ನಿನ್ನ ಅರ್ಥಮಾಡಿಕೊಳ್ಳದ ಪರಿಚಿತ
ಆತ್ಮೀಯರೂ ಅಪರಿಚಿತರಿದ್ದಂತೆ...
-
No revenge can reinforce us instead
it ruins our mental health along
it can make us to be reckless
towards positive slice of life...-
ನವಮಾಸ ಹೊರಬೇಕು
ನೋವಾದರೂ ಸಹಿಸಬೇಕು
ನಾ ಜೀವ ತುಂಬುವ ಜೀವವನ್ನು
ನಾ ನಿರ್ಜೀವವಾಗುವವರೆಗೆ ಪ್ರೀತಿಸಿ, ಪೋಷಿಸಬೇಕು
ನನಗೇಕೆ ಈ ಎಲ್ಲ ಗೊಡವೆಯೆಂದು ಯಾವ ಅಮ್ಮನೂ ಯೋಚಿಸುವುದಿಲ್ಲ.
ಹೀಗಿರುವಾಗ ನೀ ಯಾರಿಗೋ ಬೇಡವೆಂದು,
ನಿನಗ್ಯಾರೋ ಬೇಕು ಎಂದು,
ನಿಂದನೆ, ಅವಮಾನಗಳಿಗೆ ನೊಂದು,
ನಿತ್ಯ ನಿರಂತರ ಎದುರಾಗುವ ಅರ್ಥಹೀನ ನೋವುಗಳಿಗೆ
ನಿನ್ನ ನೀ ನಿರ್ಜೀವವಾಗಿಸಿಕೊಳ್ಳುವುದು ನಿಜಕ್ಕೂ ಅಮಾನವೀಯ...
-
ತನ್ನ ಪಾಲಿಗೆ ಸಿಕ್ಕ ಸಂಬಂಧ, ಸವಲತ್ತು, ಸೌಕರ್ಯಗಳಿಂದ ಸಂತೃಪ್ತಿಯಾಗದ ವ್ಯಕ್ತಿ
ಸಮೃದ್ಧಿಯಾಗುವುದು ಕಷ್ಟಸಾಧ್ಯ...-
The more we evince our interest towards being punctual and functional,
the more we enhance in all the terms...-
ಅಜ್ಞಾನಿಗಾದರೂ, ಅಹಂಕಾರಿಗಾದರೂ ಬದುಕನ್ನು
ಅರ್ಥಮಾಡಿಸಬಲ್ಲ ಶಕ್ತಿ ಕಾಲವೆಂಬ ಶಿಕ್ಷಕನಿಗಷ್ಟೇ ಇದೆ...-
ಸಮಾಜದಲ್ಲಿನ ಅವ್ಯವಸ್ಥೆಗಳ ಬದಲಾವಣೆ ಎಂಬುದು ಕೇವಲ ಭಾಷಣದ ಭಾಷೆಯಾಗದೆ, ಬಳಕೆಯ ಭಾಷೆಯಾದರೆ ಎಲ್ಲವೂ ತಾನಾಗಿಯೇ ವ್ಯವಸ್ಥಿತವಾಗುತ್ತವೆ...
-
Most of us expect people must listen and must be dumb while we are describing our own tasks, talents and so on but, probably we become deaf if they start to speak about their own life...
-