ಎನ್ನ ಕನ್ನಡ
ಎನ್ನ ಭವ್ಯ, ದಿವ್ಯ ಕನ್ನಡ,
ಸಂಸ್ಕೃತಿಯ ಕಾನ-ಬನಗಳ
ಸುಂದರ ಕಾಂಡ ||
ಎನ್ನ ಸವಿ, ಛವಿ ಕನ್ನಡ,
ಹಚ್ಚುಹಸಿರಿನ ಹಂದರ
ಸಿರಿಸಂಪತ್ತಿನಅಂಬರ-ಮೋಡ ||
ಎನ್ನ ಅಂದ, ಛಂದದ ಕನ್ನಡ,
ರನ್ನ, ಪೊನ್ನ, ಜನ್ನರ,
ಜ್ಞಾನಪೀಠದ ಕುವೆಂಪು, ಬೇಂದ್ರೆ,
ಕಾರ್ನಾಡ ರೆಂಟರ ಹೊನ್ನುಡಿ||
ಎನ್ನ ನಿರುತದ ಕನ್ನಡ,
ಕಾವೇರಿ,ಗೋದಾವರಿ,
ತುಂಗೆ,ಕೃಷ್ಣೆಯರ
ಚೆಲುವ ನೋಡ||
ಎನ್ನ ಸುಕೃತದ ಕನ್ನಡ,
ನಾಡ ತಾಯಿ ರಾಜ ರಾಜೇಶ್ವರಿ ಕದಂಬ,ಗಂಗ,ಹೊಯ್ಸಳರ ಮುಕುಟ
ರಾಜರ ನಡೆ ನೋಡ||
ಎನ್ನ ವೈಭವದ ಕನ್ನಡ,ಗೊಮ್ಮಟ,
ಅರಮನೆ , ಬಸದಿ, ಚಿತ್ರದುರ್ಗದ ಕೋಟೆ ಮನಸೆಳೆವ ಗಜಪಡೆ ನೋಡ||
ಎನ್ನ ಸುಭಾಷಿತ ಕನ್ನಡ, ದ್ರಾವಿಡರ
ಬಳಗದ ಲಿಪಿರಾಣಿ, ಸಹಸ್ರಾರು
ವರುಷಗಳ ಗಂಧದಗುಡಿ ನೋಡ||
-