ಅದಕ್ಕೆ ನಿನಗಿಂತ ನನಗೆ
ಕನಸೇ ತುಂಬಾ ಅಪ್ತ
-
ಬಣ್ಣವಿಲ್ಲದ ಬದುಕಿಗೆ
ಬಣ್ಣ ಬಳೆದು ಮಾಸಿದ
ಮನಕೆ ನಗುವಿನ
ತೇಪೆ ಹಚ್ಚುತ್ತಿರುವೆ..-
ನನ್ನ ಮನದ ತಾಕತ್ ನಿನೇ
ಎಂದುಕೊಂಡಿದ್ದಕ್ಕೇನೋ
ನೀ ತಾತ್ಕಾಲಿಕವಾಗಿಬಿಟ್ಟೆ ಅನಿಸುತ್ತೆ
ನಿನ್ನದೆ ಕನಸುಗಳ ಕಾಣಬಯಸಿದ್ದಕ್ಕೇನೋ
ನೀ ಶಾಶ್ವತವಾಗಿ ಕನಸಲ್ಲೆ
ಉಳಿದುಬಿಟ್ಟೆ......-
******ಜವಳಿ ನುಡಿ..೫೦*******
*************************
ಕೆಲ ಸಂದರ್ಭದಲ್ಲಿ ಮಾತಿಗಿಂತಲು
ಮೌನವಾಗಿ ಇದ್ದು ಒಳಿತು ಕೆಡಕುಗಳ
ಅವಲೋಕನ ಮಾಡುವುದು ಒಳಿತು
ಅವಸರದ ಕೈಯಲ್ಲಿ ಬುದ್ದಿ ಕೊಟ್ರೆ
ಜೀವನ ದಿಕ್ಕಾಪಾಲಾಗುವುದು.
**************************
........ಗಿರಿಶಾರದ......-
ನಗು ಮಾಸದಿರಲೆಂದು ಮಗುವಾದೆ
ಮಗುವಿನ ಮನಕೆ ಹೊರಲಾರದಷ್ಟು
ಪದಗಳು ತುಂಬಿದಬಂಡಿಯ ನೊಗ
ಹೊರುತಿರುವೆ .....
-
ದೇವರೇ ನೀ ಬೇಗ ಗೆದ್ದು ಆಟವನ್ನು
ಬೇಗ ಮುಗಿಸಿಬಿಡು
ಹುಸಿಮಾಡದ ಹಸಿಗಾಯಕ್ಕೆ ಮುಲಾಮಿನ
ಕೊರತೆ ಆಗಿದೆ-
ಸಾವು ಅನಿರೀಕ್ಷಿತ
ಬಂದಮೇಲೆ ಅದರ ಅರಿವಿರದೆ
ಹೋಗಿಬಿಡುತ್ತೇವೆ
ಬದುಕು ಅನಿವಾರ್ಯ
ದಿನಾಲು ಸತ್ತು ಬದುಕುವ
ಅರಿವಿದ್ದರು ಅದಕ್ಕೆ
ಅಂಟಿಕೊಂಡು ಇರ್ತಿವಿ
ಇದೇ ಅಲ್ವ ವಿಪರ್ಯಾಸವೆಂದರೆ...-
ಕಟ್ಟಿದ ಗಂಟಲಿಗೂ ನಿನ್ನ ಧ್ವನಿಯ ನೆಂಟಸ್ಥಿಕೆ ಬೇಕು
ಗರ್ಭಗೊಂಡ ಕಣ್ಣು ಕಡಲಾಗಲು ನಿನ್ನ ಹೆಗಲು ಬೇಕು
ಕಲ್ಮಶಗಳನ್ನೆ ತುಂಬುತಿಹ ಒಡಲಿಗೊಂದು ಹನಿ
ಸಿಹಿನೀರ ನೇವರಿಕೆ ಬೇಕೆನಿಸಿದೆ.....-
ಸಾವಿರ ಸವಾಲುಗಳು ಬಂದರು
ಎದುರಿಸುವ ಸಾಮರ್ಥ್ಯ ಇರದಿದ್ದರೂ
ಬರವಸೆಯ ಸುಳಿಯಲ್ಲಿ ಸಿಲುಕಿರುವ ಆತ್ಮ.-