Gouri B  
270 Followers · 9 Following

ಅಪ್ಪಟ ಕನ್ನಡತಿ
Joined 27 July 2018


ಅಪ್ಪಟ ಕನ್ನಡತಿ
Joined 27 July 2018
1 AUG 2020 AT 23:49

ಗಟ್ಟಿಯಾಗಿ ತಬ್ಬಿ ಅಳುವಾಸೆ ನಿನ್ನ
ನೀ ನನ್ನ ಬಿಟ್ಟು ಹೋಗುವ ಮುನ್ನ

-


26 JUL 2020 AT 0:25

ಈ ಕೊರೋನ ಬಂದಾಗಿನಿಂದ
Mobile ringtone ಗಿಂತ ಮನೆಯವರ ಕಾಟ ಜಾಸ್ತಿ ಆಗೇತಿ ನೋಡ್ರಿ.

ಅಲ್ಲಿ ಹೋಗ್ಬೇಡಾ, ಇಲ್ಲಿ ಹೋಗ್ಬೇಡಾ,
ಅವ್ರ ಜೊತೆ ತಿರ್ಗಬ್ಯಾಡ, ಇವ್ರ ಜೊತೆ ತಿರ್ಗಬ್ಯಾಡ,
ಕೈ ತೊಳಕೊ, ಕಾಲ ತೊಳಕೊ,
ಸೀನಬ್ಯಾಡ, ಕೆಮ್ಮಬ್ಯಾಡ,
Mask ಹಾಕೋ, ಮುಖಾ ಕಟ್ಕೊ etc,,,,

ಛೇ ಛೇ ಛೇ ಒಂದಾ ಎರಡಾ ಇದೆಲ್ಲಾ ನೋಡಿದ್ರ ಕೊರೋನಾನೆ ಪಾಡ ನೋಡ್ರಿ 😶 ಏನಂತೀರಿ ?

-


25 JUN 2020 AT 20:28

ನಂಬಿಕೆ ‌‌

ಈ ಮೂರು ಪದ ಜೀವನ್ದಲ್ಲಿ ಅದೆಷ್ಟು ಮಹತ್ವವಾದ್ದು ಅಂದ್ರೆ, ಪ್ರತಿದಿನ ಊಟ್ದಲ್ಲಿ ಉಪ್ಪಿರತ್ತೊ ಇಲ್ವೋ ಆದ್ರೆ ಈ ನಂಬ್ಕೆ ಅನ್ನೋದು ನಮ್ ನೆರಳ ತರಾ ಯಾವಾಗ್ಲೂ ನಮ್ ಜೊತೆಯಾಗಿರ್ಬೇಕು, ಇಲ್ಲಾ ಅಂದ್ರೆ ಈ ಜೀವ-ಜೀವನ ಎರಡರ ಮೇಲೂ ಜಿಗುಪ್ಸೆ ಹುಟ್ಟತ್ತೆ. ನನ್ಮೇಲ ನಂಗ್ ನಂಬಿಕೆ ಇದ್ರೆ ಅನ್ಕೊಂಡಿರೊದೆಲ್ಲ ಸಾಧ್ಸಬಹುದು, Success ಅನ್ನೋದು ಬೆನ್ನಿನ್ ಹಿಂದೆ ಕಚ್ಕೊಂಡಿರತ್ತೆ. ನನ್ಮೇಲೆ ನಿಂಗ್ ಸಂಪೂರ್ಣವಾದ ನಂಬಿಕೆ ಇದ್ರೆ "ಸ್ನೇಹ", ಯಾರೇ ಬಂದು ಕಡ್ಡಿ ಗೀರಿದ್ರು ಬೆಂಕಿ ಹತ್ತಲ್ಲ ಯಾಕಂದ್ರೆ ಈ ಬಂಧ ರಕ್ತಸಂಬಂಧಾನೇ ಮೀರಿದ್ದು. ಇನ್ನೂ ನಮ್ಮಿಬ್ರ ಮಧ್ಯ ಒಳ್ಳೆ ನಂಬಿಕೆ ಇದ್ರೆ "ಪ್ರೀತಿ", ತುಂಬಾ ಪವಿತ್ರವಾದದ್ದು, ಅದರಾಳಕ್ಕಿಳಿದಾಗಲೇ ಗೊತ್ತಾಗೋದು ಅದ್ರ ಸತ್ಯ ಎನಂತ. ಇದೆಲ್ಲದಕ್ಕೂ ಒಂದೇ ಕಾರಣ ನಂಬಿಕೆ, ಯಾರೂ ಯಾರನ್ನೂ ಯಾವತ್ತೂ ಬಿಟ್ಟೊಗಲ್ಲ ಇದೊಂದಿದ್ರೆ.....

-


24 JUN 2020 AT 12:46

ಅವಳಂದದ ನಗುವಿಗೆ ದೃಷ್ಟಿ ಬೊಟ್ಟಿಟ್ಟಾಗಿದೆ
ಅವನಿಷ್ಠದ ಜುಮುಕಿಯ ಶೃಂಗಾರಕೆ.

-


13 JUN 2020 AT 21:44

ಜೀವನ ಅಂದ್ರೆ ಇಷ್ಟೇ ಅನ್ಸತ್ತೆ ,
ನಾಳೆ ಅನ್ನೋ ಮಾತು ಸುಳ್ಳು
ಇವತ್ತು ಅನ್ನೋದು ಬರಿ ಕ್ಷಣಿಕ
ಈ ಕ್ಷಣ ಇದೀವಿ ಅಂತಾ ಖುಷಿ ಪಡ್ಬೇಕಷ್ಟೆ 😊

-


30 MAY 2020 AT 23:28

ಈ Follow ಮಾಡಿ, ಆಮ್ಯಾಲ Unfollow ಮಾಡಿದ ಮ್ಯಾಲ, ಏನಾದ್ರು ಸಿಕ್ಕೆತೆನ್ರೀ? ಸಿಕ್ಕಿದ್ರ ನಮ್ಗೂ ಸಲ್ಪ ಹೇಳ್ರಿ

-


20 APR 2020 AT 0:02

ಬದಲಾಗುತ್ತಿರುವ ಈ ಬದುಕಿನಲಿ
ಭಾವನೆಗಳಿಗೆ ಬೆಲೆ ಇಲ್ಲ .
ಕಂಡ ಕನಸುಗಳೆಲ್ಲ
ನನಸಾಗುವುದೆನ್ನುವುದು ಅಷ್ಟೇ ನಿಜವಲ್ಲ .

-


14 APR 2020 AT 15:07

ಮುಂಚೆ ಕಷ್ಟ ಪಟ್ಟು ಒಂದ್ ವಾರ ರಜಾ ತಗೊಂಡ್ ಬರ್ತಿದ್ವಿ, ಆಗ ಒಳ್ಳೆ ಅತಿಥಿ ನೋಡ್ಕೊಂಡಂಗ್ ನೋಡ್ಕೊತಿದ್ರು ಮನ್ಯಾಗ್.

ಈವಾಗ ಬಂದ 15 ದಿನಾ ಆಯ್ತ ಸಣ್ಣಗೆ ಕಸಾ, ‌ಭಾಂಡೆ, ವಗ್ಯಾನ ಮತ್ ಅಡಗಿನೂ ಚಾಲೂ ಆಗೆತ್. ಒಂತರಾ ಮನಿ ಕೆಲ್ಸದಾಳ್ಗಿಂತಾ ಕಡೆ ಆಗೇತ್ ನೋಡ್ರಿ,,,

-


31 MAR 2020 AT 23:51

ಬೆಂಗ್ಳೂರಿಂದ ನಮ್ಮೂರ್ಗೆ ಆರಾಮಾಗಿ ಬಂದ ಮುಟ್ಟಿದ್ವಿ ಅನ್ನೋ ಖುಷಿ ಒಂದ್ಕಡೆ ಆದ್ರ, ಮನಿಗ್ ಬಂದ್ಕೂಡ್ಲೆ ಇರೋರ್ - ಬರೋರ್ ಎಲ್ಲಾ ಎನ್ ಚೀನಾದಿಂದ ಬಂದೊರ್ ಹಂಗ್ ನೋಡಾತಾರ್ ನಮ್ನ್ 🤨

ಇನ್ ಈ Survey ಮಾಡೊರ್ 15 ದಿನಾ ಮನಿ ಬಿಟ್ಟ್ ಎಲ್ಲೂ ಹೋಗ್ಬಾರ್ದಂತ ದಿನಾ Attendence ತಗೋಳಾಕ್ ಬರ್ತಿದಾರ ನೋಡ್ರಿ ☹️ ಇದ್ಕಿಂತಾ ಬೆಂಗ್ಳೂರದಾಗ ಇರೋದು ಚಲೋ ಇತ್ತೇನೋ

-


31 OCT 2019 AT 12:36

Big Boss ಮನೆಯಲ್ಲಿ ಬೆಳಗೆರೆ ಬೆಳಕು

-


Fetching Gouri B Quotes