ಹರಿದು ಹೋಗು ನೆನಪೆ
ಕಂಬನಿಯ ನೆರೆಯಲಿ
ಬರಿದಾಗಲಿ ಹೃದಯ
ಕುಡಿಯೊಡೆಯಲಿ
ಹೊಸತೊಂದು ಕಾವ್ಯ ...-
ಕವಿಯಾಗೋದು ತುಂಬಾ ಸುಲಭ,
ಭಗ್ನ ಪ್ರೇಮದಲೊಂದು ಉನ್ನತ
ಡಿಗ್ರೀ ಆಗಿರಬೇಕು ಅಷ್ಟೇ...-
ನಾ ನಿನಗೆ ಕಳಿಸಿದ ಶಾಯರಿಗಳೆಲ್ಲ
ಗುಜರಿ ಸೇರಿರಬಹುದೆಂಬ ಗುಮಾನಿ ನನಗೆ,
ಇತ್ತೀಚೆಗೆ ಹಳೇ ಪೇಪರ್ ಕೇಳುವ ಹುಡುಗನೂ
ಸಹ ಪ್ರಾಸವಾಗಿ ಕೂಗುತ್ತಿದ್ದಾನೆ...
-
ಕೆಂಗುಲಾಬಿ ತೊಟ್ಟವಳದರದ ಕಾವಿಗೆ
ಉರಿಬಿಸಿಲನುಣಿಸುವ ರವಿಯೂ
ಮೋಡ ಹೊದ್ದು ಮೆತ್ತಗಾದ...-
ಬಾನೆತ್ತರದ ಕನಸುಗಳನ್ನ
ಬಚ್ಚಿಡಲಿ ಎಲ್ಲಿ
ಅವ್ಯಾಹತ ಜೀವಸೆಲೆಯು
ದುಮ್ಮಿಕ್ಕುತಿಹುದು ಇಲ್ಲಿ-
ಆಗ ಆ ಬೆಂಕಿ ಅಲ್ಲಿನವರನ್ನು ಮಾತ್ರ ಸುಡುತ್ತಿತ್ತು. ಈಗ ಬೆಂಕಿ ಗಿಗಾಬೈಟ್ ವೇಗದಲ್ಲಿ ಎಲ್ಲರ ಕೈಗಳಿಗೆ ಹರಡುತ್ತಿದೆ, ಎದೆಯೊಳಗೆ ಇಳಿಯುತ್ತಿದೆ...
ಪ್ರತಿ ಮನಸ್ಸಿಗೆ ಬೆಂಕಿ ಹಚ್ಚುತ್ತಿದೆ.-
ನಿಶಬ್ಧ ರಾತ್ರಿಯ ಏಕಾಂತದಲೂ,
ಗುಂಯ್ ಗುಡುತಿದೆ
ನೀನಾಡಿದ
ಸವಿ ಪಿಸುಮಾತು...
"ಅಚ್ಛೇ ದಿನ್ ಆನೆವಾಲೇ ಹೈ"😐
-
When you say sorry it doesn't mean that you are wrong. It just means you value the person and relationship more than being right...
-
ಕತ್ತಲೆಯನು ಛೇದಿಸಿ
ಓಡುತಿದೆ ಉಗಿಬಂಡಿ
ನನ್ನೆಲ್ಲ ವಾಸ್ತವದ ಮೇರೆಯ ಮೀರಿ
ಅಲ್ಲಲ್ಲಿ ತನ್ನನೇ ತಾನು ಕೂಗಿ......-