ಒಲವಿನ ಹೃದಯ ಆಲಿಸುವೆಯ ಸವಿಮಾತೊಂದ
ಸನಿಹದಲ್ಲಿ ನೀನಿದ್ದಾಗ ದೂರವಾಗುವುದು ನನ್ನಿ ಚಿಂತೆ
ನನ್ನ ಹೃದಯದ ಬಡಿತದಲ್ಲಿ ನಿನ್ನ ಪ್ರತಿಯೊಂದು ಉಸಿರು ಅಡಗಿದೆ-
ನೀವು ಓದಿದ ಪುಸ್ತಕಗಳನ್ನು ದಯವಿಟ್ಟು ಎಸೆಯದಿರಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೀಡಿ ನೀವು ಪುಸ್ತಕ ದಾನಿಗಳಾಗಿ ಪಿಯುಸಿ ಪದವಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕ ನೋಟ್ಸ್ ಗಳನ್ನು ಎಸೆಯದಿರಿ ಅದನ್ನು ಸಾಧ್ಯವಾದರೆ ನಮಗೆ ತಲುಪಿಸಿ ಅದನ್ನು ನಾವು ಅಸಾಯಕ ವಿದ್ಯಾರ್ಥಿಗಳಿಗೆ ತಲುಪಿಸುತ್ತೇವೆ
ನಾವು ಓದಿದ ಪುಸ್ತಕಗಳನ್ನು ಎಸೆಯುವ ಮೂಲಕ ಪೋಲು ಮಾಡಿದರೆ ಪುಸ್ತಕಗಳ ಮರುಮುದ್ರಣ ಹೆಚ್ಚುತ್ತಲೇ ಇರುತ್ತದೆ ಜೊತೆಜೊತೆಗೆ ಪುಸ್ತಕಗಳನ್ನು ಅವರು ಮುದ್ರಿಸಲು ಮರಗಳನ್ನು ನಾಶಮಾಡ ಬೇಕಾಗುತ್ತದೆ .
ನಿಮ್ಮ ಪುಸ್ತಕಗಳಿಂದ ಮತ್ತೊಬ್ಬರಿಗೆ ವಿದ್ಯಾದಾನ ... ನಿಮ್ಮಲ್ಲಿರುವ ಪುಸ್ತಕಗಳನ್ನು ನಮಗೆ ನೀಡಿ .
ಸಂಪರ್ಕ : ಗೋವಿತ್ ಕಿರಣ್ 7892128354
-
ಭರವಸೆಯ ಬೆಳಕಿನಲ್ಲಿ
ನಂಬಿಕೆಯ ಜೀವನದಲ್ಲಿ
ಪ್ರೀತಿ ಮಮತೆಯ ಸಂಬಂಧದಲ್ಲಿರುವವನೆ ಮನುಜ-
ನೋವ ತುಂಬಿಟ್ಟುಕೊಂಡು ಬರೆದೆ ನಾ ಪುಸ್ತಕವ
ಅದನ್ನು ತೆರೆದರೆ ಕೇವಲ ನೋವೆ ಕೊನೆಗೆ ಉತ್ತರ-
ನಗುವುದನ್ನು ಕಲಿಯ ಬೇಕು ಸಂತೋಷ ಪಡಬೇಕು
ನಮ್ಮ ಗೆಲುವಿನಲ್ಲಿ ಮತ್ತೊಬ್ಬರ ಗೆಲುವಿನಲ್ಲಿ
-
ಎತ್ತ ನೋಡಿದರಲ್ಲಿ ಸ್ವಾರ್ಥ ತುಂಬಿದ ಜನ
ಸ್ವಾರ್ಥ ತುಂಬಿದ ಜೀವನ ಎಲ್ಲಿಯವರೆಗೆ
ಎತ್ತ ಸಾಗಲಿ ಇವರ ನಡುವಿನಿಂದ
ಜೀವನದ ಯಾನದಲ್ಲಿ ಅದೆಷ್ಟೋ ವ್ಯಕ್ತಿಗಳು ಬರುವವರು ಹೋಗುವವರು
ಉತ್ತರವೆ ಇಲ್ಲದ ಖಾಲಿ ಹಾಳೆಯ ಈ ಜೀವನ-
ತಪ್ಪು ಮಾಡುವುದು ಮನುಜನ ಸಹಜ ಗುಣ
ತಿಳಿಯದೆ ಮಾಡಿದ ತಪ್ಪ ಕ್ಷಮಿಸ ಬಹುದು
ತಿಳಿದು ತಿಳಿದು ಮಾಡಿದ ತಪ್ಪಿಗೆ ಕ್ಷಮೆಯು ಇಲ್ಲ ಮತ್ತೊಂದು ಅವಕಾಶವೂ ಇಲ್ಲ
ತಿಳಿದು=ತಿಳಿಯದೆ , ತಿಳಿಯದೆ × ತಿಳಿದು
(ಕೊನೆಗೆ ತಪ್ಪು ತಪ್ಪೆತಾನೆ )-
ಮುಂಜಾವಿನ ಚುಮುಚುಮು ಚಳಿಯಲ್ಲಿ
ಬೆಟ್ಟದ ನಡುವಿನ ಸಂಧಿಯಲ್ಲಿ ಸೂರ್ಯನ ರಶ್ಮಿಯನ್ನು ನೋಡಿದಾಗ ಸಂತೋಷಕ್ಕೆ ನನ್ನಿ ಮನಸ್ಸು ಕಾಣೆಯಾಯಿತ್ತು
ಆಗಸದಲ್ಲಿ 🐦 ಹಕ್ಕಿಗಳ ಸ್ವಚ್ಚಂದ ಹಾರಾಟವನ್ನು ನೋಡಿ ನನ್ನಿ ಮನಸ್ಸು ಕಾಣೆಯಾಯಿತ್ತು
-
ಗೆಲುವಿನ ಹಾದಿ ಕ್ಲಿಷ್ಟಕರವಲ್ಲ .....!
ಸವಾಲುಗಳು ಸವಾಲಾಗಿ ಉಳಿಯುವುದಿಲ್ಲ. ಅದೇ ಕೊನೆಗೆ ಗೆಲುವಿಗೆ ಉತ್ತರ ವಾಗುತ್ತದೆ
ಗೆಲುವಿನ ಹಾದಿಯಲ್ಲಿ ಸತತ ಯೋಜನಾ ಬದ್ಧ ಪ್ರಯತ್ನ ಮಾರ್ಗದರ್ಶನ ಬೇಕು ......-