ಭಾವಾಹ್ಲಾದ •❤︎•   (ಹರ್ಷಿತ.ಆರ್)
4.2k Followers 0 Following

Joined 27 August 2017


Joined 27 August 2017

ನಾಲ್ಕು ನಲವತ್ತಾಗಿ, ನಾನೂರಾಗಿ, ನಾಲ್ಕು ಜನುಮಗಳೇ
ಕಳೆದರೂ ನನ್ನಾತ್ಮ ನಿನ್ನನ್ನೇ ಅರಸುವುದು.....♡

-



ದೇಹದಿಂದ ದೂರಿದ್ದು ಆತ್ಮದಿಂದ ನನ್ನೆರಳಾಗಿ ಸದಾ ನನ್ನೊಡನಿರುವವನ ಪರಿಚಯಕೆ ಮೂರು ಮುತ್ತಿನಂತ ವರುಷಗಳು!!

•💞🫂•



— % &

-



ಅದೆಷ್ಟೋ ಅರ್ಧ ಸತ್ತ ಭಾವನೆಗಳ
ಆಕ್ಸಿಜನ್ ಕೊಟ್ಟು ಉಳಿಸಿದ್ದೆ
ನಿನ್ನಿಂದ ಮರುಜೀವ ಪಡೆಯುತ್ತವೆಂದು
ಪಾಪ! ಅವು ಕೊಳೆತು ನಾರುತ್ತಿರುವುದು
ನನ್_ಮೂಗಿನವರೆಗೇ ತಲುಪಲಿಲ್ಲ
ಇನ್ನು ನಿನ್_ಕಣ್ಣಿನೆದುರಂತೂ..
ಸಾಕು ಬಿಡು ಮತ್ಮತ್ ಯಾಕೆ!
ಅದೇ ಹೊಸ-ಹಳೇ ಕ್ಯಾಸೆಟ್....

-



ಅಲ್ಲೇ ಮರೆಯಾಗಿದ್ದೆಯಲ್ಲ ಅದೇ..
ನನ್ನ ಕಣ್ಣಂಚಿನ ದೂರದ ಮೂಲೆಯಲ್ಲಿ
ದಯಮಾಡಿ ಹಾಗೆಯೇ ಹೊರಟಿಬಿಡು
ಮತ್ಮತ್ತೆ ನನ್ನೆದೆ ಸೂಜಿ ನೋವನ್ನ
ಸಹಿಸಿಕೊಳ್ಳುವಷ್ಟು ಮಂದವಾಗಿಲ್ಲ;
ಮತ್ತಾ ಸೂಜಿಯಂತೂ ನನ್ನೆದೆ ಪೂರಾ
ಹರಿದೋಗೋವರೆಗೂ ಮೊಂಡಾಗುವುದಿಲ್ಲ!

-



ಹುಟ್ಟು-ಸಾವು, ಏಳು-ಬೀಳು, ಕನಸು-ನನಸು, ಮಾತು-ಮೌನ ಎಲ್ಲಕ್ಕೂ ದನಿ_ಯಾದದ್ದು/ಯಾಗೋದು ಅದೇ....

ನನ್_ಕನ್ನಡ!
💛
❤️


(ಅಡಿಬರಹ)

-



ನನ್ನಿಂದಾಗಿ ಎಲ್ಲರ್ಹತ್ರ
ಮಾತ್ಗಳ್ ಕೇಳೋ ಅಮ್ಮ
ನಾನು ಮತ್ ಅವ್ಳು ಇಬ್ರೇ ಇದ್ದಾಗ
ಚಕ್ರಬಡ್ಡಿನೂ ಸೇರ್ಸಿ
ನಂಗ್ ವರ್ಗಾಯ್ಸ್ತಾಳೆ!

-



ನನ್ನನ್ನೇ ಹೋಲೋ ನಾನಲ್ಲ; ಅವಳು!

【Mirror】
•💞•

-



ಅವನ ಪ್ರಿಯ ಖಾಸಗಿ ಡೈರಿ!!
•💙•

ಮರೆತಿದ್ದ; ಮರೆಯಲಾರದಂತ ದಿನ!

― ಹರ್ಷಿತ.ಆರ್



(ಮುಂದುವರೆದ ಭಾಗ,
ಅಡಿಬರಹಾನೊಮ್ಮೆ ಓದ್ಬಿಡಿ)

-



ಅವನ ಪ್ರಿಯ ಖಾಸಗಿ ಡೈರಿ!!
•💙•

― ಹರ್ಷಿತ.ಆರ್




(ಅಡಿಬರಹದ್ಕಡೆ ಕಣ್ಣಾಯ್ಸಿ)

-



ಅವರೊಂತರ ಹಾಗೇನೇ!!

ಅವರಿಗೆ, ಹರಿದ ಬನಿಯನ್
ಹೋದವರ್ಷದ ಆಯುಧಪೂಜೆಯ ಶರ್ಟ್ ಪೀಸ್
ಇನ್ನೇನೋ ಕಿತ್ತೋಗುವಂತಹ ನೀಲಿ ಚಪ್ಪಲ್
ನಾವು ತಿನ್ನದೇ ಬಿಟ್ಟಂತ ಉಳಿದ ಊಟ
ನನ್ಮೊಗದಲ್ಲಿನ ನೈಜ ಸಂತಸ
ದಿನಪೂರ್ತಿ ಗೇಯುವುದರಿಂದಾದ ಆಯಾಸವನ್ಮರೆಸುವ
ಎರಡು ಗಳಿಗೆಯ ವಿಶ್ರಾಂತಿ
ನನ್ನಯ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ
ತ್ಯಾಗ ಮನೋಭಾವ
ಎಲ್ಲರೆದುರು ತಾನೆಷ್ಟು ಮುಗ್ಧನೆಂದು ತಿಳಿಯಬಾರದೆಂದು ಧರಿಸುವ
ಒರಟು ರೂಪ
ಯಾರೋ ರಸ್ತೆಯಲ್ಲಿ ಸಿಕ್ಕಾಗ ತನ್ಮಕ್ಕಳ ಬಗೆಗಾಡುವ
ಹೊಗಳಿಕೆಯ ಮಾತ್ಗಳು
ಮನೆಯವರ ನೆಮ್ಮದಿ, ಪ್ರೀತಿ, ಉಲ್ಲಾಸ..

ಇಂತದರಲ್ಲೇ ತೃಪ್ತಿ ದೊರೆಯುವುದು..!!

-


Fetching ಭಾವಾಹ್ಲಾದ •❤︎• Quotes