GY  
33 Followers · 2 Following

Joined 22 May 2021


Joined 22 May 2021
10 OCT 2021 AT 14:31

ಮನದ ಭಾವನೆಗಳ
ನಿಜದಿ ತೋರಲು
ಅಸಹಾಯಕರಾಗಿ
ಎಲ್ಲರ ಸೆಳೆಯಲು
ಸುರಿಯುವುದು
ಅಸಹಜವಾಗಿ
ಗುಡುಗು ಮಿಂಚಿನ
ಸದ್ದಿಲ್ಲದೆ ಕರಗುವ
ಮೋಡ ಎಲ್ಲೆಲ್ಲೋ
ಅಲೆದು ಸೋನೆಯಾಗಿ
ಸುರಿದು ತೇವವಾಗುವುದು
ಭುವಿಯೆಲ್ಲ ಮತ್ತೆ
ಧಗೆಯಿಂದ ಬೆಂದು
ಸುಡುವುದೆಲ್ಲವ
ಮರೆಯಲ್ಲಿ ಅಡಗಿಹ
ಮರ್ಮವನರಿಯುವವರೆಗೆ...!!

-


18 SEP 2021 AT 19:00



ಏನಿದು ಮಾಯೆಯೋ
ಬದುಕಿನ ಬವಣೆಯೋ...
ಸಾಗುವ ಬಂಡಿಯ
ಚಕ್ರವು ಉರುಳುತ
ಮುಗಿಯದು ಪಯಣ
ಯಾರೂ ಅರಿಯರು,
ಏರಿಳಿಯುವತಾಣ!
ತುಂಬಿದ ಸಂದಣಿಯೊಳು;
ಒಡೆದ ಮನಗಳ ಕಂದಕದಲಿ
ಮುನ್ನುಗ್ಗುವ ಭರದಲಿ
ಭರವಸೆಯಲಿ ಪ್ರಾಣವು
ಪಣಕ್ಕಿದೆ ಚಾಲಕನಲಿ!
ಸೀಟಿಯ ಊದುವರಿಲ್ಲ;
ಟಿಕೇಟು ಇಲ್ಲದೆ ಸೆಣಸಾಟ
ಮೈಮರೆವರು ಮಂಪರಲಿ
ಕೆಲವರು ಜೀವ ಕೈಯಲ್ಲಿ
ಹಿಡಿದು ವಿರಮಿಸುವರು
ಮಿಕ್ಕವರು ನಡೆವರು
ತಮ್ಮದೆಲ್ಲವ ತೊರೆದು
ಕಾಯದೆ ಕರೆಯದೆ
ಮತ್ತೆ ಬರಲಾರದೆ!
ಅಸ್ತಂಗತ ರಾಗುವರು
ಬದುಕ ಬಾನಂಚಿನಲಿ
ಚುಕ್ಕಿ ಚಂದ್ರಮರಲ್ಲಿ..!

-


6 SEP 2021 AT 18:20

ಕದಡಿ ರಾಡಿಯಾದರೆ,
ಒಡೆದ ಕನ್ನಡಿಯಂತೆ
ಬಿಂಬ ಕದಲುವುದು
ಭಿನ್ನ ಭಿನ್ನ ವಾಗಿ

-


4 SEP 2021 AT 21:17

ಹುಟ್ಟು-ಸಾವುಗಳ ನಡುವೆ ಸಿಹಿ ಕಹಿಯ ಅನುಭವಿಸಿ ಹಂಚಿ ಎಲ್ಲರೊಳಗೊಂದಾಗುವುದು

-


21 AUG 2021 AT 21:03

ಕಾಲ್ಪನಿಕ ಮತ್ತು ವಾಸ್ತವಿಕ ಘಟನೆಗಳನ್ನಾಧರಿಸಿದ ಕಥಾಹಂದರವ ಸಂಗೀತ ಮತ್ತು ನೃತ್ಯ ಗಳೊಂದಿಗೆ ಸಮ್ಮಿಲಿತಗೊಳಿಸಿದ ಚಲಿಸುವ ಚಿತ್ರಗಳ ಸರಣಿ

-


19 AUG 2021 AT 22:54

ಕತ್ತಲು ಕಳೆದು ಸುತ್ತಲು ಬೆಳಗಲು ಇದುವೇ ಸಾಕ್ಷಿ

-


19 AUG 2021 AT 21:05


Should not think of either
Past or future
The present is sure
Never disclose your weak nature
That will keep you happy forever

-


17 AUG 2021 AT 20:52

ಬದುಕೊಂದು ಭರವಸೆ
ಸಾವಿನ ಕದ ತೆರೆಯಲು
ನೋವಿನಲಿ ನಿರಾಸೆ

-


7 AUG 2021 AT 20:31

ಮನದೊಳಗಿನ ದುಗುಡ ದುಮ್ಮಾನಗಳಿಗೆ
ಶಾಶ್ವತ ಕೊನೆ ಹಾಡಲು ಹೊರಹೊಮ್ಮುವ ಸ್ವರ

-


31 JUL 2021 AT 18:00


ಬದುಕಬೇಕು ಬೆಳಕಾಗಿ
ಕತ್ತಲೆಯ ಕಳೆದು
ನೆರಳಾಗಿ ಹಿಂಬಾಲಿಸಲು
ಫಲಾಪೇಕ್ಷೆ ಯಿಲ್ಲದೆ
ಎಲ್ಲರ ಬಾಳಿಗೂ
ಬೆಳಕಾದ ಅಮ್ಮನಂತೆ
ಸಾರ್ಥಕ್ಯ ಬದುಕಿದು
ಕತ್ತಲೆಯ ಕೂಪದಲಿ
ಕಳೆದುಹೋಗುವ ಅದೆಷ್ಟೋ
ಜೀವಗಳಿಗೆ ದಾರಿ ತೋರಲು
ಆರೋಗ್ಯ ಆಹಾರ ಕಾಗಿ
ಹಾತೊರೆವ ಜೀವ
ಸಂಕುಲಕೆ ನೆಲೆಯಾದ
ಬರಡು ಭೂಮಿಯ
ಬೆಳಗಲು ಮತ್ತೆ ನವ
ಚೈತನ್ಯತುಂಬಲು





-


Fetching GY Quotes