Gangad'Har'$ha .   (ಮನದ ಮಾರ್ದನಿ GangadHar$ha)
47 Followers · 5 Following

Joined 12 February 2019


Joined 12 February 2019
5 FEB 2024 AT 23:54

ಗೆಲ್ಲುವ ಹಂಬಲದಲಿ ಅಹಂಕಾರಿಯಾಗುವ ಬದಲು,
ಸೋತು ಧನ್ಯನಾಗು.!

-


28 MAY 2023 AT 13:48

ಅರ್ಥವಿಲ್ಲದ ಪ್ರಶ್ನೆಗಳಿಗೆ,
ಸಮರ್ಥನೆಯಿಲ್ಲದ ಉತ್ತರಗಳು!?

-


29 AUG 2022 AT 19:00

ಅಂತರಂಗದೊಳು ಅವನ
ಆರಾದನೆಯಿದ್ದಲ್ಲಿ
ಕಂಡದ್ದೆಲ್ಲ ಕೈಲಾಸವೆ.!

-


17 MAY 2022 AT 22:28

ಸಹಾನುಭೂತಿ ತೋರದ ಸಂಬಂಧಗಳು,
ಸದಚಾರವ ಉಪದೇಶಿಸಿದರೇನು ಸುಖ.!?

-


31 OCT 2021 AT 15:07

ಪರದೆ ಮೇಲೆ ನಿನ್ನ ಕಂಡು
ನಕ್ಕಾಗ ನಕ್ಕೆವು,
ಅತ್ತಾಗ ಅತ್ತೆವು,

ಇಂದು ನಿನ್ನ ಮೌನಕೆ
ನಾವೂ ಮೂಕಾದೆವು.!

-


30 OCT 2021 AT 13:00

ನಗು ಮೊಗದಿ ಬಯಸಿದೆ ಎಲ್ಲರ ಹಿತ
ಕರುನಾಡಿಗೆ ಉಣಬಡಿಸಿದೆ ನವರಸದಮೃತ
ಕಲಾದೇವಿ ತನ್ಮಯಳಾದಳು ಕೇಳಿ ನಿನ್ನ ಇಂಪಾದ ಸಂಗೀತ
ಯುವ ಪೀಳಿಗೆಗೆ ನಿನ್ನ ನಡೆ ನುಡಿಗಳಾದವು ನಯ ಸಂಹಿತ
ಕನ್ನಡಾಂಬೆಯಲ್ಲಿ ಮನುಕುಲದೊಂದು ಇಂಗಿತ
ಅಗಲಿದಿಚೇತನದಿಂದ ಈ ನೆಲವಾಗಬೇಕಿತ್ತು ಇನ್ನಷ್ಟು “ಪುನೀತ”

-


28 SEP 2021 AT 22:57

ಜೀವನದ ಎಲ್ಲಾ ಕಟು ಸತ್ಯಗಳ ಅರಿತ ಕ್ಷಣ,
ಹಕ್ಕಿಯಂತೆ ಹಾರುತ್ತಿದ್ದ ಮನ
ಭಾವವಿಲ್ಲದ ಶಿಲೆಯಾಗಿ ನಿಂತಿತು ಮೌನದಲಿ.!

-


8 SEP 2021 AT 17:22

ನಂಬಲಿಲ್ಲ ಕಂಡ ಸತ್ಯಗಳ
ಕೇಳಲಿಲ್ಲ ಅರಿತವರ ಗುಣಗಾನಗಳ
ಹುಸಿ ಮಾತಿಗೆ ಕಂಡೆ ಕನಸುಗಳ
ಕಲ್ಪನೆಯಲ್ಲೂ ನೆನೆಯಲಿಲ್ಲ ಕಲ್ಮಶಗಳ
ಕಾಡಬೇಕಿತು ಅರ್ಥೈಸಿಕೊಳ್ಳಬೇಕಾದ ಗೊಂದಲಗಳ
ವಾಸ್ತವಕ್ಕೆ ಬರಲು ಕಳೆದೆ ಬಹು ಕಾಲಗಳ
ಇಂದು, ಮರೆತಂತೆ ಬದುಕಬೇಕಿದೆ ಕೂಡಿ ಕಳೆದ ನೆನೆಪುಗಳ.!

-


3 SEP 2021 AT 14:22

ನೆನಪುಗಳು ಹಸಿಯಾಗಿದ್ದರೆ,
ಕನಸುಗಳಲ್ಲೂ ಕಾಡದೆ ಬಿಡವು.!

-


12 FEB 2021 AT 14:52

ಕೆಲವೊಮ್ಮೆ ಅತಿಯಾದ ರಿಯಾಯಿತಿಗಳಿಗೆ,
ವಿಪರೀತ ಬೆಲೆ ತರಬೇಕಾಗುತ್ತದೆ.!

ವಸ್ತು ಹಾಗೂ ವ್ಯಕ್ತಿಗಳಿಗೂ ಇದು ಅನ್ವಯ

-


Fetching Gangad'Har'$ha . Quotes