ಗಿರಿಜಾತನಯ ರವಿಪ್ರಿಯ   (✍️ಕಿರಣ್ ಕುಮಾರ್ ಜಿ.ಎಸ್.)
1 Followers · 14 Following

ವಾಸ್ತವದೊಂದಿಗೆ ಸಾಹಿತ್ಯ ಪಯಣ
Joined 6 March 2023


ವಾಸ್ತವದೊಂದಿಗೆ ಸಾಹಿತ್ಯ ಪಯಣ
Joined 6 March 2023

ಪುರುಷ ಲೋಕವೇ ನೀ ತಣ್ಣಗಾಗು
ಮಲಗಿಸಬೇಕು ನಾ ನನ್ನ ಮಗಳನ್ನು...!
ಕಾಣಬೇಕು ಅವಳು ನಾ ಕಾಣದ ಕನಸುಗಳನ್ನು...!!

-



ಈ ಜಗತ್ತಿನ ಪವಾಡಗಳು ಎರಡೇ,
ಒಂದು ತಾಯಿಯ ಗರ್ಭದಲ್ಲಿ ಮಗು ಜನಿಸುವುದು;
ಇನ್ನೊಂದು ಮನುಷ್ಯ ಮಣ್ಣಿನಲ್ಲೋ ಕೆಂಡದಲ್ಲೋ;
ಕೊಳೆತೋ ಕಾದೋ ಕರಗಿ ಹೋಗುವುದು....!!

-





Let the end be better than beginning.....


-✍️Kiran G.S Kundapura








-



ನಿನ್ನ ಕುರಿತು ಬರೆದ ಕವಿತೆಗಳೆಲ್ಲವೂ ನಿನ್ನನ್ನೇ ನೆನೆದು ಕಣ್ಣೀರು ಸುರಿಸುತ್ತಿವೆ...

-



ನಿನ್ನನ್ನು ಪ್ರೀತಿಸುವ ನೈತಿಕ ಹಕ್ಕುಗಳನ್ನಷ್ಟೇ ಈ ಜಗತ್ತು ನನಗೆ ನೀಡಿತ್ತು....
ನಿನ್ನನ್ನು ಪಡೆಯುವ ಪರವಾನಗಿಯನ್ನು ಕೊಟ್ಟಿರಲಿಲ್ಲ...

-



ಕಣ್ಮರೆಯಾದನು ರಾಜರ ಕುಮಾರ
ಕನ್ನಡ ನಾಡಿನ ವೀರಮಾರ್ತಾಂಡ
ಬೆಳಗುವ ರವಿ ನೀನು, ತಂಪೆರೆಯುವ ಶಶಿ ನೀನು
ಅವರಿರುವವರೆಗೂ ಅಜರಾಮರ ನೀನು...

ಸಾರ್ವಭೌಮರ ಪ್ರಿಯ ಭಕ್ತನು ನೀನು
ವೈಕುಂಠವಾಸ ಶ್ರೀ ಹರಿಯ ಭಕ್ತ ಪ್ರಹ್ಲಾದ
ನೀನಿಲ್ಲದ ಈ ಸಿನಿಜಗಕೆ ಎಲ್ಲಿದೆಯೋ ಆಹ್ಲಾದ
ಮರಳಿ ಬರಬಾರದೇಕೆ ಆ ಬೆಟ್ಟದ ಹೂವನು ಅರಸಿ....

ಸಹಜತೆಯೇ ನಿನ್ನ ನಡೆ, ಸಹನೆಯೇ ನಿನ್ನ ನುಡಿ...
ಗುಡಿಯಿರದ ಪರಮಾತ್ಮನು ನೀನು..
ನಿನ್ನಿಂದಲೇ ಈ ಬದುಕಿಗೆ ಕಳೆಯು
ಅರಳುವ ಮುನ್ನವೇ ಬಾಡಿದೆ ನೀನು, ನಿನಗಿಷ್ಟು ಆತುರವೇಕೆ?

ವೃದ್ಧರ ಪಾಲಿನ ಮುದ್ದಿನ ಕಂದ, ಯುವಕರ ಬಾಳಿಗೆ ಯುವರತ್ನ...
ಯುಗಯುಗಗಳೇ ಕಳೆದರೂ ಆಗುವೇ ನೀನೂ ಅಜರಾಮರ
ಬಂಗಾರದ ಬಾಳನು ಬದುಕಿ ಭೂದೇವಿಯ ಮಡಿಲ ಸೇರಿದೆ...
ಸಾರ್ಥಕ್ಯದ ಈ ಸಾವಿನಲೂ, ನಮಗಿದೋ ನೀನೆ ಸ್ಫೂರ್ತಿಯು....
ಮರಳಿ ಬಿಡು ಈ ಭುವಿಗೆ, ನಿನಗಿದೋ ಪ್ರೀತಿಯ ಸ್ವಾಗತ...

-



ನನ್ನಿಂದ ಎಲ್ಲರೂ ದೂರವಾಗುತ್ತಿದ್ದಾರೆಂದು ನಿರಂತರವಾಗಿ ಚಿಂತಿಸುವ ಮನುಷ್ಯನಿಗೆ ಮುಂದೊಂದು ದಿನ ನಾನೇ ಎಲ್ಲರಿಂದಲೂ ದೂರವಾಗುತ್ತೇನೆ ಎಂಬ ಪರಿಜ್ಞಾನವೇ ಇರುವುದಿಲ್ಲ......

-




ಓ ಒಲವೇ ನೀನೆಲ್ಲಿರುವೇ..?
ನನ್ನ ಹೃತ್ಕುಂಡಗಳಲ್ಲಿ ಅಡಗಿರುವೇ...
ನನ್ನ ಹೃದಯ ನಿಲ್ಲುವವರಗೆ...,
ನನ್ನ ಹೃದಯದ ಮಿಡಿತದಂತೆ....,
ನೀ ನನ್ನೊಳಗೆ ಚಿರ ಶಾಶ್ವತ.....,
ಈ ಹೃದಯ ನಿಂತಾಗ.....,
ನೀ ನನ್ನ ಹೃದಯದಿಂದ.....,
ಕ್ರಾಂತಿ ಚೇತನವಾಗಿ ಚಿಮ್ಮಿಬರುವೇ....,
ಒಂದೆಡೆ....,
ನನ್ನನ್ನು ಗೋರಿಯೊಳಗೆ ಇಳಿಸಲೋ....,
ಬೆಂಕಿಯಲ್ಲಿ ದಹಿಸಿ ಸುಡಲೋ.....,
ತರಾತುರಿಯಲ್ಲಿ ತಯಾರಿ ನಡೆಯುತ್ತದೆ.....,
ಇತ್ತ ನನ್ನ ಪ್ರೀತಿಗೆ ಸಾವೆಂಬ ಪರದೆಯ ಸರಿಸಿ...,
ನಾನು ಚಿರನಿದ್ರೆಯಲ್ಲಿ ಮಲಗಿರುತ್ತೇನೆ.....,
ನೋಡಲು ನನ್ನವರು ಬರುವರು....,
ನೀನು ಬರಬಹುದೇನೋ....!!!
ಬಂದರೂ ನಾನು ನೋಡಲಾರೆ....,
ನಿನಗೂ ನಾನು ಕಾಣಲಾರೆ....,
ಆಗ ನಿನಗೆ ತಿಳಿಯುತ್ತದೆ.....,
ನನ್ನನ್ನು ಪ್ರೀತಿಸುವ ಹೃದಯ....,
ನನಗಾಗಿಯೇ ಮಿಡಿದು, ನನ್ನನ್ನು ಪ್ರೀತಿಸುತ್ತಲೇ......
ಮತ್ತೆಂದೂ ಮರಳಿ ಬಾರದ ಲೋಕಕ್ಕೆ ಸಾಗಿದೆ ಎಂದು.....!!!

-



ಭವಿಷ್ಯದ ಕನ್ನಡ

ಶತಶತಮಾನಗಳ ಚರಿತ್ರೆಯಲಿ ಮೆರೆದಿಹ ಕನ್ನಡ
ಶತಕೋಟಿಮನಸುಗಳ ಬೆರೆತಿಹ ಕನ್ನಡ
ಹಲ್ಮಿಡಿಯ ಶಿಲೆಯಿಂದ ವಿಶ್ವದ ನೆಲೆಯಡೆಗೆ ಹಬ್ಬಿಹ ಕನ್ನಡ
ಕನ್ನಡವನಾಡದ ಜಿಹ್ವೆಯು ಇದ್ದು ಫಲವೇನು?

ಜ್ಞಾನ -- ವಿಜ್ಞಾನ ಲೋಕವನೇ ಬೆಳಗಿದ ಕನ್ನಡ
ನುಡಿವ ನುಡಿಯಲ್ಲಿ,ಹರಿವ ನೀರಲ್ಲಿ,ಬೆಳೆವ ಪೈರಲ್ಲಿ,
ಬರೆದ ಪದಗಳಲಿ,ಬೀಸೋ ಗಾಳಿಯಲಿ, ಮಾರ್ದನಿಸಿದೆ ಕನ್ನಡ.....
ಆದರಿಂದು ಭವಿಷ್ಯದ ಮಾತಾದುದೇಕೆ ನನ್ನ ಈ ಕನ್ನಡ?

ಮಗು ತೊದಲುವ ನುಡಿಗಳಲಿ ಬರಲಿ ಹೆಮ್ಮೆಯ ಕನ್ನಡ
ಆಂಗ್ಲತೆಯ ತೊರೆದು ಹೇಳುನೀ ಶುಭೋದಯವ
ಮಮ್ಮಿ ಹೋಗಲಿ ,ತಾಯಿ ಬರಲಿ, ಕನ್ನಡ ತಾಯಿ ಬರಲಿ.....
ಇದುವೇ ನಮ್ಮಯ ಮುಂದಿನ ಭವಿಷ್ಯದ ಕನ್ನಡವಾಗಲಿ॥೧೨॥

ವಾಣಿಜ್ಯ-ವಿಜ್ಞಾನ-ಅಭಿಯಂತರ-ವೈದ್ಯ ಶಿಕ್ಷಣವು ಒಂದೇ ಆಗಲಿ,ಅದು ಕನ್ನಡವಾಗಲಿ....
ಅಧಿಕಾರದ ದರ್ಪ ನಿಲಲಿ,ಕನ್ನಡವನುಳಿಸುವ ಮನಸು ಬರಲಿ
ಕನ್ನಡ ಪದ ಭಂಡಾರದಲಿ,ಹರಿಯಲಿ ಕೋಟಿಪದಗಳ ಹೊಳೆ
ಕನ್ನಡ ನುಡಿ ಜಾಲದಲಿ ಸುರಿಯಲಿ ಪದಗಳ ಮಳೆ
ಇದುವೇ ನಮ್ಮಯ ಮುಂದಿನ ಭವಿಷ್ಯದ ಕನ್ನಡವಾಗಲಿ ॥೧೬॥

-



ಕನ್ನಡವೇ ಉಸಿರು

ಶಿರವ ಬಾಗುವೆ ನಾ ಕನ್ನಡಕೆ, ಕನ್ನಡಾಂಬೆಯ ಪಾದಕೆ.
ಕನ್ನಡ ಪದ ನುಡಿ ನೀನು, ಸಿಹಿ ಸವಿ ನೀನು.
ಮರೆತರೆ ಈ ಕನ್ನಡವ, ನರಜನ್ಮ ವ್ಯರ್ಥವಾಗುವುದು ಈ ಧರೆಯೊಳಗೆ.
ಕನ್ನಡ ಪದ ಹಸಿರು, ಕನ್ನಡವೇ ನನ್ನ ಉಸಿರು. ||೪||

ಕನ್ನಡದ ಕಂಪಿಹುದು, ಕವಿ ಪಂಪನ ಪದಗಳಲಿ.
ಅದನರಿತು ನಡೆ ಮುಂದೆ, ಗೆಲುವು ನಿನ್ನ ಮುಂದೆ.
ನನಸಾಗಿಸು ಓ ಕನ್ನಡಿಗನೇ, ಕವಿ ಕಯ್ಯಾರರ ಕನಸನು.
ನಾ ಅಳಿದು ಹೋದರು, ಕನ್ನಡವೇ ನನ್ನ ಉಸಿರು. ||೮||

ಗಗನವೇರಿದೆ ಕರುನಾಡಿನ ಶಕ್ತಿ ಕಿಡಿ, ಇದಕ್ಕಿಂತ ಉಂಟೇ ಬೇರೆ ಜಯದ ಗರಿ.
ಚರಿತೆಯನೊಮ್ಮೆ ಇಣುಕಿ ನೋಡಾ, ಅಲ್ಲಿಹುದು ಕನ್ನಡಿಗನ ವೀರನಡೆ.
ನನ್ನನಾವರಿಸಿದೆ ಕನ್ನಡದ ಕುಸುರು, ಕನ್ನಡವೇ ನನ್ನ ಉಸಿರು||೧೨||

ಮುಂದೆ ನೋಡು ಜೀವನದಿ, ಹಿಂದಿಹುದು ಹಂಪಿ ಗುಡಿ.
ಸಹ್ಯಾದ್ರಿಯ ಶಿಖರವೇರು,ಮಲೆನಾಡಿನ ಸ್ವರ್ಗ ನೋಡು.
ನಾನೇನಾ ಬಣ್ಣಿಸಲಿ, ಈ ನಾಡ ಸೊಬಗ ಸಿರಿ.
ಪದಗಳಿಗೆ ನಿಲುಕದ ಕರುನಾಡ ವೈಭವದ ನೆಲೆ.
ಪುಟ್ಟುವೇ ನಾ ಈ ಮಣ್ಣಲ್ಲಿ,ಕನ್ನಡಾಂಬೆಯ ಮಡಿಲಲ್ಲಿ, ಕನ್ನಡವೇ ನನ್ನ ಉಸಿರು ||೧೬||

-


Fetching ಗಿರಿಜಾತನಯ ರವಿಪ್ರಿಯ Quotes