ಒತರಾನೇ ಎದ್ದು
ನೇಸರ ನೆತ್ತಿಗೆ ಬರೋ ಹೊತ್ತಿಗೆ
ಗಾವನಾಗಿ ಒಂದೂವರೆ ಕಟ್ಟಿಗೆ ಮಾಡಿ,
ತನ್ನೆಲ್ಲಾ ಮನೆಯ ಕಾರ್ಯ ಮುಗಿಸ್ಕೊಂಡು
ಮತ್ತೆ ಕೂಲಿಗೆ ಹೋಗಿ ಬರುವ ಈ ಜೀವಕೆ...
ಪುರುಸತ್ತಂಬುದೇ ಇಲ್ಲಾ....-
ನಮ್ಮ ಅವ್ವ ಕಣದಾಗ ನಿಂತ್ಕೊಂಡು
ಹುಲಿಗ್ಯಾ, ಹುಲಿಗ್ಯಾ ಅಂತೇಳಿ
ರಾಶಿ ಮಾಡ್ತಿದ್ರ ಆಕಿ.....
ಗುಣಗಾನವ ಹೇಳಾಕ ಸಾಲದು...-
ಎಲ್ಲಿದಾನೋ ನನ್ನಾತ
ನನ್ ಕೈಯನ್ನ ಅವನ ಕೈಗೆ ಕೊಟ್ಟು
ನನ್ ಬ್ಯಾಗ್ನ ಅವನ ಹೆಗಲಿಗೆ ಸಿಗಾಕಿ
ಓಣ್ಯಾಗ ನೆಡ್ಕೊಂತ ಹೋಗಿತಿದ್ರ
ಅದರ ಗತ್ತೇ ಬೇರೆ....😄-
ಹೇಯ್ ನಿಸರ್ಗ
ವಟ್ಟಾ ಬ್ಯಾಸ್ರ
ಎಂಬುದೇ ಇಲ್ಲಾ ನೋಡ್ ನಿಂಗ
ಸಾಕ್ ಎನಿಸಿದಾಗ ಒಣಗ್ತೀಯ
ಮತ್ತೆ ಚಿಗುರತೀಯಾ
ನೀನ್ ನೋಡಿ ಕಲಿಯೋದು ಬಾಳ್ ಐತೆ 🥰...-
ಲೋ ನಮ್ಮೂರು
ಜಾತ್ರೆ ಒಳಗ ನೀ ಹಿಂಗ್ ಕೈ
ಹಿಡ್ಕೊಂಡು ಹೊಂಟ್ರೆ
ಎಲ್ಲರೂ, ನೋಡಂಗ ಕೇಳಂಗ
ಶಬ್ದ ಮಾಡ್ಕೊಂತ ಬರ್ಬೆಕ್ ಅನ್ಸುತ್ತೆ...-
ಲೇ ಜಿಬುಕ
ಎಲ್ಲಾ ಬಾಯಿಬಿಟ್ಟು
ಹೇಳ್ಬೇಕೆನು...
ಪಿರೂತಿ ಮಾಡಕತ್ತು
ವರ್ಷಗಳೇ ಕಳೆದ್ವು
ಒಂದಾದ್ರು ನೆನಪಿಗೆ
ಡ್ರೆಸ್ ಕೊಡ್ಸಿಯೇನು 🙄
ಬರೀ ನಿಂಗ ಅವು ಚಂದ ಕಾಣ್ತಾವು,
ಇವು ಚಂದ ಕಾಣ್ತಾವು....
ಅನ್ನೋದೇ ಆಯ್ತು ನೋಡ್ ನಿಂದು...🙄-
ಆರಂಭದಲ್ಲಿ ಮಾತೇ ಬರಲ್ಲ
ಮಾತಡ್ಕೊಂತ ಕೂತ್ರೆ
ಮಾತೇ ಮುಗಿಯಲ್ಲ
ಆದ್ರೂ ಏನೇ ಹೇಳು
ಚಂದ ಅಲಾ..... 😍-
ಲೇ ಬಟ್ಟಲುಗಣ್ಣವಳೇ,
ನಿನ್ ಮಾತುಗಳನ್ನ ಕೇಳದೆ
ಕಿವಿಗಳು ಮಂಕಾಗಿಬಿಟ್ಟಾವು
ಎಷ್ಟೊಂದ್ ದಿನ ಆಯ್ತು....😕
ನಗುಮೊಗದ ಮೊಗ್ಗುರಳುವುದನ್ನು ನೋಡಿ....!-
ಒಲವ ಭಯವಾಗಿದೆ, ನಲ್ಲ
ಅವಿತು ಕೂತುಬಿಡಲಾ
ನಿನ್ನ ಮನದೊಳಗೆ.....
ಯಾರಾದ್ರೂ ಕೇಳಿದ್ರೆ ಹೇಳಿಬಿಡು
🤫...ನನ್ನಾಕೆ ಒಲವ ನಿದ್ರೆಯಲ್ಲಿ,
ಮುಳುಗಿಹಳೆಂದು.....!-
ಮತ್ತೇನ್ ಬ್ಯಾಡ ನೋಡ್
ನಿನ್ ಎದಿಗೆ ಕಿವಿ ಕೊಟ್ಟುಕಾಸಿ
ಮನ್ಸು ಹೇಳುವ....
ಮಾತ್ ಗಳನ್ನ ಕೇಳ್ತಿದ್ರ
ನನ್ನೆಲ್ಲಾ ನೋವು ಅರೆಕ್ಷಣದಲ್ಲಿ
ಅಳಕಿಸಿಬಿಡ್ತಾವು....!-