ನನ್ನಮ್ಮ ಇವಳು
ಅವಳ ಕನಸಲ್ಲಿ ನಂಗೊಂದು ಅರಮನೆ
ಕಟ್ಟಿ ನಲಿಯುವ ತ್ಯಾಗಮಯಿ ಇವಳು
ಕಾಣದ ದಾರಿಯಲ್ಲಿ ಕಗ್ಗತ್ತಲ ಸರಿಸಿ
ಬೆಳಕಾದ ದಾರಿ ದೀಪ ಇವಳು
ನಾ ಇಟ್ಟ ಪ್ರತಿ ಹೆಜ್ಜೆಯ ಹಿಂಬಾಲಿಸಿ
ಬಂದ ನನ್ನದೇ ನೆರಳು ಇವಳು
ರುಚಿರುಚಿ ತಿನಿಸು ಜೊತೆಗೆ ಬೆತ್ತದ ರುಚಿ
ತಿನಿಸಿದ ಸರ್ವ ಕೈ ರುಚಿ ಅರಸಿ ಇವಳು
ಮನರಂಜನೆಗಾಗಿ ನನ್ನ ತುಂಟಾಟ ನೋಡಿ
ನಗುತ್ತಿದ್ದ ನನ್ನೆಯ ಅಭಿಮಾನಿ ಇವಳು
ನನ್ನ ತನು ಮನವೆಲ್ಲ ತುಂಬಿಕೊಂಡಿರುವ
ನನ್ನ ಪ್ರೇಯಸಿ ಇವಳು , ನನ್ನಮ್ಮ ಇವಳು
❤️ ನಮ್ಮವಳು ❤️-
ಮುಗಿಲ ಗೆಳೆಯ ನಗುವ ಒಡೆಯ
ಅಶೋಕವನದಿ ಪ್ರೀತಿಯ ಇನಿಯ
ವೇದಗಳ ಸಾರ ನಿಮ್ಮಲ್ಲಿ ಪೂರ
ನಮ್ಮಯ ಒಲವಿನ ಅಕ್ಕರೆಯ ಸರದಾರ
ಮಾತಲ್ಲಿ ತುಂಬಿದೆ ಪ್ರೀತಿಯ ಮಣಿಮಾಲೆ
ಎಲ್ಲರೆದೆಯಲ್ಲಿ ನೀವ್ ಮಿನುಗುವ ಧ್ರುವತಾರೆ
ಸಹನೆಗೆ ನೀವೊಂದು ಭೂಷಣ
ಹೊಸತನಕ್ಕೆ ನೀವಾಗಿಹಿರಿ ನಿತ್ಯ ಚೇತನ
ಮೊಗದಲ್ಲಿ ಸೂಸಿದೆ ಸೂರ್ಯತೇಜಸ್ಸು
ಚಿರಕಾಲಕ್ಕೂ ರಂಜಿಸಲಿ ನಿಮ್ಮಯ ಶ್ರೇಯಸ್ಸು
-
ಮನಹೊಕ್ಕಿದ ಗುಬ್ಬಿಯ ಸಿರಿತನ
*****************************
ಬಾನೇರಿ ಬಂದ ಅರುಣ
ಭೂ ಧರೆ ಸೋಕಿದೆ ಕಿರಣ
ಬಾಗಿಲಿಗೆ ಬಂದೋ ಗುಬ್ಬಿಯ ಬಳಗ
ಹಾಡುತ ಅವುಗಳ ಚಿವ್ ಚಿವ್ ರಾಗ....
ಹೊತ್ತಾರೆಗೆದ್ದು ಒಪ್ಪರಾ ಮಾಡೋ ಗರತಿ
ಬಿಡಿಸ್ಯಾಳೆ ರಂಗಾಲೆ ಅಕ್ಕಿ ಹಿಟ್ಟ ಬಿತ್ತಿ
ಹಿಡಿ ಹೆಕ್ಕಿ ತಿಂದು ಪದ ಹಾಡ್ಯಾವೆ ಗುಬ್ಬಿ
ಎನ್ನವ್ವ ಸುಖಬಾಳೆ ನೀ,
ನಿನ್ನೆಸರು ಅರಳಲಿ ಜಗದೊಳು ಹಬ್ಬಿ....
ಎಲೆ ಎಸಳು ಕಿತ್ತು ಗೂಡ್ಕಟ್ಟುವ ಪರಿ
ನೋಡುವ ಕಣ್ಣಿಗೆ ಅದುವೇ ಸ್ವರ್ಗಸಿರಿ
ಹೊತ್ತು ತಂದ ಧಾನ್ಯವ ಸಂಜೆಗೆ ಉಂಡು
ಗೂಡು ಸೇರ‌್ಯಾವೆ ನಮ್ಮಿ ಗುಬ್ಬಿಯ ಹಿಂಡು....-
ಬಾಳ ಹಾದಿಗೆ ಹೊಂದಿಕೊಂಡು ನೆಡೆ
ಬದಲಾಗಿ ಅಂಟಿಕೊಂಡು ಅಲ್ಲ
ಹೊಂದಿಕೊಂಡರೆ ಮುಂಗಾರಿಗೆ ಹೊನ್ನರಾಗುವೆ
ಅಂಟಿಕೊಂಡರೆ ನಗು-ಅಳು ಬಾರದೆ ಜಡವಾಗುವೆ..-
ನನ ಗೆಳತಿಯ ಮದುವೆ
***************************
ಹಸಿರ ಚಪ್ಪರದಲ್ಲಿ ಅಡಕಿನೊಂಬಾಳೆ ಮಯೂರ
ಹಸಿ ಮೈಯ ಒಡತಿಗೆ ಮೂಗುತ್ತಿ ಸಿಂಗಾರ
ಬಾಗಿಲಿಗೆ ಬಂದಾಳ್ವೆ ಬಳೆಗಾರ ಗೌಡತಿ
ಬಲಗಾಲು ಮುಂದಿಟ್ಟು ತೊಡುಬಾರೆ ಗೆಳತಿ
ಮುತೈದೆಯರು ಬಿಡಿಸಾರೆ ಅಸಕ್ಕಿ ರಂಗಾಲೆ
ಪದವಾಡಿ ತುಗ್ಯಾರೆ ನಿನ್ನಸಮಣೆಯ ಉಯ್ಯಾಲೆ
ಹೊಸಗನಸು ಕಟ್ಟುತ್ತಾ ಕಟ್ಟಿಸಿಕೋ ಕಂಕಣ
ಅಕ್ಕತಂಗ್ಯರಾ ಪ್ರೀತಿ ಇದು ಹಚ್ಚಿಸಿಕೋ ಅರಿಶಿಣ
ಬಗೆಬಗೆಯ ಅಡುಗೆಯ ಭೋಜನ ನಡೆದೈತೆ
ಬಾರಿಸು ಢಮಢಮ, ಚಿಣ್ಣರ ಕಾಲು ಕುಣಿದೈತೆ
ಭುವನದ ಬಂಧುಗಳೇ ನಿಮಗೇಳ ಬಯಸುವೆ
ಶುಭಹಾರೈಸಿರೆಲ್ಲರೂ ಇಂದು ನನಗೆಳತಿಯ ಮದುವೆ
💥❤️💥
-✍️ಸಹನಾಜ್ಯೋತಿ
-
ಅಮ್ಮಳಾದ ನಮ್ಮಿ ಗುರುಅಮ್ಮ
***************************
ಅಕ್ಕರೆಯ ಸವಿ ತುತ್ತನಿತ್ತು
ಅಕ್ಷರದ ಬುತ್ತಿ ಹೊತ್ತು
ಒಂಭತ್ತಾಗುತ್ತಲೆ ಹೆತ್ತ ಕೂಸ ಬಿಟ್ಟು
ಹತ್ತಾರು ಮಕ್ಕಳಲ್ಲಿ ಹೊಸಗನಸ ಕಟ್ಟ
ಬಂದಿಹಳು ನಮ್ಮಿ ಗುರುಅಮ್ಮ...
ಅಪಾರ ಪ್ರೀತಿ ಅಂತರಾಳದಲ್ಲಿಟ್ಟು
ಹುಸಿ ಕೋಪ ಮೊಗದಲ್ಲಿ ತೊಟ್ಟು
ಅರಿಯದ ತಪ್ಪಿಗೆ, ಒಪ್ಪದ ಬೆತ್ತದಿ
ಅಲ್ಪ ಶಿಕ್ಷಿಸಿ, ಹುಳುಕಿಲ್ಲದ ಹೂ ಅರಳಿಸ
ಬಂದಿಹಳು ನಮ್ಮಿ ಗುರುಅಮ್ಮ...
ತೊದಲು ನುಡಿಗೆ ತಾಯಿ ಪ್ರೀತಿ ಕೊಟ್ಟು
ಆಟದ ಜೊತೆಯಲ್ಲೆ ಸಂಸ್ಕಾರ ಕೊಟ್ಟು
ನನ್ನ ಕುಣಿತಕ್ಕೆ ಅವಳ ಹೆಜ್ಜೆಯನಿಟ್ಟು
ಬಾಳಹಾದಿಯಲ್ಲಿ ಗುರುವಾಗಿ, ಸಖಿಯಾಗಿ
ಅಕಾಲದಲ್ಲಿ ಚಿರಕಾಲ ನನ್ನೆಸರುಳಿಯಲೆಂದು
ಆಶಿಸ ಬಂದಿಹಳು ನಮ್ಮಿ ಗುರುಅಮ್ಮ...
💐-
ಅಂದುಕೊಂಡ ಬದುಕೆ, ಅಂದುಕೊಂಡಷ್ಟು
ಖುಷಿ ಕೊಡದೊಡೆ I ಅನಿರೀಕ್ಷಿತ ಬದುಕಲ್ಲಿ
ನಾನೇನ ಅಪೇಕ್ಷೆಸಲಿ ಹೇಳು ನನ್ನವ್ವ...-
ಹೊತ್ತಿಗೊದಗದ ಹಣ, ಹೊತ್ತಾಗಿ ಸಿಕ್ಕಿರಲು
ಹೆಣ ಸಿಂಗರಿಸಲು I ಜನ ನೆರೆದು
ಬಂದಂತೆ ಕೇಳು ನನ್ನವ್ವ...
😶-
ರಂಗೇರಿದೆ ಬೃಂದಾವನ
ಕಂಡು ರಾಧಾಕೃಷ್ಣರ ಪ್ರೇಮ ಮಿಲನ
ಕಂಗೊಳಿಸುತಿದೆ ಕೈಲಾಸ ಪರ್ವತ
ಹಾರುತ್ತಿರಲು ಪಾರ್ವತಿಪರಮೇಶ್ವರನ ಪ್ರೇಮಪತ
ಕೆಸರಲ್ಲೂ ಮೂಡಿದೆ ಕಮಲಾನಂದ
ಕೇಳುತಿರಲು ಸರಸ್ವತಿಬ್ರಹ್ಮ ರ ಪ್ರೇಮನಾದ
ಪ್ರೀತಿ ತುಂಬಿದ ಭುವಿಯಲ್ಲಿ ಚಿಗುರಿದ ಈ ಪ್ರೀತಿಗೆ
ಪ್ರೇಮಭಾವದಿ ಪ್ರೀತಿಯಿಂದ ಹರಸಿರಿ
ಮಾಸದ ಪ್ರೀತಿಯ ಮಾಮರದಂತೆ
ಮುಗಿಲಾಚೆಗೂ ಮೊಳಗುತಿರಲಿ ರೋಜಾರಾಜೇಶ್
ಪ್ರೇಮಕವಿತೆ..
💐
Happy married life.. 😍-
ನನ ಗೆಳತಿಯ ಮದುವೆಗೆ
*****************
ಭುವಿಯಲ್ಲಿ ಹಸಿರ ಸಿಂಚನ
ಮನೆಯಲ್ಲಿ ಹೋಳಿಗೆ ಹೂರಣ
ಮೂಡಣದ ಸೂರ್ಯನೂ ಹೊತ್ತು ತಂದನು ಬಾಗಿಣ
ನನ ಗೆಳತಿಯ ಮದುವೆಗೆ...
ಬಂಧುಗಳಲ್ಲಿ ತುಂಬಿದೆ ಸಡಗರ
ಏರುತಿದೆ ಮದ್ದಳೆಗಳ ಅಬ್ಬರ
ಮಾಮರದಲ್ಲಿ ಹಾಡುತಿದೆ ಕೋಗಿಲೆಯು ಇಂಚರ
ನನ ಗೆಳತಿಯ ಮದುವೆಗೆ...
ಇಬ್ಬನಿಯಲ್ಲೂ ಮೂಡಿದೆ ನಗು
ಸಂಭ್ರಮಕ್ಕೆ ಎಲ್ಲರ ಮನವಾಗಿದೆ ಮಗು
ಅರಳಿ ಶೃಂಗಾರಗೊಂಡಿವೆ ಗಿಡಮರಗಳಲ್ಲಿನ ಮೊಗ್ಗು
ನನ ಗೆಳತಿಯ ಮದುವೆಗೆ...
ಬಾಗಿಲಲ್ಲಿ ಹಸಿರ ತೋರಣ
ತುಸು ನಾಚಿದೆ ಗೆಳತಿಯ ಮನ
ಬಾನೇರಿ ಬರುತಿದೆ ಅವಳೊಲವಿನ ದಿಬ್ಬಣ
ನನ ಗೆಳತಿಯ ಮದುವೆಗೆ...
-✍️ಸಹನಾಜ್ಯೋತಿ
-