ನಿನ್ನ ನೆನಪಾದಾಗಲೆಲ್ಲ ಕಡಲದಡಿಯಲಿ
ತೆರಳುತ್ತೇನೆ ಗೆಳೆಯ
...
ಸಮುದ್ರತೀರದಲ್ಲಿ ಹೆಬ್ಬಂಡೆಗೆ
ಅಲೆಗಳು ಬಳಸಿಬಂದು ಅದನ್ನಪ್ಪಿದಾಗ
ಬಂಡೆಯ ಮೂಕ ಸಮ್ಮತಿ ನೀಡಿ
ಮಿಲನವಾಗುದನ್ನು ನೋಡಲು!!-
ಎಲ್ಲಾ ಸಂಜೆಗಳನು ಬಾಲ್ಕನಿಯಲಿ ಕೂತು
ನಿನ್ನ ಜೊತೆ ಚಹ ಹೀರುವ
ಹುಚ್ಚು ಆಸೆಯೊಂದಿತ್ತು ಗೆಳೆಯ
,
,
ಪ್ರತಿ ಸಂಜೆ ಕಾಯುತ್ತಿದ್ದೇನೆ ನಿನಗಾಗಿ
,
,
ಚಹ ಆರಿ ಕೆನೆ ಪದರುಗಟ್ಟಿದರೂ....-
ನೀನೇನೊ ಶಾಶ್ವತ ಹೆಜ್ಜೆ ಗುರುತುಗಳನು
ಸಲೀಸಾಗಿ ಮೂಡಿಸಿ ಹೋದೆ,
ನೆನಪುಗಳನ್ನು ಹೊತ್ತು ನಡೆವ ಸಮಯವಿದು,
ಒಬ್ಬಳೇ ಈ ಮರಳುಗಾಡಿನಲಿ
ಸಿಲುಕಿದ ಜೀವನವನ್ನು ಹೇಗೆ ಮೇಲೆತ್ತಿ ನಡೆಯಲಿ...
-
ದಾಂಪತ್ಯದ ಕಡಲಲ್ಲಿ ನಮ್ಮಿಬ್ಬರ ಹೃದಯಗಳು
ಅದೆಂದೊ ವಿನಿಮಯ ಆಗಿದ್ದವು ನೆನಪಿದೆಯಾ ನಲ್ಲ,
ನಿನ್ನಗಲಿಕೆಲಿಯಲಿ ಶವವಾಗಿದ್ದು
ನನ್ನ ಹೃದಯವಲ್ಲವೆ ಇನಿಯ,
,
,
ದಡ್ಡ ಜನ ನಿನ್ನಹೆಸರೇಳಿ ಮರಗುತ್ತಿದ್ದಾರೆ
ಹೇಗೆ ಹೇಳಲಿ ನಾನು ಹಾರಿ ಹೋಗಿದ್ದು ನನ್ನಾತ್ಮವೆಂದು
ನೀನಿನ್ನೂ ಜೀವಂತವಾಗಿರುವೆ ನನ್ನೆದೆಯಲ್ಲಿ,
ನಿನ್ನ ಸಾವಿನಲ್ಲಿ ನಾನೂ ಪಾಲುದಾರಳು...-
ನಿನ್ನನ್ನು ಮರೆಯಬೇಕೆಂದು ಗೋಡೆ
ಕಟ್ಟುತ್ತಿರುವಾಗ,
ನಿನ್ನ ನೆನಪುಗಳು ಪ್ರತಿ ಬಾರಿ
ಹೊಸ ತಂತ್ರಜ್ಞಾನ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ
ಲಗ್ಗೆ ಇಟ್ಟು ಗೋಡೆ ಒಡೆದು,
ಪತಾಕೆ ಹಾರಿಸಿಯೇ ಬಿಡುತ್ತವೆ!!!-
#ನೆಲಹಾಸು ಹಾಗೂ ಛಾವಣಿ ಒಟ್ಟಿಗೆ ಸಂಸಾರ ಮಾಡ್ತಿದ್ವು #
ನೆರಳಾಗಿದ್ದೇನೆ ಎಂಬ ಗರ್ವದ
ಛಾವಣಿಯ ಚುಚ್ಚು ಮಾತು ಸಹಿಸಲಾಗದೆ,
ಬೇಸತ್ತ ನೆಲಹಾಸು, ಆತ್ಮ ಹತ್ಯೆ ಮಾಡಿಕೊಂಡಿತು!
,
ಕಥೆ ಮುಗಿಯಿತು!
ಇಬ್ಬರದೂ !!-
ವಿರಹದ ನೋವುಗಳಿಗೆ
ಅದ್ಯಾರು ರೆಕ್ಕೆ ಕಟ್ಟಿ ಬಿಡುತ್ತಾರೋ
ಈ ಇಳಿಸಂಜೆಯಲ್ಲಿ...
:
ಅಲ್ಲಿ ಪಡೆದುಕೊಂಡವರಿಗಿಂತ
ಕಳೆದುಕೊಂಡವರ ಹೃದಯನೇ
ಜಾಸ್ತಿ ಅರಳುವುದು!!-