಿ ನುಡಿಯ
ಹೆಣ್ಣೊಂದು
ಬಳಿ ಬಂದು
ಕೊಟ್ಟಾಗ
ಹೂ ಒಂದು
ತಾಗಿತು ಮುಳ್ಳೊಂದು
ಕೇಳಲು ಹೇಳಿತು ಮುಳ್ಳಿಹುದು
ಹೂ ಜೊತೆಗೆ ಜೋಪಾನ ಎಂದು-
ಅಂಧಕಾರದಲ್ಲಿ ಮುಳುಗಿಹ ಈ ಜೀವಕ್ಕೆ ಮಿಂಚು ಹುಳುವಾಗಿ ಸಣ್ಣ ಬೆಳಕೊಂದು ಕಂಡರು
ಬದುಕುವ ದಾರಿಯದು ಕಾಣುವುದು ಬೆಳಕಿನ ಎಡೆಗೆ-
ನೀ ನಂದು ತೊಡಿಸಿದೆ ಕಾಲ್ಗಳಿಗೆ ಗೆಜ್ಜೆ
ಕೇಳಲೆಂದೆ ನಾ ನೀಡುವ ಹೆಜ್ಜೆ
ದಾರಿ ತಪ್ಪದು ಹೆಜ್ಜೆ
ಹೆಣ್ಣಿಗೆ ಆಭರಣವೊಂದು ಲಜ್ಜೆ
-
ಮಳೆ ನೀರಲಿ ಒದ್ದೆ ಆಗಿದೆ ದೇಹ
ಆದರೂ ತಣ್ಣಗಾಗದು ಬಿಸಿಯಾಗಿರುವ ದಾಹ
ದೇಹದ ದಾಹ ತೀರದ ಮೋಹ
-
ಯಶಸ್ಸು ಕಠಿಣ ಶ್ರಮದ ಫಲ
ಪಟ್ಟರೆ ನೀ ಶ್ರಮ ಪಡೆಯುವೆ ನೀ ಧನ
ಶ್ರಮವ ಪಡೆದರೆ ನೀ ಪಡೆದರೆ ಧನ
ನೀನಾಗುವೆ ನಿಧನ
ಶ್ರಮದ ಫಲ ಯಶಸ್ಸು
ಯಶಸ್ಸಿನ ಫಲ ಶ್ರೇಯಸ್ಸು
ಶ್ರೇಯಸ್ಸಿನ ಫಲ ಹುಮ್ಮಸ್ಸು
ಯಾವುದು ಇಲ್ಲದ ನೀ ಬರೀ ಶೋ ಪಿಸು
-