Giri K Math.   (Honey ✍)
70 Followers · 22 Following

Joined 20 April 2019


Joined 20 April 2019
27 JUN 2023 AT 8:53

ನನ್ನೊಲವ ಪಡೆಯುವ ಗುಂಗಿನಲ್ಲಿ,
ಚಟಪಡಿಸುವ ವೇಳೆಯಲ್ಲಿ,
ಸದಾಕಾಲ ನನ್ನೊಲವಿನ ಧ್ಯಾನದಲ್ಲಿರುವ
ನಿನ್ನಾ ಹೃದಯಕೆ ನೀಡಲೇ ನಾ
ತುಸು ಮುತ್ತಿನ ಬಹುಮಾನ...!

-


8 JUN 2023 AT 14:13

ಇಳಿ ಸಂಜೆಯ ಹೊತ್ತಲ್ಲಿ ಅರ್ಧ ಮರ್ಧ ಮುಳುಗಿದ ನೇಸರನ 🌄ನೋಡುತ್ತಾ ನನ್ನವನ ನೆನಪಾದ ಆ ಕ್ಷಣಕ್ಕೆ
ಏನೆಂದು ಹೆಸರಿಡಲಿ.... !!

ಬೀಸೋ ಗಾಳಿಯ ತೆಕ್ಕೆಯಲಿ ಬೀದಿ ದೀಪಗಳಡಿಯಲ್ಲಿ🎆
ನನ್ನ ನೆರಳು ನೋಡುತ್ತಾ ನನ್ನವನ ನೆನಪಾದ ಆ ಕ್ಷಣಕ್ಕೆ
ಏನೆಂದು ಹೆಸರಿಡಲಿ...!!

ಹುಣ್ಣಿಮೆಯ ಚಂದಿರನ 🌝ಬೆಳದಿಂಗಳು ಸವಿಯುತ್ತ ತಾರೆಗಳ✨💫
ನಡುವಿನಲ್ಲಿ ನನ್ನವನ ನೆನಪಾದ ಆ ಕ್ಷಣಕ್ಕೆ
ಏನೆಂದು ಹೆಸರಿಡಲಿ....!!

-


13 FEB 2023 AT 21:46

ಸಾವಿರ ಸಾಲುಗಳು
ಕಾದು ಕುಳಿತಿವೆ ನೀ
ನನ್ನವನೆಂದು
ಸಾರಿ ಹೇಳಲು
ಒಲವಿನ ಮಡಿಲಿದೆ
ನಿನಗೆ ನೀಡಲೆಂದು
ಅಕ್ಕರೆಯ ಒಡಲಿದೆ
ನಿನ್ನ ಅಪ್ಪುಗೆಗೆಂದು
ಸಕ್ಕರೆಯ ಮುತ್ತೊಂದಿದೆ
ನಿನ್ನ ಮುದ್ದಾಡಲು
ಸಣ್ಣ ಸನ್ನೆ ಕೊಡು ಸಾಕು
ಈ ಮನ ಕಾದಿದೆ ನಿನಗಾಗಿ
ಎಂದೆಂದೂ......!!

-


13 FEB 2023 AT 20:29

ಅವನೊಂದು ದಿಗಂತ
ಅವಿಸ್ಮರಣಿಯ ಅದ್ಭುತ
ಅವನತ್ತ ಸಾಗಿದೆ
ನನ್ನ ಮನದ ಚಿತ್ತ
ಅವನಿರುವನು ಎತ್ತ..??
ಹುಡುಕುತ್ತೀರುವೆ ನಾ
ಸುತ್ತ ಮುತ್ತ..!!

-


13 FEB 2023 AT 20:18

ನೀ ಕಣ್ಮುಂದೆ ಇದ್ದರೂ
ದೂರವೇ ನಾನಿರುವೆ
ಕಣ್ತುಂಬ ಕನಸ ಕಂಡು
ದೂರದಿ ನಿಂತು ನಿನ್ನ ಹಾರೈಸುತ್ತೀರುವೆ
ಕಣ್ಣಲ್ಲೇ ಕಡೆಗಾಣಲಿ ನಾ ಕಂಡ ಕನಸು
ಇನ್ನಿಲ್ಲ ನಿನ್ನ ಮತ್ತೆ ತಿರುಗಿ ನೋಡುವ ಮನಸು...!!

-


7 FEB 2023 AT 20:23

ಇಳಿ ಸಂಜೆಯ
ತಿಳಿ ತಂಗಾಳಿಯೊಂದಿಗೆ
ಮನದಲ್ಲಿ ಭಾರಹೊತ್ತು,
ಸುರಂಗವಿರದ ದಾರಿಯಲ್ಲಿ ಸಾಗುವಾಗ
ಸದ್ದಿಲ್ಲದೆ ನನ್ನತ್ತ ಸುಳಿದ ನನ್ನವನ ಬಿಂಬ...
ಸತ್ಯವಿರಬೇಕಿತ್ತು ಎಂದೆನಿಸಿತು...!!

-


21 JUL 2022 AT 8:30

ನನ್ನ ಸ್ವರದಲ್ಲಿಡಗಿರುವ ಸಾಹಿತ್ಯ ನೀನು...
ಆ ಸಾಹಿತ್ಯದಲ್ಲಿಡಗಿರುವ ಭಾವನೆ ನಾನು...!!

-


18 JUL 2022 AT 21:34


ಕಷ್ಟ ಎಂದೊಡನೆ
ಜೊತೆ ನಿಲ್ಲುವ ಜೀವ
ಅಂದುಕೊಂಡೆ...
ನೆನಪು ಎಂದೊಡನೆ
ಕಣ್ಣಂಚ್ಚಲ್ಲಿ ಜಾರುವ
ಕಣ್ಣೀರ.... ಹನಿಯಾದೆ
ನೀನು....!!

-


25 MAR 2022 AT 6:53

ತಿಳಿಯದೆ ಉಸಿರಾದ ಜೀವಕೆ
ಇಚ್ಚಿಸಿದರೂ ..,,
ಅಚ್ಚಳಿಯದ
ಹಾಗೆ
ಹಸಿರಾದೇ ನೀನು....
ನನ್ನೀ ಬಾಳಿಗೆ...!!

-


20 MAR 2022 AT 12:15

ಕಣ್ಣಂಚಲ್ಲಿ ಜಾರಿದ ಅಶ್ವವು,
ಹೇಳಿದೆ ಮನದಾಳದಿ
ಅಡಗಿದ ನೂರು ಕತೆಯನು....!

-


Fetching Giri K Math. Quotes