ಉದಕವೆಂದರೆ ದಾಹ ತಣಿಸುವ ನೀರು
ಉದಕವೆಂದರೆ ಪ್ರಾಣ ಉಳಿಸುವ ಜೀವಜಲ.
-
ಕವಿತೆ
ಕವಿಯ ಕಲ್ಪನೆಯ ದಾಹಕ್ಕೆ
ಶರಣಾಯಿತು ಪದಗಳ ದಂಡು
ಪುಟ ಪುಟನೆ ನೆಗೆ ನೆಗೆದು
ಬಿಳಿ ಹಾಳೆ ಅಲಂಕರಿಸಿಬಿಟ್ಟವು
ಕಪ್ಪು ಬೊಟ್ಟನಿರಿಸಿಕೊಂಡು.
-
ನೋವು
ಹೃದಯವನ್ನು ಸುಡುತ್ತದೆ
ಚಿಂತೆ
ಮನಸ್ಸನ್ನು ಘಾಸಿಗೊಳಿಸುತ್ತದೆ
ಕೊಂಕು
ಮಾತುಗಳು ಹೊಟ್ಟೆ ಉರಿಸುತ್ತದೆ
ಅಪವಾದ
ಜೀವನವನ್ನೇ ನಾಶಮಾಡುತ್ತದೆ.
-
ಮನೆಯಂಗಳದಲ್ಲಿ
ಬೀಗುವ ದೀಪ ಹೇಳಿತು
ಕತ್ತಲಾದರೆ ಈ ಮನೆಗೆಲ್ಲ
ನಾನೇ ರಾಣಿ.
ಜಗತ್ತಿಗೇ ಬೆಳಕ ನೀಡುವ
ಸೂರ್ಯ ಹೇಳಿದ
ನಾನಿಲ್ಲದೇ ಹಗಲೇ ಇಲ್ಲ
ನಿಂದೇನಿದ್ರೂ ರಾತ್ರಿ ಪಾಳಿ.
ಇವರಿಬ್ಬರ ಮಾತು ಆಲಿಸಿ
ಚಂದ್ರ ನಕ್ಕು ಹೇಳಿದ
ಒಬ್ಬರು ಉರಿ
ಇನ್ನೊಬ್ಬರು ಅಲ್ಪಾಯುಷಿ.
ಒಟ್ಟಿನಲ್ಲಿ ಇವರನ್ನು
ಅವಲಂಬಿಸಿರುವ ನಾವುಗಳು
ಸದಾ ಪರಾವಲಂಬಿ.
ಸಂಗೀತಾ ಕಲ್ಮನೆ
-
ಎಣ್ಣೆ ಮಜ್ಜನಗೊಂಡ ದೇಹ
ಹಂಡೆಯ ಬಿಸಿ ನೀರಲಿ ಮಿಂದೆದ್ದರೆ
ಇನ್ನಿಲ್ಲದ ಸುಖವ ಕಾಣುವುದು
ಮೈ ಮನವೆಲ್ಲ ಹಗುರಾಗಿ
ಈ ಚಳಿಗೆ ಕೀಲುಗಳೆಲ್ಲ ಸಡಿಲಾಗಿ
ಲವಲವಿಕೆ ತಾಂಡವವಾಡುವುದು.
ಆಹಾ! ಕಾಳು ಮೆಣಸು
ಶುಂಠಿಯ ಜಜ್ಜಿ
ಜೀರಿಗೆ ಕೊತ್ತಂಬರಿ ಬೆಲ್ಲ
ಪೇರಿಸಿದರದ್ಲೋಟ ಬಿಸಿ ಬಿಸಿ
ಕಷಾಯ ಪೊಗದಸ್ತು ನಿದ್ದೆಯಲಿ
ಗೊರಕೆ ಹೊಡೆಯಬೇಕು
ಮಾಡಿಕೊಡು ಕೂಸೇ 🤣
-
ವರ್ಷದ ಮೊದಲಲ್ಲಿ ಕೈಗೊಂಡ ತೀರ್ಮಾನಗಳನ್ನು ನೆನೆದು
ಸಾಧಿಸಲಾಗದಿದ್ದಕ್ಕೆ ವರ್ಷದ ಕೊನೆಯ ದಿನ ಮುಖ ಪೆಚ್ಚಾಯಿತು-
ವಹಿಸಿಕೊಂಡ ಕೆಲಸವನ್ನು ಯಾವ ಲೋಪವಿಲ್ಲದೆ
ಸಮರ್ಥವಾಗಿ ನಿರ್ವಹಿಸುವ ಪ್ರಕ್ರಿಯೆ-
'ಹೊಸ ಮನೆಗೊಂದು ಶುಭ ಹಾರೈಕೆ'
ಬಂಗಾರದ ಬಣ್ಣಕ್ಕೆ ಕಳಶವಿಟ್ಟಂತಿದೆ
ಈ ಮನೆಯ ಅಂದ
ಭುವಿಯ ಮೇಲಿನ ಸ್ವರ್ಗದಂತಿರಲಿ
ಈ ಮನೆಯಲ್ಲಿ ನಿಮ್ಮೆಲ್ಲರ ವಾಸ.
-
ಧ್ಯಾನಸ್ಥ ಮನಸ್ಸು
ಒಂದಿಂಚೂ ಕದಲಲು ಬಿಡಲಿಲ್ಲ
ರಟ್ಟೆ ಹಿಡಿದು ಅಪ್ಪ ಬೈದು
ಓದುತ್ತ ಕುಳಿತಿರಬೇಕು
ಎಂದು ತಾಕೀತು ಮಾಡಿದಂತೆ.
ಕುಳಿತೆ ಕುಳಿತೆ
ಕಾಲೆಲ್ಲ ಈ ಚಳಿಗೆ
ಮರಗೆಟ್ಟು ಹೋದಂತೆ
ಭಾಸವಾಗಿ ಲಕ್ಷ ಎಲ್ಲೆಲ್ಲೋ ಹೋಗಿ
ಕೊನೆಗೆ ಕುಳಿತ ಕಾರಣ ಮರೆತೆ.
ಸಂಗೀತಾ ಕಲ್ಮನೆ
-
ಓ...ಮಳೆಯೇ
ಆ ದೇವರೂ ನಿನ್ನ
ಸುತಾರಾಂ ಕ್ಷಮಿಸುವುದಿಲ್ಲ
ಯಾಕೆ ಗೊತ್ತಾ....
ಈ ಗಡಗಡ ಚಳಿಯ ಮಳೆಗೆ
ಬಿಸಿಬಿಸಿ ಬಜ್ಜಿ ಬೋಂಡಾ
ಮೆಲ್ಲುವ ಆಸೆ ಹುಟ್ಟು ಹಾಕಿದ್ದಕ್ಕೆ
ಹೇಗೆ ಅಲ್ಲಗಳೆಯಲಿ ಹೇಳು
ವೈದ್ಯರ ಅಂಬೋಣ
ಹೇಗೆ ತಿರಸ್ಕರಿಸಿ ಹೇಳು
ನಾಲಿಗೆಯ ಚಪಲ
ಬಿಡುವಿಲ್ಲದೆ ಅಕಾಲದಲ್ಲಿ
ಸುರಿಯುವ ನಿನಗೆ ಧಿಕ್ಕಾರ 😚
ಸಂಗೀತಾ ಕಲ್ಮನೆ
-