ನೋವೆಲ್ಲಾ ತಾನು ತಗೊಂಡು, ಸಂತೋಷ ಮಾತ್ರ ನಮಿಗೆ ಕೊಡೋದು ಅಪ್ಪ,
ತಾನು ಜಗತ್ತನ್ನ ನೋಡದೆ ಇದ್ರು ,ನಮಿಗೆ ಇಡೀ ಜಗತ್ತನ್ನೇ ತೋರಿಸೋದು ಅಪ್ಪ,
ತಾನು ಸೋತು ನಮ್ಮನ್ನ ಗೆಲ್ಲಿಸೊದು ಅಪ್ಪ,
ತನ್ನ ಆಸೆಯನ್ನ ಪಕ್ಕಾಕ್ಕಿಟ್ಟು ,ನಮ್ಮ ಕನಸ್ಸುಗಳನ್ನ ನೆರವೇರಿಸೊದು ಅಪ್ಪ,
ಕೊನೆವರೆಗೂ ನಮಗಾಗಿ ಬದುಕೊ ಜೀವ ಅಪ್ಪ...
-
ಜಗತ್ತಲ್ಲಿ ಇರೋ ಎಲ್ಲಾ ಖುಷಿಯನ್ನು ನಮಗೆ ಕೊಟ್ಟು ನೋವನ್ನ ಮಾತ್ರ ತಾನು ತಗೊಂಡು,
ನಮ್ಮ ನಗುವಲ್ಲೆ ತನ್ನ ಸಂತೂಷವನ್ನ ಕಾಣುತ್ತ, ಏನೆ ಕೆಳಿದರು ಇಲ್ಲ ಅಂದೇ ಕೊಡಿಸೊ ಮನಸ್ಸು,
ತನಗಾಗಿ ಅಂತ ಏನು ಮಾಡ್ದೇ, ಎಲ್ಲಾವನ್ನು ನಮಗಾಗಿ ಮಾಡೊ ನಿಸ್ವಾರ್ಥ ಜೀವವೇ ಅಪ್ಪ
-
ಸುಳಿವೇ ಸಿಗದಂತೆ ನನ್ನ ಮನಸನ್ನು ಕದ್ದೇ ನೀನು,
ಪ್ರೀತಿಯ ಗುಂಗಿನಲ್ಲಿ ತೆಲಾಡುತಿರುವೆ ನಾನು,
ಏಳೆಳು ಜನುಮಕು ನನಗೇ ಸ್ವಂತ ನೀನು...
-Amity-
ಜೊತೆಯಲ್ಲಿ ಇರ್ತೀನಿ ಆಂದವರೆಲ್ಲ ಬಿಟ್ಟು ಹೋಗಿದ್ದಾಗಿದೆ
ಅವರಿಲ್ಲ ಅಂದ್ರು ಅವರ ನೆನಪು ಸದಾ ಇರುತ್ತೆ
ಇನ್ನು ಯೋಚನೆ ಮಾಡಿ ಎನ್ ಪ್ರಯೋಜನ...
-Amitysonu-
ಕೆಲವೊಮ್ಮೆ ಮನಸ್ಸಿಗೆ ನೋವಾಗಿದ್ರು ,
ಆಗಿಲ್ಲಾ ಅನ್ನೋ ತರ ನಾಟಕ ಮಾಡೋದು ಅನಿವಾರ್ಯ ಆಗಿಬಿಡುತ್ತೆ....
-Amitysonu-
ಮನುಷ್ಯರೆ ನಮಗೂಸ್ಕರ ಕಾಯೋದಿಲ್ಲ,
ಇನ್ನು ಸಮಯ ನಮಗೋಸ್ಕರ ಕಾಯುತ್ತ,
ಇದ್ದಾಗ ಬೆಲೆ ಕೊಡದೇ ಮುಗಿದೋದಮೇಲೆ
ಯೋಚನೆ ಮಾಡಿದ್ರೆ ಎನ್ ಪ್ರಯೋಜನ.....
-Amitysonu-
Sometimes don't expect just accept the things, because pre-planned doesn't work in life it's all about unpredictable...
-Amitysonu-
ಕನಸ್ಸುಗಳಿವೆ ಇನ್ನೂ ಮುಗಿಲಷ್ಟು,
ಆಸೆಗಳ ಮೇಲೆ ನೀರಾಸೆಯ ಪರದೆಯು ಬಿದ್ದಾಗಿದೆ,
ಇನ್ನು ಮುಗಿಯಲಾರದ ಬೇಸರವಷ್ಟೆ.....
-Amity
-
ಜೊತೆಯಿರಲು ನೀನು
ಕಂಡೆ ಸ್ವರ್ಗವ ನಾನು,
ನೀನೆ ಕಲಿಸಿದೆ ಪ್ರೀತಿಯ ಅರ್ಥವು,
ಬದುಕಿನ ಪಯಣಕೆ ನೀನಾದೆ
ಸಂತೋಷದ ದೀಪವು
ಇನ್ನೇನು ಬೇಕು ನನಗೆ
ನೀ ನನ್ನ ಸೇರಿದಾಕ್ಷಣವೇ
ಜಗದ ಖುಷಿಯಲ್ಲ ನನ್ನ ಪಾಲಾಗಿದೆ..
Amity-
ಅರಿಯದೇ ಬಂದ ಪ್ರೀತಿಗೆ
ಮನಸೋತ ಹೃದಯ ,
ಜೊತೆಯಲೇ ಕೊನೆಯ ತನಕ
ನಿನ್ನೊಡನೆ ಸಾಗುವ ಪಯಣ
ಅತ್ಯಂತ ಸುಂದರ ....
Amity-