ಗುರು ಢವಳೇಶ್ವರ..!   (---✍🏻ನಿಗೂಢ,ಹುಬ್ಬಳ್ಳಿ.)
807 Followers · 121 Following

read more
Joined 5 March 2019


read more
Joined 5 March 2019

ಡಿಯರ್ ಜೋಗಿ ಜೀ ಸ್ವಲ್ಪ ಇತ್ತ ಕಡೆಗೂ ಗಮನಹರಿಸಿ
ರೆಜರ್ ಫೇ ಒಂದೇ ಟೈಮ್ ನಲ್ಲಿ ಎರಡು ಸಲ ಆಗಿದೆ ಮೊದಲಿಗೆ 29 ರೂಪಾಯಿ ಗೂಗಲ್ ಫೇ ಮೂಲಕ ಫೇ ಮಾಡಿದಾಗ ಯುವರ್ ಕೋಟ್ ಓಪನ್ ಆಗಲಿಲ್ಲ
ಮತ್ತೆ ಐದು ನಿಮಿಷ ಬಿಟ್ಟು ಮತ್ತೆ 29 ರೂಪಾಯಿ ಮತ್ತೆ ಗೂಗಲ್ ಫೇ ಮೂಲಕ ಮಾಡಿದಾಗ ಯುವರ್ ಕೋಟ್ ಓಪನ್ ಆಯ್ತು ಹೀಗೆ ಅನಾಯಾಸವಾಗಿ ನಮ್ಮ ಹಣಪೋಲಾದರೆ ಹೇಗೆ ಸರ್, ಇದನ್ನು ಮರಳಿ ಪಡೆಯುವುದು ಹೇಗೆ ಅಥವಾ ಮತ್ತೆ ಮುಂದಿನವಾರ ನನ್ನ ಯುವರ್ ಕೋಟ್ ಅಕೌಂಟನ್ನು ಓಪನ್ ಮಾಡಲು ಅನುವುಮಾಡಿ..!
ದಿನಾಂಕ 29/06/2022 time 1pm 12secend

-



ಹುಣ್ಣುಮೆ ರಾತ್ರಿಯಲಿ
ಚಂದಿರನ ಸೊಬಗಕಂಡು ಬೆರಗಾಗಿ
ತಿಳಿದುಕೊಂಡೆ ಚಂದಿರನೇ
ಪರಿಪೂರ್ಣ ಎಂದು,
ಚಲುವೆ,
ನಿನ್ನ ಕಂಡಾಕ್ಷಣ
ಮೂಕವಿಶ್ಮಿತನಾಗಿ
ನನ್ನಲ್ಲಿಯೇ ನಾ ಕಲ್ಪಿಸಿಕೊಂಡೆ
ಚಂದಿರನೇ ಅಪೂರ್ಣನೆಂದು..!

-



ನಗುವನು ಹೊತ್ತಿರುವ
ನಿನ್ನ ನಗುಮೊಗದ ಕಳೆ
ಸದಾಕಾಲವೂ ರಾರಾಜಿಸಲಿ
ಮುದ್ದು ಮಗಳೇ
ನೋವುಗಳೇ ಬಾರದ
ದಿನಗಳು ನಿನಗಿರಲಿ*
ಸುಖವೇ ಪ್ರತಿಕ್ಷಣವೂ
ನಿನ್ನ ಉಡಿಯಲ್ಲಿರಲಿ
ಕೇವಲ ಮಗಳಲ್ಲ ತಾಯಿ ನನಗೆ
ಹೀಗೆ ಇರಲಿ ತಂದೆ ಮಗಳ
ಬಾಂಧವ್ಯ ಕೊನೆವರೆಗೆ
ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ
ಶ್ರೀ ಗುರುನಾಥಾರೂಢ ಸ್ವಾಮಿಗಳ
ಕೃಪಾ ಕಟಾಕ್ಷ ಕುಲದೇವರ ಅನುಗ್ರಹ
ಗುರು ಹಿರಿಯರ ಆಶಿರ್ವಾದಗಳಿಂದ
ನೂರಾರು ವರುಷ ಸುಖ ಸಂತೋಷದಿಂದ
ನಗುನಗುತ ಆಯುರ್ರಾರೋಗ್ಯದಿಂದ ಬಾಳು,
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಮುದ್ದು ಮಗಳೇ ಮೇಘು
ಸಾಧನೆಯ ಹಾದಿಯಲ್ಲಿ ನೀ ಸಾಗು..!

-



"ತ್ರಿಪದಿ ಮುಕ್ತಕ"

ಹಣವೊಂದು ಬಂದೊಡನೆ ನಿನ್ನವರ ಮರೆಯದಿರು
ಧನವಂತ ನೀನೆಂಬ ಜಂಬದಲಿ ಮೆರೆಯದಿರು
ಕ್ಷಣದಲಿ ಕರಗುವುದು ಢವಳೇಶ//

-



"ತ್ರಿಪದಿ ಮುಕ್ತಕ"

ನರಜನುಮ ತೊಡೆದೊಡನೆ ಧಾನವನು ಮಾಡಿದೊಡೆ
ಹರಜನುಮ ಬರದಯ್ಯ ಕರ್ಮವನು ಕಳೆದೊಡನೆ
ಪುರದೊಳಗೆ ಸ್ವಾಗತವು ಢವಳೇಶ..!

-



"ತ್ರಿಪದಿ ಮುಕ್ತಕ"

ಗುಣನಿಲಯ ಹುಡುಕುತ್ತ ಗಣಪತಿಗೆ ಕೈಮುಗಿದು
ಗುಣಧಾಮೆ ನಿಲಯಕ್ಕೆ ಹಾಜರಿಯ ಹಾಕಿದರೆ
ಗಣಹೋಮ ಮಾಡಿದಳು ಢವಳೇಶ..!😅

ಗುಣನಿಲಯ=ಸದ್ಗುಣಗಳಿಗೆ ನೆಲೆಯಾದ ಮನೆ
ಗುಣಧಾಮೆ=ಸದ್ಗುಣಗಳ ಒಡತಿ

-



ಲೈಫ್ ಎನ್ನುವ ಮಷೀನ್
ಸರಿಯಾಗಿಡುವುದಕ್ಕೆ
ವೈಫ್ ಎನ್ನುವ ಇಂಜಿನ್ ಬೇಕು.
ಮಷೀನ್ ಮತ್ತು ಇಂಜಿನ್
ಚಾಲೂ ಸ್ಥಿತಿಯಲ್ಲಿಡಬೇಕಾದರೆ
ಮಕ್ಕಳು ಎನ್ನುವ
ಡಬ್ಬಿಗಳೂ ಬೇಕೇಬೇಕು..! 😅

-



"ಪಂಚದಳ ಮುಕ್ತಕ"

ಅಟ್ಟಣಿಗೆ ಬಿಗಿಯಿರಲಿ ಎತ್ತರದಿ ನಿಂತಾಗ
ಪಟ್ಟಣವ ಸುತ್ತಿಸುತ ತೋರಿಸದೆ ಮರೆತಾಗ
ಲಟ್ಟಣಿಗೆ ಭಯವಿರಲಿ ಹೆಂಡತಿಯು ಸಿಟ್ಟಾಗಿ
ತಟ್ಟನೇ ಮಾತಗಳು ನೆನಪಿನಲಿ ಬಂದಾಗ
ಪಟ್ಟನೇ ತಲೆಗೊಂದು ಢವಳೇಶ್ವರ..!😅
ಅಟ್ಟಣಿಗೆ=ಏಣಿ

-



"ಪಂಚದಳ ಮುಕ್ತಕ"

ಮಳೆಹನಿಯ ಜೊತೆಗೂಡಿ ಭುವಿಗಿಳಿದು ವೇಗದಲಿ
ಹೊಳೆಹರಿಸಿ ನಗುತರಿಸಿ ಬೆಳೆಯಾಗಿ ಅವತರಿಸಿ
ಬಳೆತೊಡಿಸಿ ಫಸಲುಗಳ ಹೊಲಗಳಿಗೆ ಪೂಜಿಸುವ
ಬೆಳೆಗಾರ ನೀಡಿರುವ ಔತಣವ ಸ್ವೀಕರಿಸಿ
ಕಳೆತರಿಸು ಮೊಗದಲ್ಲಿ ಢವಳೇಶ್ವರ..!
ಕಳೆ=ಸಂತಸದಕ್ಷಣ

-



"ಪಂಚದಳ ಮುಕ್ತಕ"

ತಪ್ಪಾಗಿ ಬರೆದಾಗ ತಿದ್ದುಪಡಿ ಮಾಡಿದರು
ತಪ್ಪುಗಳ ಮಾಡದೆಯೆ ಸರಿಯಾಗಿ ಬರೆದಾಗ
ಹಪ್ಪಳವ ಸವಿದಂತೆ ಮಜವಾದ ರುಚಿಯಲ್ಲಿ
ತೆಪ್ಪಗಿನ ತೆಪ್ಪದಲಿ ಸೊಂಪಾಗಿ ಮಲಗಿರಲು
ಸಪ್ಪಳವೆ ಬರಲಿಲ್ಲ ಢವಳೇಶ್ವರ..!😅

-


Fetching ಗುರು ಢವಳೇಶ್ವರ..! Quotes