ಅಂತರಾತ್ಮ...!!
ತಾನು ತನ್ನದು ಎಂಬುದ ತೊರೆದು
ನಾವು ನಮ್ಮದು ಎಂಬುದ ಮಿಡಿವ
ಅನಂತವಾದ ಪ್ರೀತಿ ತುಂಬಿದ
ನಿಷ್ಕಲ್ಮಶ ಅಂತರಾತ್ಮ...!!
-
𝕷𝖎𝖋𝖊 ï§ 𝕚𝕟𝕗𝕝𝕦𝕖𝕟𝕔𝕖𝕕 ⓑⓨ😇
👇
🌍𝘀𝗮𝘁𝘆�... read more
ಜೊತೆಯಾಗಿ ನಡೆದಿಲ್ಲ
ಕತೆ ಕೂಡಿ ಕೇಳಿಲ್ಲ
ಬಲು ಸನಿಹವಾದರೂ ಈ ಮನವು
ನಮ್ಮ ಕವಿತೆಗಳ ಕಲ್ಪನೆಯಲ್ಲಿ..!!
ಬಯಸದೆ ಜೊತೆಯಾದೆವು
ಅದಾವ ಮೋಡಿಯೋ
ಬಿಡಿಸಲಾರದ ಒಲವಿನಲಿ
ಕವಿತೆಗಳ ಸಾಲಾದೆವು..!!
ತುಂಬು ಬತ್ತಳಿಕೆಯ ಪ್ರೇಮವನ್ನು
ಕಡವಿಲ್ಲದೆ ನೀಡಿರುವೆ ನೀ
ಏನನ್ನು ನೀಡಲಿ ನಿನಗೆಂದು
ಧನ್ಯವಾದವ ಹೊರತುಪಡಿಸಿ..!!
-
ನೇಸರದ ಚಂದಿರನು ನೀನು
ಮೇಘಗಳಲ್ಲಿ ಮರೆಯಾಗಿರುವೆಯಾ..!!?
ಮೊದಲ ಮಾನಸಗಂಗೆ ನೀನು
ನನ್ನ ತೀರಕೆ ಬರಲಾರೆಯಾ..!!?
ನಿನ್ನೊಂದು ನಗೆಯು ಸಾಕು
ಈ ಹೃದಯ ಮಿಡಿಯಲು..,,
ಕಾಯುವ ಕ್ಷಣವಿದು ಕೌತುಕದಿ ಕುಳಿತಿರುವೆ
ನನ್ನವಳ ಒಂದೊಪ್ಪಿಗೆಗಾಗಿ..!!!-
ಬಾಳ ಪಯಣದ ರಥದಲ್ಲಿ
ಇರುವುದೊಂದೇ ಮೊಗ ನಿನದು
ಕನಸಲು ಕೂಡ ಜೊತೆಗಿರುವೆ
ಕಾಪಾಡೆಯ ಕೈ ಬಿಡದೆ...,
ಇಳೆಯಲಿ ಮಳೆ ಬೆರೆತರೆ
ಮೇಘದ ಒಡಲು ಮರುಗುವುದೇ..!!
ಸನಿಹದಲಿ ನೀ ಇರದಿರಲು
ಪ್ರೀತಿಯ ಅಲೆಯು ಕರಗುವುದೇ..!!
ನಿನ್ನೊಂದಿಗಿರುವ ಈ ಜೀವನ
ಜೇನ ಗಡಿಗೆಯೊಳಿರ
ಇರುವೆಯಂತೆ,
ಮರಳುವಾಸೆ ಇಲ್ಲೆನಗೆ..,,
ಅರೆಗಳಿಗೆ ತೊರೆದರೆ ನೀ
ಮಾತಲಿ ಹೇಗೆ ಹೇಳಲಿ ನಾ..!!
ಮನದಲಿ ಒಲವು ವಿನಿಮಯವಾಗಲಿ
ಇದು ಹೃದಯಗಳಾ ವಿಷಯ..!!-
😞ಸಂತೆಯಲಿ ನಿಂತ ಹೃದಯದಂತೆ🙂
ಕನಸುಗಳ ಹೊತ್ತ ಪಟ್ಟಣದಲ್ಲಿ
ಹೃದಯವೇ ನಾಪತ್ತೆ..,
ಅವಸರದ ಜೀವನವು
ಕಳೆದಿದೆ ಪ್ರತಿಕ್ಷಣವು..!!
ಆದಿಯ ಅಂತ್ಯದಲಿ
ಸುಗಮದ ಬಯಕೆಯದು..,
ಚಂದ್ರಮನ ಆಗಮದಿ
ಮುಗುಳುನಗೆ ಮೂಡಿದೆ..!!
ದಣಿದ ದೇಹವದು
ಹಾಸಿಗೆಯ ಹಂಬಲಿಸಿ..,
ತಲೆಗೊತ್ತಿ ದಿಂಬ ಕಣ್ಮುಚ್ಚಿದೆ
ದಿನ ಕಳೆದ ಸಂತಸದಿ..!!
ಹೊಸ ದಿನದ ಹರುಷವೋ
ಇಲ್ಲೆಮ್ಮ ಪ್ರತಿದಿನದ ಸಂತೆಯೋ..,
ಜೀವನ ಸಾಗುತಿದೆ
ವಾಹನದ ಚಕ್ರದಂತೆ..!!
-