ಶಿಶುಗೀತೆ..

ಬಣ್ಣದ ಚಿಟ್ಟೆ..!!

ಬಣ್ಣ ಬಣ್ಣದ ಚಿಟ್ಟೆಯೆ ಕೇಳು
ನನ್ನಯ ಪ್ರಶ್ನೆಗೆ ಉತ್ತರ ಹೇಳು
ಯಾರು ಕೊಟ್ಟರು ನಿನಗೆ
ಬಣ್ಣಗಳಾ ಬಹುಮಾನ !

ನಿನ್ನಯ ರೆಕ್ಕೆ ಹಾರಲದಕ್ಕೆ
ಹೇಳಿಕೊಟ್ಟವರಾರು ?
ವಿಧ ವಿಧ ಹೂಗಳ ಸಂಗವ ಮಾಡಲು
ತಿಳಿಸಿ ಕೊಟ್ಟವರಾರು ??

ಹಗಲು ರಾತ್ರಿ ಚಳಿಯೋ ಮಳೆಯೋ
ನಿನ್ನ ವಸತಿಯು ಎಲ್ಲಿ ?
ಚಳಿಯಾದಾಗ ಮಳೆಬಂದಾಗ
ಬಂದು ಬಿಡು ನೀನಿಲ್ಲಿ !

ನಿನ್ನಯ ರೆಕ್ಕೆ ಸ್ವಲ್ಪ ದಿನಕ್ಕೆ
ನನಗೆ ಕೊಡುವೆಯೇನು ?
ನಿನ್ನಾ ಹಾಗೆ ಹಾರುತ ನಾನೂ
ಜೇನ ಹೀರಿ ಬರುವೆನು !!

- ದೇವರಾಜ್ ನಿಸರ್ಗತನಯ