‘ನಾನು ಸ್ವಾರ್ಥಿ ಅಲ್ಲಾ..’
ನನ್ನ ಆಯಸ್ಸು ಇರೋವರೆಗೂ ನಿನ್ನ ಪ್ರೀತಿಬೇಕು
ಅಂತ ಕೇಳೋ ಸ್ವಾರ್ಥಿ ನಾನಲ್ಲ..
ನಿನ್ನ ಪ್ರೀತಿ ಇರೋವರೆಗೂ ನನ್ನ ಆಯಸ್ಸು ಇರಲಿ
ಅಂತ ಕೇಳೋ ನಿಸ್ವಾರ್ತಿ ನಾನು…-
ಮನದಾಳದ ಭಾವವ
ಸಾರಿ ಸಾರಿ ಹೇಳಲು
ನಿಮ್ಮ ಹ್ರದಯ ಸೇರಲು
ಸೇರಿಸಿರುವೆನಿಲ್ಲಿ ಭಾವ ಸಾಗರ
ನನ್ನ ನಾಮಧೇ... read more
ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ..
ಜಗವನ್ನೇ ಮರೆತ ನನಗೆ ನಿನ್ನನ್ನು ಮರೆಯಲಾಗಲಿಲ್ಲ…-
ಅಕ್ಷರವಾಗಿದ್ದರೆ ನಿನ್ನನ್ನು ಅಳಿಸಿ ಹಾಕುತಿದ್ದೆ,
ಹಾಳೆಯಾಗಿದ್ದಾರೆ ನಿನ್ನನ್ನು ಹರಿದು ಬಿಡುತಿದ್ದೆ,
ನೀರಾಗಿದ್ದರೆ ನಿನ್ನನ್ನು ಆವಿಯಾಗಿಸುತಿದ್ದೆ,
ನನ್ನ ಹೃದಯವು ಆಗಿದ್ದರೆ ನಿನ್ನನ್ನು ಕಿತ್ತೆಸೆಯುತ್ತಿದ್ದೆ,
ನಾಡಿಯಾಗಿದ್ದರೆ ನಿನ್ನನ್ನು ನಿಲ್ಲಿಸುತ್ತಿದ್ದೆ,
ಕೈ ಕಾಲು ಕಣ್ಣು ಆಗಿದ್ದರೇ ದಾನ ಮಾಡುತ್ತಿದ್ದೆ
ಏನು ಮಾಡಲಿ ನಾನು.,
ಮರೆಯದ ನೆನಪಾಗಿ ಉಳಿದುಬಿಟ್ಟೆ ನೀನು…-
Sow a thought and reap an Action,
Sow an action and reap a habit,
Sow a habit and reap a character,
Sow a character and reap a Destiny..-
ಬಾರದ ನಿದ್ದೆಯಲ್ಲಿ
ನಿನ್ನದೇ ನೆನಪುಗಳು..
ಅಪ್ಪಿ ತಪ್ಪಿ ಬಂದ ನಿದ್ದೆಯಲ್ಲೂ
ನಿನ್ನದೇ ಕನಸುಗಳು..
ನನ್ನ ಈ ನಿಷ್ಕಲ್ಮಶ ಪ್ರೀತಿಯ ಅರಿತುಕೋ..
ನನ್ನನ್ನು ನಿನ್ನಲ್ಲಿ ಬೆರೆಸಿಕೋ..
ಮೌನದಿ ನನ್ನವಳು ಶ್ರೀನಿಧಿ..
ಮೌನದಿ ನನ್ನವಳು ಶ್ರೀನಿಧಿ..-
ನನ್ನ ತೊರೆದು ಹೋದೆ ನೀನು
ಮಾಡಿ ನನ್ನ ಮನಸ್ಸು ಕಲ್ಲು..
ನಿನ್ನ ಪ್ರೀತಿಯ ಸವಿನೆನಪಿನಿಂದ
ಶಿಲೆಯಾಯ್ತು ಆ ಮನಸೆಂಬ ಕಲ್ಲು..
ಚೆಲ್ಲಿಬಿಡು ಮತ್ತೊಮ್ಮೆ ಪ್ರೀತಿಯೆಂಬ ಚೆಲುವು..
7 ಜನುಮವಾದರು ಬಾಡುವುದಿಲ್ಲ ನನ್ನ ಪ್ರೀತಿಯ ಹೂವು…-
ಬೇಕು ನೀ ನನ್ನೀ ಜೀವಕೆ..
ನನ್ನ ಕನಸುಗಳಿಗೆ ಪ್ರೋತ್ಸಾಹಕಿಯಾಗಿ..
ನನ್ನ ಬಲಾಢ್ಯಕ್ಕೆ ಕಾರಣವಾಗಿ..
ಬೇಕು ನೀ ನನ್ನೀ ಜೀವಕೆ..
ಏಳೇಳು ಜನುಮಕೆ…-
ತಾಯಿ ಇಲ್ಲದೇ ಮನೆಯಲ್ಲಿ
ಅಂಗಿಯೇ ಸಿಗುವುದಿಲ್ಲ.,
ಇನ್ನು ಜೀವನದಲ್ಲಿ
ನೆಮ್ಮದಿಯಲ್ಲಿ ಸಿಗುವುದು..!!-
“ಓ ಗೆಳತಿ ನೀನಾದೆ ನನ್ನೀ ಜೀವದ ಒಡತಿ..
ನಿನ್ನೀ ಧ್ವನಿ ಕೇಳಲು ಆತೊರೆಹಿತು ನನ್ನೀ ಮನ..
ಆದಕ್ಕಾಗಿ ಮಾಡಿದೆ ದೂರವಾಣಿಯ ಕರೆ,
ನಿನ್ನೀ ಧ್ವನಿ ಕೇಳಿ ಅದೇ ನಾನು ನಿನ್ನ ಸೇರೆ..
ಪ್ರೀತಿ ಪ್ರೇಮ ಪ್ರಣಯ ಎಂದು ನಡಿಯತ್ತಿತ್ತು ಪ್ರೀತಿಯ ಯಶಸ್ಸು,
6 ವರ್ಷದ ನನ್ನೀ ಪ್ರೀತಿಗೆ ಆಯಿತು ಆಯಸ್ಸು..
ಅನಿಸಿತು ನನಗೇ ಇದು ಕನಸೋ ನನಸೋ,
ಕನಸಲ್ಲಿ ಕಂಡವಳು,ನನಸಲ್ಲಿ ಮರೆಯಾದಳು..
ಓ ಗೆಳತಿ ನೀನಾಗಿದ್ದೆ ನನ್ನೀ ಜೀವದ ಒಡತಿ
ಎಂದೆಂದಿಗು ನೀನೆ ನನ್ನ ಒಲವಿನ ಒಡತಿ….-
ಬದುಕೊಂದು ನೋವುಗಳ ಸಂತೆ,
ಕತ್ತಲಾದರೆ ಬೆಳಕಿನ ಚಿಂತೆ..
ಬೆಳಕಾದರೆ ಕತ್ತಲಿನ ಚಿಂತೆ..
ಮಳೆ ಬಂದರೆ ಬಿಸಿಲಿನ ಚಿಂತೆ,
ಬಿಸಿಲಾದರೆ ನೆರಳಿನ ಚಿಂತೆ..
ಎಲ್ಲವೂ ಆಗಬೇಕು ಇವನೆಚ್ಚೆಯಂತೆ..
ನಾಟಕ ಇವನದು ಭಗವಂತನಿಗೂ ಬಣ್ಣ ಹಚ್ಚಿದಂತೆ..
ಅರಳಿ ಬಾಡುವುದು ಹೂವು ನೋವಾಗದಂತೆ,
ನೀನೇಕೆ ನರಳುವೆ ಇದ್ದರೂ ಇಲ್ಲದಂತೆ..
ನಗುತಿರು ನೀನು ಯಾವಾಗಲೂ,
ತಿಳಿದಿರಲಿ ನಿನಗಿದು
ನಾಲ್ಕು ದಿನದ ಸಂತೆ, ನಾಲ್ಕು ದಿನದ ಸಂತೆ..-